ಮೈಸೂರು :12 ಇತಿಹಾಸ ಪ್ರಸಿದ್ದ ಕೋಟೆ ಮಾರಮ್ಮನ ಮಾರಿಹಬ್ಬ ಜಾತ್ರೆ ಸುಮಾರು ಪುರಾತನ ವರ್ಷಗಳಿಂದ ನೆಡೆದುಕೊಂಡು ಬರುತ್ತಿರುವ ಜಾತ್ರ ಉತ್ಸವ ಸಡಗರ ಎದ್ದುಕಾಣುತಿತ್ತು.ನಗರದ ನಿವಾಸಿಗಳು ಮನೆಗಳಿಗೆ ತಳಿರು ತೋರಣಗಳಿಂದ ಕಳೆತಂದಿದ್ದು ಹಬ್ಬದ ವಾತವರಣ ಮನೆಮಾಡಿತು.
ಸುಣ್ಣದಕೇರಿ ಗಂಗ ಮತಸ್ಥರ ಬೀದಿಯಲ್ಲಿ ಸಿದ್ದಪಾಜಿ ದೇವಸ್ಥಾನದಿಂದ ಮೈಸೂರಿನ ಅರಮನೆಯ ಶ್ರೀ ಕೋಟೆ ಮಾರಮ್ಮನ ದೇವಸ್ಥಾನದ ವರೆಗೂ ಉರಿಬಿಸಿಲಿನಲ್ಲಿಯು ನೂರಾರು ಮಂದಿ ಮಹಿಳೆಯರು ಯುವತಿಯರು ಮಾರಿಗುಡಿ ದೇವಸ್ಥಾನದವರೆಗೂ ಕಾಲನಡಿಗೆಯಲ್ಲಿ ತಂಬಿಟ್ಟು ಒತ್ತುಕೊಂಡು ಸಾಗುತ್ತ ಎಲ್ಲಾರ ಗಮನ ಸೆಳದರು.ಜಾತ್ರೆಯಲ್ಲಿ ಕುಲದ ಯಜಮಾನರು ಜೋಗಪ್ಪ ಅಧ್ಯಕ್ಷರು ಗೋಪಾಣ್ಣ,ಕುಲಭಾಂದವರು ಸಂಘದ ಮುಖ್ಯಸ್ಥರು ಮುಂತಾದವರು ಹಾಜರಿದ್ದರು.