ಕಾರ್ತಿಕಮಾಸದ ಹಿನ್ನೆಲೆಯಲ್ಲಿ ಮೈಸೂರಿನ ಪುರಾತನ ಪ್ರಸಿದ್ದ ಮಹದೇಶ್ವರ ದೇವಸ್ಥಾನದಲ್ಲಿ ಹುಲಿವಾಹನದ ಮೆರವಣಿಗೆ ಹಾಗೂ ಕೊಂಡೋತ್ಸವವನ್ನು ಶ್ರದ್ದಾ ಭಕ್ತಿಗಳಿಂದ ನೆರವೇರಿಸಲಾಯ್ತು. ದೇವಸ್ಥಾನದ ಆವರಣದಲ್ಲಿ ನಡೆದ ಹುಲಿವಾಹನ ಮೆರವಣಿಗೆಗೆ ಕಾಡಾ ಅಧ್ಯಕ್ಷ ಶಿವಲಿಂಗಯ್ಯ ಚಾಲನೆ ನೀಡಿದರು. ಈ ವೇಳೆ ಉದ್ಯಮಿ ಶಿವಕುಮಾರ್ ಪುಲ್ಸೆ, ನಗರಪಾಲಿಕೆ ಸದಸ್ಯ ಲೋಕೇಶ್ ಪಿಯಾ ಗ್ರಾಮದ ಮುಖಂಡರಾದ ಗೋವಿಂದು, ಸಿದ್ದಪ್ಪ, ಸತೀಶ್, ಶೇಖರ್, ವಿಜಯ್ ಸೇರಿ ಹಲವರು ಉಪಸ್ಥಿತರಿದ್ದರು. ಸಾವಿರಾರು ಭಕ್ತರು ಮಹದೇಶ್ವರ ಮೆರವಣಿಗೆಯಲ್ಲಿ ಭಾಗವಹಿದ್ದರು. ಸರತಿ ಸಾಲಿನಲ್ಲಿ ನಿಂತು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಇದಾದ ನಂತರ ಬೆಳಗಿನ ಜಾವ 5 ಗಂಟೆಗೆ ಕೊಂಡೋತ್ಸವವನ್ನು ನೆರವೇರಿಸಲಾಯಿತು. ಕೊಂಡಕ್ಕೆ ಬೃಹತ್ ಗಾತ್ರದ ಸೌದೆ, ತುಪ್ಪ, ಗಂಧದ ಕಡ್ಡಿ, ಕರ್ಪೂರ, ಸಾಂಬ್ರಾಣಿ ದೂಪವನ್ನು ಹಾಕಿ ಸಿದ್ದಪಡಿಸಲಾಗಿತ್ತು. ಇನ್ನು ಈ ಬಾರಿ ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಭಕ್ತರಿಗೆ ಕೊಂಡಹಾಯುವುದನ್ನು ನಿರ್ಬಂಧಿಸಲಾಗಿತ್ತು. ಉಳಿದಂತೆ ಮಹದೇಶ್ವರ ಹುಲಿವಾಹನ ಮೆರವಣಿಗೆ ಹಾಗೂ ಕೊಂಡೋತ್ಸವ ಶ್ರದ್ದಾ ಭಕ್ತಿಯಿಂದ ನೆರವೇರಿತು.