ಮೈಸೂರು,ಆ.೪:- ಮೈಸೂರಿನ ಖಾಸಾಗಿ ಹೋಟಲ್ ನಲ್ಲಿ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ೨೦ ಟೂರ್ನಿಯನ್ನು ನಟ ಸುದೀಪ್ ಅಧಿಕೃತವಾಗಿ ಇಂದು ಉದ್ಘಾಟಿಸಿದರು. ಟೂರ್ನಿಯ ಟ್ರೋಫಿಯನ್ನು ಅನಾವರಣ ಮಾಡಿದರು.ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ೬ ತಂಡಗಳ ನಾಯಕರುಗಳನ್ನು ಪ್ರಕಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮೈಸೂರು ವಾರಿಯರ್ಸ್ ತಂಡದ ಆಟಗಾರರು ಭಾಗಿಯಾಗಿದ್ದರು. ಇದೇ ಭಾನುವಾರದಿಂದ ಟೂರ್ನಿ ಆರಂಭವಾಗಲಿದೆ.
ಮೈಸೂರು ಮಾನಸ ಗಂಗೋತ್ರಿಯ ಶ್ರೀಕಂಠ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಟೂರ್ನಿ ಆರಂಭವಾಗಲಿದೆ. ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿ ಕರುಣ್ ನಾಯರ್,ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ ತಂಡಕ್ಕೆ ಮಯಾಂಕ್ ಅಗರ್ವಾಲ್, ಗುಲ್ಬರ್ಗ ಮೈಸ್ಟಿಕ್ ತಂಡಕ್ಕೆ ಮನೀಶ್ ಪಾಂಡೆ, ಶಿವಮೊಗ್ಗ ಸ್ಟ್ರೈಕರ್ಸ್ ತಂಡಕ್ಕೆ ಕೆ. ಗೌತಮ್, ಮಂಗಳೂರು ಯುನೈಟೆಡ್ ತಂಡಕ್ಕೆ ಸಮರ್ಥ್, ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ವೇಗದ ಬೌಲರ್ ಅಭಿಮನ್ಯು ಮಿಥುನ್ ನಾಯಕರಾಗಿ ಆಯ್ಕೆಯಾಗಿದ್ದಾರೆ.ಈ ವೇಳೆ ಪಂದ್ಯದಲ್ಲಿ ಭಾಗವಹಿಸುವ ಆರೂ ತಂಡಗಳಿಗೆ ನಟ ಸುದೀಪ್ ರವರು ಶುಭ ಕೋರಿದರು.