ಮೈಸೂರು:- ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ/ಸರ್ವೇಕ್ಷಣದ ವತಿಯಿಂದ ಇಂದು ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ “ಗುಲಾಬಿ ಆಂದೋಲನಾ” ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ ಬಗ್ಗೆ ಅರಿವು ಮನ ಪರಿವರ್ತನಾ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮನ ಪರಿವರ್ತನಾ ಜಾಥಾಕ್ಕೆ ಚಾಲನೆ ನೀಡಿದ ಎಪಿಎಂಸಿ ಅಧ್ಯಕ್ಷರಾದ ಬಸವರಾಜ್ ಅವರು ಮಾತನಾಡಿ, ತಂಬಾಕು ನಿಷೇಧವಿದ್ದರೂ ಸಹ ಯುವ ಪೀಳಿಗೆಗಳು ಅತಿ ಹೆಚ್ಚಾಗಿ ಉಪಯೋಗಿಸುತ್ತಿದ್ದು, ಅದರಲ್ಲೆ ಮುಳುಗಿಹೋಗಿದ್ದಾರೆ ಎಂದರು.
ಇಲ್ಲಿನ ವರ್ತಕರು, ರೈತರು, ಅಮಾಲರೆಲ್ಲರು ತಂಬಾಕಿನಿಂದ ಮುಕ್ತವಾಗಲಿ ಎಂದು ತಿಳಿಸಿದ್ದರಲ್ಲದೆ, ಈ ಮನಪರಿವರ್ತನಾ ಜಾಥ ಯಶಸ್ವಿಯಾಗಲಿ ಎಂದು ತಿಳಿಸಿದರು.
ತಂಬಾಕನ್ನು ಉಪಯೋಗಿಸಬಾರದು ಮತ್ತು ಉಪಯೋಗಿಸುವವರಿಗೂ ಪೆತ್ಸಾಹ ನೀಡಬಾರದು. ಅವರಿಗೆ ತಂಬಾಕಿನ ಬಗ್ಗೆ ಅರಿವು ಮೂಡಿಸಬೇಕೆಂಬುದು ಈ ಜಾಥಾದ ಉದ್ದೇಶವಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಮಹೇಶ್ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಸಹ ನಿದರ್ಶಕರಾದ ಸಿದ್ದರಾಜು, ತಾಲ್ಲೂಕು ಕ್ಷೇತ್ರದ ಶಿಕ್ಷಣಾಧಿಕಾರಿ ಮಹದೇವ್, ಮಹದೇವ್, ಪಾಂಡು, ಮಹೇಶ್, ನಾಗರಾಜು ಹಾಗೂ ಆಶಾಕಾರ್ಯಕರ್ತೆಯರು ಸೇರಿದಂತೆ ಇತರರು ಹಾಜರಿದ್ದರು.