ಇಂದು ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ವಿದ್ಯಾರಣ್ಯಪುರಂ ನ ಕಚೇರಿಯಲ್ಲಿ ಈ ಮೋಟಾರ್ಸ್ ಹಾಗೂ ಸೋಲಾರ್ ಗೆ ಸಂಬಂಧಿಸಿದಂತೆ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ನಾವು ಮೋದಿ ಯುಗ ಉತ್ಸವದಲ್ಲೇ ಸೋಲಾರ್ ರೂಫ್ ಟಾಪ್ ನ ಸೂರ್ಯ ಪಥ್ ಯೋಜನೆ ಯನ್ನು ರೂಪಿಸಿದ್ದೆವು ಹಾಗೂ ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಭೆಯನ್ನೂ ಸಹ ನಡೆಸಿದ್ದೆವು ಇದಕ್ಕೆ ಸಂಬಂಧಿಸಿದ ಜಿ.ಎಸ್.ಟಿ ವಿಚಾರಗಳು , ಸಬ್ಸಿಡಿಯನ್ನು ಹಾಗೂ ಪಾಲಿಸಿ ಬಗ್ಗೆ ನಾವು ಚರ್ಚಿಸಿ ಕೊಟ್ಟಿದ್ದೆವು ಅದನ್ನು ಕೇಂದ್ರ ಸರ್ಕಾರದವರು ಬಜೆಟ್ ನಲ್ಲಿ ಜಾರಿಗೆ ಕೊಡುವ ದೃಷ್ಟಿಯಿಂದ ನೀಡಿದ್ದೆವು

ಶೇ.60 ಕ್ಕಿಂತ ಹೆಚ್ಚಿನ ಅಂಶಗಳನ್ನು ನಾವು ನೀಡಿದ್ದನ್ನು ಅನುಷ್ಠಾನಕ್ಕೆ ತಂದಿರುವುದು ಸಂತಸದ ವಿಷಯ ಹಾಗೂ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೂ ಕೂಡಾ ಯಾವ ರೀತಿ ಸಹಕಾರ ಮತ್ತು ಪಾಲಿಸಿಯಲ್ಲಿ ಬದಲಾವಣೆ ಬಗ್ಗೆ ಚರ್ಚೆ ಮಾಡಿದ್ದೆವು ಇದರ ವಿಷಯವಾಗಿ ರಾಜ್ಯ ಸರ್ಕಾರವೂ ಕೂಡಾ ಒಂದು ಹೆಜ್ಜೆ ಮುಂದೆ ಇಟ್ಟಿರುವುದು ಸ್ವಾಗತಾರ್ಹ.
ನಮ್ಮ ಕ್ಷೇತ್ರದಲ್ಲಿ ಸೂರ್ಯ ಪಥ್ ಯೋಜನೆ ಅಡಿಯಲ್ಲಿ 5 ಸಾವಿರ ಮನೆಗಳಿಗೆ ಸೋಲಾರ್ ರೂಫ್ ಟಾಪ್ ಅನ್ನು ಅಳವಡಿಸುವವರಿದ್ದೇವೆ, ಕ್ಷೇತ್ರದ 4 ಕಡೆಗಳಲ್ಲಿ ಸಭೆಗಳನ್ನು ಕರೆದು ಆಯಾ ಸ್ಥಳೀಯ ನಿವಾಸಿಗಳನ್ನು ಕರೆದು ಈ ಯೋಜನೆ ಬಗ್ಗೆ ವಿವರಿಸಲು 4 ಹಂತಗಳ ಸಭೆ ಮಾಡಲಾಗುತ್ತಿದ್ದು ಮೊದಲ ಹಂತದ ಸಭೆಯನ್ನು ಮಾರ್ಚ್ 06 ನೇ ತಾರೀಖಿನಂದು ಬೆಳಗ್ಗೆಯಿಂದ ಸಂಜೆಯವರೆಗೂ ನಡೆಸಿದ್ದೇವೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವಾರಾಜ್ ಬೊಮ್ಮಾಯಿ ಅವರಿಗೂ ಸಹ ಈ ಬಾರಿ ಬಜೆಟ್ ನಲ್ಲಿ ಸೋಲಾರ್ ಗೆ ಸಂಬಂಧಿಸಿದಂತೆ ಯೋಜನೆ ನೀಡಲು ಕೋರಿದ್ದೇವೆ.
ಈ ವಾಹನಗಳನ್ನು ಮೈಸೂರಿನಲ್ಲಿ ಉತ್ತೇಜಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರ ಜೊತೆಯಲ್ಲಿ ಸಭೆಯನ್ನು ನಡೆಸಿದ್ದೇವೆ, ಮೈಸೂರು ನಗರದಲ್ಲಿ ಈ ವಾಹನಗಳಿಗೆ ಬೇಕಾದ ಚಾರ್ಜಿಂಗ್ ಪಾಯಿಂಟ್ ಅನ್ನೂ ಕೂಡಾ ಮಾಡಲು ಯೋಜನೆ ತಯಾರಿಸಿದ್ದೇವೆ ಹಾಗೂ ಕಂಪನಿಗಳ ಜೊತೆ ಮಾತನಾಡಿದ್ದೇವೆ. 22 ಫೆಬ್ರವರಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಬಳಿಯಲ್ಲಿ ಈ ವಿಷ್ಯವಾಗಿ ಇನ್ನಷ್ಟು ಚರ್ಚೆ ಮಾಡಲು ಸಮಯ ನೀಡಿದ್ದಾರೆ, ಅಲ್ಲಿ ಹೆಚ್ಚಿನ ಮನವಿಗಳನ್ನು ಹಾಗೂ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಸದರಿ ಸಭೆಯಲ್ಲಿ ಟಿವಿಎಸ್ ನ GM ಆದ ಸದ್ಗುರು ಅವರು, ಟಾಟಾ ಮೋಟಾರ್ಸ್ ನ ಮೇದಪ್ಪ ಅವರು, ರಘು ಅವರು ಇನ್ನಿತರರು ಹಾಜರಿದ್ದರು.