ಮೈಸೂರು: ಕಠಿಣ ಲಾಕ್ ಡೌನ್ ನಿಯಮಾನುಸಾರ ಜಿಲ್ಲಾಡಳಿತ ಮುಂದಾಗಿದ್ದು ಪ್ರತಿನಿತ್ಯ ಬೆಳಗ್ಗೆ ಕನಿಷ್ಠ 30 ನಿಮಿಷಗಳು ಮೂಕ ಪ್ರಾಣಿಪಕ್ಷಿಗಳಿಗೆ ಮೇವು ನೀಡುವ ಸ್ವಯಂ ಸೇವಕರಿಗೆ ಆರಕ್ಷಕ ಇಲಾಖೆ ಅನುವು ಮಾಡಿಕೊಡಬೇಕು ಮತ್ತು ನಗರಪಾಲಿಕೆ ಜೋನ್ ವಲಯಮಟ್ಟದಲ್ಲಿ ಪ್ರಾಣಿಪಕ್ಷಿಗಳಿಗೆ ಮೇವು ನೀಡುವ ಸ್ವಯಂ ಸೇವಕರ ತಂಡ ರಚಿಸಬೇಕಾಗಿದೆ ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮನವಿ ಮಾಡಿದ್ದಾರೆ.
ಸದ್ಯ ಕೆಎಂಪಿಕೆ ಟ್ರಸ್ಟ್ ವತಿಯಿಂದ ನಿರಂತರವಾಗಿ ಮೂಕಪ್ರಾಣಿಪಕ್ಷಿಗಳಾದ ದನಗಳಿಗೆ ಬೀದಿನಾಯಗಳಿಗೆ ಮತ್ತು ಕೋತಿಗಳಿಗೆ ಪ್ರತಿನಿತ್ಯ ಮೇವು ಆಹಾರ ಕೊಡುವ ಪ್ರಾಣಿ ಪಕ್ಷಿಗಳ ಸೇವಾ ಜಾಗೃತಿ ಅಭಿಯಾನವೂ ಕಳೆದ 25ದಿನಗಳಿಂದ ನಡೆಯುತ್ತಾ ಬಂದಿದ್ದು, ಹಾಲು ಅನ್ನ ಮೊಸರು, ಮೊಟ್ಟೆ, ಬನ್ ಬಿಸ್ಕೆಟ್ ಮತ್ತು ಹಸಿಹುಲ್ಲು, ಬಾಳೆಹಣ್ಣು ನೀಡುತ್ತಾ ಬಂದಿದ್ದು, ಹತ್ತಾರು ಯುವಕರ ತಂಡ ಬೆಳಗ್ಗೆ ಮಹರಾಜ ಕಾಲೇಜು ಮೈದಾನ, ಯುವರಾಜ ಕಾಲೇಜು, ಓವೆಲ್ಸ್ ಮೈದಾನ, ದಸರಾ ವಸ್ತುಪ್ರದರ್ಶನ ಮೈದಾನ ಸೇರಿದಂತೆ ಹಲವೆಡೆ ಪ್ರಾಣಿಪಕ್ಷಿಗಳಿಗೆ ಆಹಾರ ನೀಡುತ್ತಾ ಬಂದಿದ್ದಾರೆ, ಈಗಾಗಲೇ ಕಠಿಣ ಲಾಕ್ ಡೌನ್ ನಿಯಮಾನುಸಾರ ಜಿಲ್ಲಾಡಳಿತ ಮುಂದಾಗಿದ್ದು ಪ್ರತಿನಿತ್ಯ ಬೆಳಗ್ಗೆ ಕನಿಷ್ಠ 30ನಿಮಿಷಗಳು ಮೂಕ ಪ್ರಾಣಿಪಕ್ಷಿಗಳಿಗೆ ಮೇವು ನೀಡುವ ಸ್ವಯಂ ಸೇವಕರಿಗೆ ಆರಕ್ಷಕ ಇಲಾಖೆ ಅಣುವು ಮಾಡಿಕೊಡಬೇಕು ಮತ್ತು ನಗರಪಾಲಿಕೆ ಜೋನ್ ವಲಯಮಟ್ಟದಲ್ಲಿ ಪ್ರಾಣಿಪಕ್ಷಿಗಳಿಗೆ ಮೇವು ನೀಡುವ ಸ್ವಯಂ ಸೇವಕರ ತಂಡ ರಚಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ಪ್ರಾಣಿ ಪಕ್ಷಿಗಳ ಸೇವಾ ಜಾಗೃತಿ ಸೇವಾ ಕೆಲಸಕ್ಕೆ ಜಿ ಶ್ರೀನಾಥ್ ಬಾಬು , ಅಜಯ್ ಶಾಸ್ತ್ರಿ, ನವೀನ್, ಮಂಜುನಾಥ್, ಹರೀಶ್ ನಾಯ್ಡು, ಭೂಮಿಕಾ ಮೊದಲಾದವರು ಸಾಥ್ ನೀಡುತ್ತಾ ಬಂದಿದ್ದಾರೆ.