ಮೈಸೂರು, ಮಾರ್ಚ್:- ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಕಾರ್ಮಿಕ ಕಲ್ಯಾಣ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ 2022ರ ಮಾರ್ಚ್ 7 ರಂದು ಸೋಮವಾರ ನಗರದ ಕಲ್ಯಾಣಗಿರಿಯಲ್ಲಿರುವ ಕೇಂದ್ರಿಯ ಆಸ್ಪತ್ರೆಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ 75ನೇ ಸ್ವಾತಂತ್ರದಿನದ ಸ್ಮರಣಾರ್ಥವಾಗಿ ನುರಿತ ಸ್ತ್ರೀರೋಗ ತಜ್ಞರಿಂದ ಮಹಿಳೆಯರ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಎಸ್.ಎ.ಜಿ ಸ್ಪೇಷಲಿಸ್ಟ್ ಡಾ.ಎ.ಎಲ್.ಜರ್ನಾಧನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.