ಮಹಾತ್ಮಗಾಂಧಿ ಜಯಂತಿ ಆಚರಿಸಿ ,ಸ್ವರ್ಣಜಯಂತಿ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಉದ್ಯಾನವನ ಮತ್ತು ರಸ್ತೆಬದಿಗಳನ್ನು ಸ್ವಚ್ಛತೆ ಮಾಡಲಾಯಿತು.


ಈ ಕಾರ್ಯಕ್ರಮದ ಸಂಘದ ಅಧ್ಯಕ್ಷರಾದ ಎಂ.ರಾಜು ರವರು ಮಾತನಾಡಿ ದಿ. 2.10.1869 ರಂದು ಗುಜರಾತಿನ ಪೋರ್ ಬಂದರಿನಲ್ಲಿ ಜನಿಸಿದ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದವರು. ಬ್ರೀಟಷರಿಂದ ಸ್ವಾತಂತ್ರ್ಯಕೊಡಿಸುವುದರಲ್ಲಿ ಅವರ ಹೋರಾಟದ ಕೊಡುಗೆ ಅವೀಸ್ಮರಣೀಯವಾದದು.

ಹಾಗಾಗಿ ಅವರು ಭಾರತ ದೇಶದ‌ ರಾಷ್ಟ್ರಪಿತನಾಗಿ ಎಲ್ಲರಿಂದಲೂ ಸ್ಮರಿಸಲ್ಪಡುತ್ತಾರೆ. ಇಂದು‌ ನಾವೆಲ್ಲಾ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದೇವೆ. ಇವರ ಆದರ್ಶ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯೋಣ ಅಂತ ಕರೆ ನೀಡಿದರು. ಕಾರ್ಯದರ್ಶಿ ಅರುಣ್ ಸಿ‌.ಕೆ ರವರು ಮಾತನಾಡಿ ಗಾಂಧೀಜಿಯವರ ಆದರ್ಶಗಳು ಹಾಗೂ ಅಹಿಂಸಾ ಮಾರ್ಗಗಳಿಂದ ದೇಶ ವಿದೇಶಗಳ ಗಣ್ಯರು ಪ್ರಭಾವಿತರಾಗಿದ್ದರು‌.

ಅವರಲ್ಲಿ ಮುಖ್ಯವಾಗಿ ನೆಲ್ಸಮಂಡೇಲಾ , ಮಾರ್ಟಿನ್ ಲೂಥರ್ ಕಿಂಗ್, ದಲೈಲಾಮ ಆಲ್ಬರ್ಟ್ ಐನ್ಸ್ಟೀನ್. ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಮಹತ್ ಕಾರ್ಯಗಳನ್ನು ಸಾಧಿಸಿದರು ಎಂದು ಹೇಳಿದ ಅವರು ಮುಂದುವರಿದು ಮಾತನಾಡಿ ಗಾಂಧೀಜಿಯವರು ಸ್ವಚ್ಛತೆಯ ಬಗ್ಗೆ ನಮಗೆಲ್ಲಾ ಆದರ್ಶ ಪ್ರಾಯವಾಗಿದ್ದರು ಹಾಗೂ ಅಹಿಂಸಾ‌ಮಾರ್ಗದಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು‌ಕೊಟ್ಟರು ಎಂದು ಹೇಳಿ ,ಅಹಿಂಸಾ ಮಾರ್ಗದಲ್ಲಿ ನಾವೆಲ್ಲಾ ರಾಷ್ಟ್ರ ಹಾಗೂ ಸಮಾಜವನ್ನು ಕಟ್ಟಬೇಕು ಎಂದು ಒತ್ತಿ ಹೇಳಿದರು.


ಕಾರ್ಯಾದ್ಯಕ್ಷರಾದ ಎಸ್ .ದೇವರಾಜ್ ರವರು ಮಾತನಾಡಿ ಗಾಂಧೀಜಿಯವರು ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ನಡೆದರೆ ಅದೇ ನಾವು ಗಾಂಧೀಜಿ ಜಯಂತಿ ಅಚರಿಸಿದುದಕ್ಕೆ ಸಾರ್ಥಕತೆಯಾಗುತ್ತದೆ
ಎಂದು ತಿಳಿಸಿದರು. ಖಜಾಂಚಿ ಮನ್ಸೂರ್‌ ಅಹಮದ್ ಖಾನ್ ಮಾತನಾಡಿ ಜಾತಿ,ಧರ್ಮಗಳ ನಡುವೆ ಸಹಬಾಳ್ವೆಯಿಂದ ಜೀವನ ನಡೆಸಬೇಕು.ಸಂಘರ್ಸಗಳಿಗೆ ಅವಕಾಶಕೊಡದೆ ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ಒಂದೇ ಎಂಬುದನ್ನು ಅರಿತು ಬಾಳಬೇಕು, ಆಗಲೇ ನಾವು ಗಾಂಧಿಯವರ ಕನಸು ನನಸು ಮಾಡಿದ ಹಾಗೆ ಎಂದು ಭಾವನಾತ್ಮಕವಾಗಿ ನುಡಿದರು.ಸದಸ್ಯರಾದ ಗಂಗಾಧರ್ ವಿ.ಹೆಚ್ , ಟಿ.ಎಸ್ .ಮಹೇಶ್ ಎ.ಪಿ.ವಿರುಪಾಕ್ಷ, ಎಸ್ .ಎನ್. ಸತೀಶ್ ಬಾಬು ಹಾಗೂ ಸಂಘದ ಇತರ ಸದಸ್ಯರಲ್ಲದೆ ಸ್ಪಂದನ ಅಧ್ಯಕ್ಷ ಎಂ.ಜಯಶಂಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.