ಮೈಸೂರು, ನಿರ್ಮಾಣ ಹಂತದಲ್ಲಿ ರುವ ಕಟ್ಟಡದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಗಾಂಧಿಚೌಕ(ಹಳೇ ಒಲಂಪಿಯಾ ಚಿತ್ರಮಂದಿರದ)ದಲ್ಲಿ ನಡೆದಿದೆ.ಮೈಸೂರಿನ ಶಾಂತಿನಗರ ನಿವಾಸಿ ಅಕ್ಟರ್ ಖಾನ್(60 ) ಮೃತಪಟ್ಟ ವ್ಯಕ್ತಿ. ನಗರದ ಗಾಂಧಿಚೌಕದಲ್ಲಿಂದು ನಿರ್ಮಾಣ ಹಂತದಲ್ಲಿರುವ (ಒಲಂಪಿಯಾ ಚಿತ್ರಮಂದಿರ) ಕಟ್ಟಡದಲ್ಲಿ ಸಂಜೆ 6-50 ಗಂಟೆ ವೇಳೆ ವಿದ್ಯುತ್ ಹರಿದು ಮೃತಪಟ್ಟಿದ್ದಾರೆ.ಹಲವು ವರ್ಷಗಳಿಂದ ಅಲ್ಲಿನ ಸ್ಥಳೀಯ ಅಂಗಡಿಗಳ ಎಲೆಕ್ಟಿಕಲ್ ಕೆಲಸ ಮಾಡುತತಿದ್ದರು , ಒಲಂಪಿಯಾ ಚಿತ್ರಮಂದಿರ ಕಟ್ಟಡದ ಬಲಭಾಗದಲ್ಲಿರುವ ಕೆಲ ಮಳಿಗೆಗಳಲ್ಲಿ ಕರೆಂಟ್ ಕನೆಕ್ಷನ್ ಕಟ್ಟಾಗಿದೆ. ಅಲ್ಲಿನ ಕೆಲ ವ್ಯಾಪಾರಿಗಳು ಅಕ್ಟರ್ ಖಾನ್ ಅವರಿಗೆ ಕರೆಂಟ್ ಕನೆಕ್ಷನ್ ಕೊಡುವಂತೆ ತಿಳಿಸಿದ್ದಾರೆ. ಕನೆಕ್ಷನ್ ಕೊಡುವುದಕ್ಕೆ ಸಂಜೆ ವೇಳೆಗೆ ಕಟ್ಟಡದೊಳಗೆ ಹೋದ ಅವರು, ಕೆಲಸ ಮಾಡುವಾಗ ವಿದ್ಯುತ್ ಹರಿದು ಮೃತಪಟ್ಟಿದ್ದಾರೆ. ಎನ್ನಲಾಗಿದೆ.ಅಲ್ಲಿನ ಸ್ಥಳೀಯರು ಎಲ್ಲಾ ಅಂಗಡಿಗು ಒಂದೇ ಕನೆಕ್ಷನ್ ಕೊಟ್ಟಿರುವುದಕ್ಕೆ ಇದಕ್ಕೆ ಮೊದಲ ಕಾರಣ ಎಂದು ಅಲ್ಲಿನ ಸ್ಥಳೀಯರು ಹಾಗೂ ಅಲ್ಲಿನ ವ್ಯಾಪಾರಸ್ಥರ ಪ್ರಶ್ನೆಯಾಗಿದೆ.ವಿಷಯ ತಿಳಿದು ಸ್ಥಳಕ್ಕಾಗಮಿಸಿದ ದೇವರಾಜ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆ ಶವಾಗಾರ ದಲ್ಲಿರಿಸಿದ್ದಾರೆ. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.