ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು.ಅಧ್ಯಕ್ಷರ ಸ್ಥಾನಕ್ಕೆ ನಿರ್ದೇಶಕ ಬಲರಾಮೇಗೌಡ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಐಚನಹಳ್ಳಿ ಮಹದೇವನಾಯ್ಕ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಪ್ರಸಾದರವರು ಅಧ್ಯಕ್ಷರಾಗಿ ಬಲರಾಮೇಗೌಡ ಉಪಾಧ್ಯಕ್ಷರಾಗಿ ಮಹದೇವ್ ನಾಯ್ಕರವರನ್ನ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಬಲರಾಮೇಗೌಡ ಮಾತನಾಡಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರುಗಳಿಗೆ ಹಾಗೂ ತಾಲ್ಲೂಕಿನ ಶಾಸಕ ಕೆ. ಮಹದೇವ್, ಮೈಮುಲ್ ಅಧ್ಯಕ್ಷ ಪಿ. ಎಂ. ಪ್ರಸನ್ನ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಮುಂದಿನ ದಿನಗಳಲ್ಲಿ ಸಹಕಾರ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು.
ಮೈಮುಲ್ ಅಧ್ಯಕ್ಷ ಪಿ. ಎಂ. ಪ್ರಸನ್ನ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿ ಏಪ್ರಿಲ್ 19 ರಂದು ಪಿರಿಯಾಪಟ್ಟಣದಲ್ಲಿ ರೈತರನ್ನು ಉತ್ತೇಜಿಸಲು ರಾಸುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮೈಮುಲ್ ವತಿಯಿಂದ ಪಂಚವಳ್ಳಿ ಭಾಗದಲ್ಲಿ ಪಶು ಆಹಾರ ಉತ್ಪಾದನಾ ಘಟಕವನ್ನು ತೆರೆಯಲಾಗುವುದು . ಹಾಲು ಸಹಕಾರ ಸಂಘಗಳಿಗೆ 5000 ಸಾವಿರ ಹಸುಗಳನ್ನು ಖರೀದಿಸಲು ರಾಷ್ಟ್ರಿಕೃತ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಕೊಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಪ್ರಸಾದ್ ,ಜಿಲ್ಲಾ ಸಹಕಾರ ಬ್ಯಾಂಕ್ ನ ನಿರ್ದೇಶಕ ರವಿ ,ಬೆಟ್ಟದಪುರ ಶಾಖೆಯ ಮೇಲ್ವಿಚಾರಕ ವೈ. ಎಸ್. ಶಿವಕುಮಾರ್ ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇರ್ಫಾನ್ ಅಹ್ಮದ್ ,ಗುಮಾಸ್ತರಾದ ಪ್ರಸನ್ನಕುಮಾರ್, ಶ್ವೇತಾ ,ನಿರ್ದೇಶಕರಾದ ಎಂ.ಟಿ. ಹನುಮಂತ ,ಹುಚ್ಚೇಗೌಡ, ಪುಟ್ಟರಾಜೇಗೌಡ ,ಮಂಜುನಾಥ್ ಜಿ ,ರಾಜೇಗೌಡ ,ರಾಜಮ್ಮ, ಲಕ್ಷ್ಮಮ್ಮ ತಾಲ್ಲೂಕು ಜೆಡಿಎಸ್ ಕಾರ್ಯದರ್ಶಿ ಮಹದೇವ್ ,ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಘುನಾಥ್, ಮೋಹನ್ ರಾಜ್ ,ಮುಖಂಡರಾದ ಅಪೂರ್ವ ಮೋಹನ್ ,ಪುಟ್ಟರಾಜು, ನಾಗಯ್ಯ, ವಾಸು ,ಜಗದೀಶ್, ಹಾಜರಿದ್ದರು.