
ಚಾಮರಾಜನಗರ: ಅಧಿಕಾರಿಗಳು ಒತ್ತಡದಿಂದ ಹೊರ ಬರಲು ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಒತ್ತಡ ನಿವಾರಣೆಗಾಗಿ ಆಯೋಜಿಸಿರುವ ಧ್ಯಾನೋತ್ಸವ ಧ್ಯಾನ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಜೀವನದಲ್ಲಿ ದಿನನಿತ್ಯ ಯೋಗಾಭ್ಯಾಸ ಮಾಡಬೇಕು. ಯೋಗ ಹಾಗೂ ಧ್ಯಾನದಿಂದ ಅನುಭವಗಳಾಗುತ್ತದೆ. ದಿನನಿತ್ಯದ ಕೆಲಸ ಹಾಗೂ ಮನೆಗಳಲ್ಲಿನ ಒತ್ತಡವು ಇರುತ್ತದೆ. ಮೊದಲು ಯೋಗದ ಮೂಲಕ ದೇಹವನ್ನು ದಂಡಿಸಬೇಕು. ಆ ಬಳಿಕ ಕೆಲ ನಿಮಿ? ಧ್ಯಾನ ಮಾಡಿದರೆ ಮನಸ್ಸು ಏಕಾಗ್ರತೆಯಿಂದ ಇರಲು ಸಾಧ್ಯ. ಧ್ಯಾನದಲ್ಲಿ ಕುಳಿತಾಗ ಹಲವು ಯೋಚನೆಗಳು ಬರುತ್ತವೆ. ಅದರ ಬಗ್ಗೆ ಗಮನ ನೀಡದೇ ದೂರ ಇರಿಸಬೇಕು ಎಂದರು. ನಮ್ಮಲ್ಲಿ ಉಂಟಾಗುವ ಯೋಚನೆಗಳ ಬಗ್ಗೆ ನಾವೇ ನಿರ್ಧಾರಕ್ಕೆ ಬರಬಾರದು. ಧ್ಯಾನದಲ್ಲಿ ಮಗ್ನರಾಗಿ ಒತ್ತಡಗಳನ್ನು ನಿವಾರಣೆ ಮಾಡಿಕೊಳ್ಳಬೇಕು. ಮುಂದಿನ ಕೆಲ ದಿನಗಳ ಕಾಲ ಬೆಳಗ್ಗೆ ಹಾಗೂ ಸಂಜೆ ಕೂಡ ಧ್ಯಾನೋತ್ಸವವನ್ನು ಆಯೋಜನೆ ಮಾಡಲಾಗುತ್ತಿದೆ. ಇಲಾಖೆಗಳಲ್ಲಿ ಕೆಲಸ ಮಾಡುವ ನೌಕರರು ಭಾಗವಹಿಸಲು ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್ ಅವರು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯ ನೋಡಲ್ ವೈದ್ಯಾಧಿಕಾರಿ ಡಾ. ಮಹೇಶ್ ಮಾತನಾಡಿ, ಎಲ್ಲರಿಗೂ ಒತ್ತಡಗಳಿರುತ್ತದೆ. ಅದರ ನಿವಾರಣೆಗೆ ಅವರದೇ ಆದ ವಿಧಾನಗಳನ್ನು ಕಂಡುಕೊಂಡಿರುತ್ತಾರೆ. ಕರ್ತವ್ಯ ಸಮಯದಲ್ಲಿ ಒತ್ತಡ ನಿವಾರಣೆ ಮಾಡಿಕೊಳ್ಳುವ ವಿಧಾನ ಕಲಿಯಬೇಕು. ಅತ್ಯಂತ ಒತ್ತಡ, ಕೋಪ, ಖಿನ್ನತೆ ಆದಾಗ ಧ್ಯಾನವನ್ನು ಅಭ್ಯಾಸ ಮಾಡಬೇಕು. ಸರ್ಕಾರಿ ಅಧಿಕಾರಿಗಳು ನೌಕರರು ಧ್ಯಾನ ಅಭ್ಯಾಸ ಮಾಡುವುದು ಒಳಿತು ಎಂದು ಹೇಳಿದರು.

ಹಾರ್ಟ್ ಫುಲ್ ನೆಸ್ ಸ್ವಯಂ ಸೇವಾ ಸಂಸ್ಥೆಯ ಮಧುಸೂಧನ್, ಪ್ರಸನ್ನಕೃಷ್ಣ ಧ್ಯಾನ ಕುರಿತು ತಿಳಿಸಿಕೊಟ್ಟರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಶಿವಕುಮಾರ್, ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕರಾದ ಡಾ. ಸಂತೋ? ಕುಮಾರ್, ಉಪವಿಭಾಗಾಧಿಕಾರಿ ಗಿರೀಶ್ ದಿಲೀಪ್ ಬದೋಲೆ ಸೇರಿದಂತೆ ಇತರರಿದ್ದರು.
