ಮೈಸೂರು: ಮೈಸೂರು ಯುವ ಬಳಗವು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ರವರಿಗೆ ಮೈಸೂರು ಮಲ್ಲಿಗೆ ಗಿಡ ನೀಡುವ ಮೂಲಕ ಮನೆಮನೆಗೆ ಗಿಡ ಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಜೂನ್ ತಿಂಗಳು ಪೂರ್ತಿ ಪ್ರತಿ ಮನೆ ಮನೆಗೂ ತೆರಳಿ ಗಿಡವನ್ನು ನೀಡುವ ಮೂಲಕ ಪರಿಸರ ಜಾಗೃತಿ ಮೂಡಿಸಲು ಮೈಸೂರು ಯುವ ಬಳಗ ಮುಂದಾಗಿದ್ದು, ಅದರ ಅದರ ಸಲುವಾಗಿ ಜಿಲ್ಲಾಧಿಕಾರಿ ರವರಿಗೆ ಗಿಡ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಪತ್ರಿಕಾ ಪ್ರತಿನಿಧಿ ಕಾರ್ಯದರ್ಶಿ ರವಿಕುಮಾರ್, ಮೇಲುಕೋಟೆ ಆಳ್ವಾರ್ ಸ್ವಾಮೀಜಿ, ನವೀನ್, ಅಭಿ ಶ್ರೇಯಸ್ ಭಾಗವಹಿಸಿದ್ದರು