ಕೊಯಂಬತ್ತೂರು, ಫೆ.೧೭: ಸದ್ಗುರುಗಳ ಆಶ್ರಮವು ಮಹಾದೇವನ ಅನುಗ್ರಹಕ್ಕೆ ಪಾತ್ರವಾಗಿದೆ. ಇಲ್ಲಿ ಅನುಭವಿಸುವ ದೈವತ್ವವೇ ಅದನ್ನು ಸ್ಪಷ್ಟಪಡಿಸುತ್ತದೆ,” ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ತಮಿಳುನಾಡಿನ ಈಶ ಫೌಂಢೇಷನ್ ವತಿಯಿಂದ ಈಶ ಯೋಗ ಕೇಂದ್ರದಲ್ಲಿ ಆಯೋಜಿಸಲಾದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸಂಜೆ ಆರಂಭವಾದ ಕಾರ್ಯಕ್ರಮವು ರಾತ್ರಿಯಿಡೀ ನಡೆಯಿತು.ಕಾರ್ಯಕ್ರಮದಲ್ಲಿ ಸದ್ಗುರು (ಜಗ್ಗಿ ವಾಸುದೇವ್) ಅವರ ನೇತೃತ್ವದಲ್ಲಿ ಧ್ಯಾನ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಹೋತ್ಸವವು ಪ್ರತಿ ವರ್ಷ ನಡೆಯುವಂತೆ ಆದಿಯೋಗಿ ಪ್ರತಿಮೆ ಸನ್ನಿಧಿಯಲ್ಲಿ ಜರುಗಿತು.ಈ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸಚಿವ ಎಲ್. ಮುರುಗನ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಚಿವರು ಯೋಗ ಕೇಂದ್ರದಲ್ಲಿರುವ ಧ್ಯಾನಲಿಂಗದಲ್ಲಿ ಪಂಚಭೂತ ಕ್ರಿಯೆಯಲ್ಲಿ ಪಾಲ್ಗೊಂಡು ನಂತರ ಆದಿಯೋಗಿ ಸನ್ನಿಧಿಯಲ್ಲಿ ಮಹೋತ್ಸವಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ “ಭವ್ಯ ಭಾರತ ಭೂಷಣ್” ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.ಈ ವರ್ಷದ ಮಹಾಶಿವರಾತ್ರಿ “ಗಂಗಾ” ವಿಷಯಾಧಾರಿತವಾಗಿ ಆಚರಿಸಲ್ಪಟ್ಟಿದ್ದು, ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮವು ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ನೇರ ಪ್ರಸಾರಗೊಂಡಿತು.

Leave a Reply