*ವರ್ಧಮಾನ ನೀ ಮಹಾವೀರ*
ಸಾವಿರಾರು ಶತಮಾನಗಳ ಹಿಂದಿದ್ದ
ಜಿನಧರ್ಮದಾ ಪ್ರಥಮ ತೀರ್ಥಂಕರ
ರಿಷಭ ದೇವನಿಂದ ಮೊದಲ್ಗೊಂಡು
23ನೇ ತೀರ್ಥಂಕರ ಪಾರ್ಶ್ವನಾಥ ನಂತರ
24ನೇ ತೀರ್ಥಂಕರ ಸನ್ಮತಿ ನೀ ಅತಿವೀರ
ಕ್ರಿಸ್ತ ಪೂರ್ವ 599 ರಷ್ಟು ಹಿಂದಿನಕಾಲದ
ಬಿಹಾರ ವೈಶಾಲಿ ಬಳಿಯ ಕುಂದಾಗ್ರಾಮದ
ರಾಜಾ ಸಿದ್ಧಾರ್ಥ ರಾಣಿ ತ್ರಿಶಾಲ ದಂಪತಿಕಂದ
ಬಾಲ್ಯ ಯೌವ್ವನದಾ ಭವ್ಯಾತಿಭವ್ಯ ಮಕರಂದ
ಪರೋಪಕಾರಕ್ಕೆಂದೆ ಭುವಿಗಿಳಿದ ಅಹಿಂಸಾನಂದ
ಶುದ್ಧೋದನ ಮಾಯಾದೇವಿ ದಂಪತಿ ಪುತ್ರಕ್ಷಾತ್ರ
ಸಿದ್ಧಾರ್ಥಬುದ್ಧನಿಗೆ ಮುನ್ನವೇ ನಿನ್ನ ಜನನಪಾತ್ರ
ಧರೆಗಿಳಿದು ಬಂದ ಹಿರಿಯಣ್ಣ ನೀನೂ ಕ್ಷಾತ್ರಪುತ್ರ
ಉದಯಿಸಿದಂದಿನಿಂದಲೂ ಸತತ ಪ್ರವರ್ಧಮಾನ
ಕಂಡ ಸಪ್ತದಶಕದ ವೀರಾತಿವೀರ ವರ್ಧಮಾನ
ಅಹಿಂಸಾ ಪರಮೋ ಧರ್ಮಃ ಜನಕ
ತಾರತಮ್ಯ ರಹಿತ ಶಾಂತ ಸಿದ್ಧಾಂತ ಉದ್ಧಾರಕ
ಶ್ವೇತಾಂಬರ-ದಿಗಂಬರ ಆಗಮದ್ವಯ ಪ್ರಚಾರಕ
ಅಪರಿಗ್ರಹ ಆಸ್ತ್ರೇಯ ಬ್ರಹ್ಮಚರ್ಯ ಪ್ರತಿಪಾದಕ
ಅಹಿಂಸೆ ಸತ್ಯ ನ್ಯಾಯ್ವಾದ ಸ್ಯಾದ್ವಾದ ಪರಿಪಾಲಕ
ಅನೇಕಾಂತವಾದಸಮಾಜವಾದಪರಮೋಚ್ಚಾರಕ
ಮುಗ್ಧ ಮಂಕು ಜ್ಞಾನದಿಂ ಜೀವನ್ಮುಕ್ತಿ ಪಡೆವ
ಕೇವಲ ಹಾದಿಯ ಬದಲಿಸಿ ಮೋಕ್ಷ ದೊರಕುವ
ಮಹಾಜ್ಞಾನ ಹಾದಿಯ ತೋರಿದ ಹರಿಕಾರನಿವ
ಸಪ್ತಮಂತ್ರ ಬೋಧಿಸಿ ನಿರೂಪಿಸಿದ ಮಹಾದೇವ
ಆಚಂದ್ರಾರ್ಕಅಜರಾಮರಜಗದೋದ್ಧಾರಕದೇವ
*ಕುಮಾರಕವಿ ಬೋ.ನಾ.ನಟರಾಜ
9036976471
