ಮಳೆರಾಯ
ಹುಯ್ಯೊ ಹುಯ್ಯೊ ಮಳೆರಾಯ
ಹೂವಿನ ತೋಟಕ್ಕೆ ನೀರಿಲ್ಲ

ಬಾರೊ ಬಾರೊ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲ

ಥಣಿಸೊ ಥಣಿಸೊ ಮಳೆರಾಯ
ತೆಂಗಿನ ತೋಟಕ್ಕೆ ನೀರಿಲ್ಲ

ಮಾದೇವನ ಮುಡಿಯಿಂಬಾರಯ್ಯ
ಮಾವಿನ ತೋಪಿಗೆ ನೀರಿಲ್ಲ

ಬೇಕೇಬೇಕೊ ನೀ ಮಳೆರಾಯ
ಬೇವಿನ ತೋಪಿಗೆ ನೀರಿಲ್ಲ

ಬೀಳೊ ಬೀಳೊ ಮಳೆರಾಯ
ಬೀರನ ಹೊಂಡಕ್ಕೆ ನೀರಿಲ್ಲ

ಬಾರೊ ಬಾರೊ ಮಳೆರಾಯ
ಬೋರನ ಹೊಲಕ್ಕೆ ನೀರಿಲ್ಲ

ಮಿಂಚೊ ಮಿಂಚೊ ಮಳೆರಾಯ
ಮೀನಿನ ಕೆರೆಗೆ ನೀರಿಲ್ಲ

ಗುಡುಗೊ ಗುಡುಗೊ ಮಳೆರಾಯ
ಗುಂಡನ ಗದ್ದೆಗೆ ನೀರಿಲ್ಲ

ಸಿಡಿಲೊ ಸಿಡಿಲೊ ಮಳೆರಾಯ
ಸೀಬೆಯ ತೋಟಕ್ಕೆ ನೀರಿಲ್ಲ

ಸುರಿಯೊ ಸುರಿಯೊ ಮಳೆರಾಯ
ಸುಂದರಿ ಕಟ್ಟೆಗೆ ನೀರಿಲ್ಲ

ಕಾಯೊ ಕಾಯೊ ಮಳೆರಾಯ
ಕಣ್ಣೀರ ಕಡಲಲ್ಲು ನೀರಿಲ್ಲ

ಮನ್ನಿಸು ಮನ್ನಿಸೊ ತಪ್ಪನ್ನೆಲ್ಲ
ಟಪಟಪ ಬೀಳಿಸೊ ಆಲಿಕಲ್ಲ

ಮುನಿಸೇಕೆ ಬಲಿಬೇಕೆ ಮಳೆರಾಯ
ಕರುಣೆಯ ತೋರೊ ಮಳೆರಾಯ

ಬರ-ಬೇಗೆ ಬವಣೆ ನೀಗಿಸಯ್ಯ
ಬೇಗನೆ ಬಾರೋ ಮಳೆರಾಯ

ಬಾರೋ ಬಾರೋ ಮಳೆರಾಯ
ಬಾಗೀನ ಕೊಡುವೆ ಕೆರೆನೀರಲ್ಲಿ

ಈ….ಗ….ಲಾ….ದ….ರೂ….ನೀ…

ಉಯ್ಯೋ ಉಯ್ಯೋ ಮಳೆರಾಯ
ಉದ್ಧಾರ ಮಾಡೋ ಜಗವೆಲ್ಲ…..?

*ಕುಮಾರಕವಿ ಬಿ.ಎನ್.ನಟರಾಜ್[೯೦೩೬೯೭೬೪೭೧]