
‘ನಮಃಶಿವಾಯ’ಪಂಚಾಕ್ಷರಿ ಮಂತ್ರದಲ್ಲಿ ಆರೋಗ್ಯ ಸೌಖ್ಯ ಶಾಂತಿ ನೆಮ್ಮದಿ ಜತೆಗೆ ಆಧ್ಯಾತ್ಮಿಕ ಮೋಡಿ ಇದೆ ಎಂಬುದು ಲೋಕಮಾನ್ಯ! ಪ್ರತಿವರ್ಷವೂ ಛಳಿಯಂತ್ಯ ಬೇಸಿಗೆಯಾರಂಭ ಕಾಲಗಳ ನಡುವಣ ಮಾಘಮಾಸದ ಬಹುಳ ಚತುರಮಾವಾಸ್ಯೆ ಹಿಂದಿನದಿನ ಪ್ರಾರಂಭವಾಗಿ 24ತಾಸಿನವರೆಗೆ ದ್ರವಫಲಾಹಾರ ಪೂಜೆಪುನಸ್ಕಾರ ಹರಿಕಥೆಶಿವಕಥೆ ಹವನಹೋಮ ಉಪವಾಸಜಾಗರಣೆ ಮುಂತಾದ ಕೈಕಂಕರ್ಯಗಳನ್ನು ಹ[ರಿ]ರ ಪಂಥೀಯರು ಮಾತ್ರವಲ್ಲದೆ ಪ್ರತಿಹಿಂದೂ ಕುಟುಂಬವು ಶ್ರದ್ಧಾಭಕ್ತಿಯಿಂದ ಸಂಪ್ರದಾಯ ಬದ್ಧರಾಗಿ ಆಚರಿಸುವ ಶಿಷ್ಟಾಚಾರ ಶಿವಾಚಾರ ಪದ್ಧತಿಯ ಹಬ್ಬವೆ ‘ಶಿವರಾತ್ರಿ’!
ಭೂಲೋಕದ ಮೊಟ್ಟಮೊದಲ ಕಥೆ/ಸಾಹಿತ್ಯ ‘ಶಿವಪುರಾಣ’! ಜಗತ್‍ಸೃಷ್ಟಿಕರ್ತ ಬ್ರಹ್ಮನಿಗೆ ತಂದೆ ಶ್ರೀಮನ್‍ನಾರಾಯಣ. ಇಂಥವನಿಗೇ ಪಿತಾಮಹ ‘ಓಂ’ಕಾರಮೂರ್ತಿ ಶಿವ. ಪರಂಜ್ಯೋತಿ ಪರಶಿವಂಗೆ ಪಿತ[ಯಾರು?]ಇದ್ದ ಎಂಬುದಕ್ಕೆ ಯಾವಪುರಾಣ ಹಿನ್ನೆಲೆಯೂ ಇಲ್ಲ! ಆದ್ದರಿಂದ ಆದಿದೇವ ಶಿವನನ್ನು ತ್ರಿಮೂರ್ತಿಜೇಷ್ಠ ತ್ರಿಲೋಕಶ್ರೇಷ್ಠ ಎಂದೆಲ್ಲ ಕೊಂಡಾಡುತ್ತಾರೆ. ವಿಶ್ವದಾದ್ಯಂತ ಪ್ರಥಮಪೂಜಿತ[ಗಣೇಶ]ನ ತಂದೆಯಾಗಿ ಸ(ಪ)ರ್ವಕಾಲದಲ್ಲು ಅತ್ಯುನ್ನತ ಪೂಜಾಸ್ಥಾನದಲ್ಲಿ ಇರುತ್ತಾನೆ ವಿಶ್ವನಾಥ! ಈಶ್ವರಪಟ್ಟದ ವರನೀಡಿ ವಿಘ್ನೇಶ್ವರನನ್ನಾಗಿಸಿದ ವಿಶ್ವೇಶ್ವರ ಅಖಿಲಾಂಡಕೋಟಿ ಬ್ರಹ್ಮಾಂಡಪಾಲಕನಾಗಿ ಅಖಿಲೇಶ್ವರ ಅಮೃತೇಶ್ವರ ಜ್ಞಾನೇಶ್ವರ ಜಗದೀಶ್ವರಮುಂತಾದ ಸಹಸ್ರನಾಮದಿಂದ ಅನವರತ ಸುರಾಸುರವಂದ್ಯನಾಗಿ ಆರಾಧಿಸಲ್ಪಡುವ ಏಕಮೇವ ಅದ್ವಿತೀಯದೈವ. ಹಿಂದೂಧರ್ಮದ ಮಹಾನ್‍ಗ್ರಂಥ ಭಗವದ್ಗೀತೆಯ ಉದಾ:ಅಧ್ಯಾಯ-9,ಶ್ಲೋಕ-34:ಮನ್ಮನಾಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕರು, ಮಾಮೇವ ಏಷ್ಯಸಿ ಯುಕ್ತ್ವಾ ಏವಮಾತ್ಮಾನಂ ಮತ್ಪರಾಯಣಃ
ಕನ್ನಡತಾತ್ಪರ್ಯ:“ನನ್ನಲ್ಲಿ ಮನಸ್ಸುಳ್ಳವನಾಗಿರು, ನನ್ನ ಭಕ್ತನಾಗಿರು, ನನ್ನನ್ನೆ ಪೂಜಿಸುತ್ತಿರು, ನನಗೆ ನಮಸ್ಕರಿಸುತ್ತಿರು, ನನ್ನನ್ನು ಪರಮಗತಿ ಎಂದರಿತು ನನ್ನಲ್ಲಿ ನಿನ್ನ ಮನಸ್ಸನ್ನು ಲೀನವಾಗಿಸು ಆಗಮಾತ್ರ ನೀನು ನನ್ನನ್ನು ಪಡೆಯುವೆ”

ಅಧ್ಯಾಯ-18, ಶ್ಲೋಕ-66:ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂವ್ರಜ ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾಶುಚಃ
ಕನ್ನಡತಾತ್ಪರ್ಯ: “ಎಲ್ಲಾ ದೇಶ/ಧರ್ಮ ತ್ಯಜಿಸಿ ನನಗೊಬ್ಬನಿಗೆ ಶರಣಾಗು, ನಿನ್ನ ಸಕಲ ಪಾಪಕರ್ಮದಿಂದ ನಿನಗೆ ಮುಕ್ತಿ ನೀಡುವೆ ಆದ್ದರಿಂದ ನೀನು ದು:ಖಿಸಬೇಡ”
ವೇದೋಪನಿಷತ್‍ಗಳಲ್ಲಿ ಶಿವನಮಹಿಮೆ ಕೊಂಡಾಡಿರುವುದು:“ಯಂ ಬ್ರಹ್ಮಾ ವರುಣೇಂದ್ರ ರುದ್ರ ಮರುತ: ಸ್ತುನ್ವಂತಿ ದಿವೈಯಃ ಸ್ತವೈಃ//ವೇದೈಃ ಸಾಂಗಪದಕ್ರಮ ಉಪನಿಷದೈಃ ಗಾಯಂತಿ ಯಃ ಯೋಗಿನೋ//ಧ್ಯಾನಾವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯ: ಸಾಮಗಾಃ// ಯಸ್ಯಾಂತಃ ನ ವಿದುಃ ಸುರಾಸುರ ಗಣಾದೇವಾಯ ತಸ್ಮೈನಮಃ” ಕನ್ನಡತಾತ್ಪರ್ಯ:‘ಯಾರನ್ನು: ಬ್ರಹ್ಮ ವರುಣ ಇಂದ್ರ ರುದ್ರ ಮಾರುತ ಗಣಗಳು ತಮ್ಮ ದಿವ್ಯಮಂತ್ರಗಳಿಂದ ಕಿರುಭಕ್ತಿಯಿಂದ ಸ್ತುತಿಸುವರೊ; ಯಾರನ್ನು:ಸಾಮಗರು ಅಂಗ-ಪದಕ್ರಮ-ಉಪನಿಷತ್ತು-ವೇದಗಳಿಂದ ಹಾಡುತ್ತಾರೊ; ಯಾರನ್ನು: ಯೋಗಿಗಳು ಧ್ಯಾನಸ್ಥಿತಿಯಲ್ಲಿ ತಲ್ಲೀನರಾದ ಮನಸ್ಸಿಂದ ಕಾಣುತ್ತಾರೆಯೊ; ಹಾಗೂ ಯಾರ ಅಂತ್ಯವನ್ನು ಸುರಾಸುರರು ಅರಿಯಲಸಾಧ್ಯವೊ ಅಂಥ ಪರಮಾತ್ಮನಿಗೆ ಅನಂತ ವಂದನೆಗಳು!

ವಚನಕಾರರೆಲ್ಲರೂ ಶಿವನ ಭಕ್ತರೆಂಬುದು ಅದ್ಭುತಾಶ್ಚರ್ಯ! ಇವರು ಕೇವಲ ತಮ್ಮ ರಚನೆಗಳಿಂದ ಶಿವನನ್ನು ಹಾಡಿ ಹೊಗಳಿದವರಷ್ಟೆ ಅಲ್ಲ, ದಿಟಭಕ್ತಿಯಿಂದ ಶಿವನನ್ನು ಸಾಕ್ಷಾತ್ಕಾರ ಮಾಡಿಕೊಂಡ ಪರಮಪಾವನರೂ ಹೌದು! ಬಸವಣ್ಣನವರ “ಉಳ್ಳವರು ದೇವಾಲಯ ಮಾಡುವರು ನಾನೇನ ಮಾಡಲಿ ಬಡವ” “ಕಾಯಕವೇ ಕೈಲಾಸ” ಮುಂತಾದ ವಚನಗಳಿಂದ ವೈದಿಕಧರ್ಮದ ಮೂಢನಂಬಿಕೆ ವಿರುದ್ಧ ವೈಚಾರಿಕ ಕ್ರಾಂತಿ ಮಾಡಿದ್ದು ಅಮರ ಇತಿಹಾಸ! ತನ್ಮೂಲಕ ಮಾನವೀಯತೆ/ಜಾತ್ಯಾತೀತ ಸಮಾಜದ ರೂವಾರಿಯಾದರು. ಆಕಾಲಕ್ಕೆ ಅದು ಸಾಧ್ಯವಾಗಿದ್ದು ಕೂಡಲ ಸಂಗಮದೇವನ ಕೃಪೆಯಿಂದಲೆ ಎಂಬುದು ಬಸವಣ್ಣನ ಮಾತ್ರವಲ್ಲ ಪ್ರತಿಯೊಬ್ಬ ಶಿವಭಕ್ತನ ನಂಬಿಕೆ! ಉಧಾ:“ಎನಗೆನಿಮ್ಮ ನೆನಪಾದಾಗಲೆ ಉದಯ! ಎನಗೆನಿಮ್ಮ ಮರೆವಾದಾಗಲೆ ಅಸ್ತಮಾನ! ಎನಗೆನಿಮ್ಮ ನೆನಪೇ ಜೀವ, ಎನಗೆನಿಮ್ಮ ನೆನಪೇ ಪ್ರಾಣ ಕಾಣಾ ತಂದೆ! ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆ ನೊತ್ತಯ್ಯಾ! ವದನದಲಿ ಷಡಕ್ಷರಿಯ ಬರೆಯಯ್ಯಾ ಸ್ವಾಮಿ, ಕೂಡಲ ಸಂಗಮದೇವಾ!

ಶಿವಶರಣೆ ಅಕ್ಕಮಹಾದೇವಿ ತಮ್ಮ ವಚನಗಳಲ್ಲಿ ಶಿವನನ್ನು ಹೊಗಳಿರುವುದು:-“ಶರಣೆಂಬೆ ನಾ ಶಶಿಭೂಷಣ, ಗೌರಿಪ್ರಿಯ ಜಗನ್ಮೋಹನ// ಕೆಂಜೆಡೆ ಮುಡಿಯ ಕಾಪಾಲಿಕನೆ, ನಂಜುನುಂಗಿದ ನಂಜುಂಡೇಶನೆ//ನಂಬಿದಬಾಲನ ಅಪ್ಪಿಮುದ್ದಾಡಿದ, ಮೃತ್ಯುಂಜಯ ನೀ ದಯಾಮಯ // ಬೇಡರಕಣ್ಣನ ಪೂಜೆಗೆ ನೀನೊಲಿದೆ, ಅಲ್ಲಮಪ್ರಭುವಾಗಿ ಮಾ0iÉುಯ ಗೆಲಿದೆ// ಬಲ್ಲಿದ ಬಸವಂಗೆ ಕುಲದೈವ ನೀನಾದೆ, ಮಹಾದೇವಿಅಕ್ಕನ ಚೆನ್ನಮಲ್ಲಿಕಾರ್ಜುನ”. ಕಾಯಾ-ವಾಚಾ-ಮನಸಾ ತನ್ನನ್ನು ಶಿವನಿಗೆ ಪಾಣಿಗ್ರಹಣಿಸಿ ಸಮರ್ಪಿಸಿಕೊಂಡ ಅಕ್ಕನು ಶಿವನ ಭಕ್ತರು ಹೀಗಿರಬೇಕೆಂದು ಸೂಚಿಸಿದರು:“ತನುಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು// ಮನಕರಗದವರಲ್ಲಿ ಗಂಧಾಕ್ಷತೆಯನು ಒಲ್ಲೆಯಯ್ಯ ನೀನು// ಅರಿವು ಕಣ್‍ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು// ಭಾವಶುದ್ಧ ಇಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು// ಹರನಾಮಿಗಳಲ್ಲದವರಲ್ಲಿ ನೈವೇದ್ಯವ ಒಲ್ಲೆಯಯ್ಯ ನೀನು// ಹೃದಯಕಮಲ ಇಲ್ಲದವರಲ್ಲಿ ಇರಲೊಲ್ಲಯ್ಯ ನೀನು// ಎನ್ನಲ್ಲಿಏನುಂಟೆಂದು ಕರಸ್ಥಲದಲ್ಲಿ ಇಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನ”
ವಚನದಗೂಢಾರ್ಥ:- ಶಿವನನ್ನು ಒಲಿಸಲು ಬಣ್ಣಬಣ್ಣದ ಹೂಮಾಲೆತುಳಸಿ ಕರ್ಪೂರಗಂಧದಕಡ್ಡಿ ಹಣ್ಣುಹಂಪಲು ಷಡ್ರಸನೈವೇದ್ಯ ಡೋಲುಢಮರುಗ ತಮಟೆನಾದಸ್ವರ ಒಡವೆವಸ್ತ್ರ ಒನಪುವಯ್ಯಾರ ಅಂತಸ್ತುಆಡಂಬರ ಡೌಲುಢಂಬಾಚಾರ ಮುಂತಾದ ಲೌಕಿಕ ಆಮಿಷಗಳ ಗೊಡ್ಡುಭಕ್ತಿ ಶಿವನಿಗೆ ಬೇಡ, ಬದಲಿಗೆ ಕಿಂಚಿತ್ ದೃಢಭಕ್ತಿ ಸಾಕು!
ದೇಶದಾದ್ಯಂತ ಪ್ರತಿಯೊಂದು ದೇವಾಲಯಗಳಲ್ಲಿ ವಿಶೇಷವಾಗಿ ಶಿವದೇವಾಲಯಗಳಲ್ಲಿ ಅನನ್ಯ ಆಸಕ್ತಿಯಿಂದ ಭಕ್ತಿ ಪರಾಕಾಷ್ಠೆಯ ಪಂಚಾಕ್ಷರಿ ಮಂತ್ರದೊಡನೆ ಪ್ರತಿಯೊಂದು ಶಿವಲಿಂಗಕ್ಕೂ 11/101/1001 ಬಿಲ್ವಪತ್ರೆಗಳನ್ನು ಸಮರ್ಪಿಸುವರು. ಇಡೀರಾತ್ರಿ ಅರ್ಚನೆ ಶಿಸ್ತು ಶುಚಿತ್ವ ಸಂಭ್ರಮ ಭಜನೆ ನಿರಂತರ ಮೊಳಗುತ್ತದೆ. ಮಹಾಯಾಗ/ರುದ್ರಾಭಿಷೇಕ ಸಂಕೀರ್ತನೆ ಭಕ್ತಿಪಾರಾಯಣ ಶಿವಲೀಲಾಮೃತ ವಾಚನ ಗೀತಗಾಯನ ಸಂಗೀತ ಕಚೇರಿ ನಟರಾಜ(ತಾಂಡವ)ನೃತ್ಯ, ನಾಟಕ, ಚಲನಚಿತ್ರ, ಇತ್ಯಾದಿ ಭಕ್ತಿಪ್ರಧಾನ ಮನರಂಜನೆ ಸಹಿತ ಆಚರಿಸುತ್ತಾರೆ. ನಾಸ್ಥಿಕಾಸ್ಥಿಕರ ಆದಿಯಾಗಿ ಎಲ್ಲರೂ ಕೈಗೊಳ್ಳುವ ಉಪವಾಸ-ಜಾಗರಣೆ-ಶಿವಧ್ಯಾನಗಳ ಸಂಗಮವೆ ಮಹಾಶಿವರಾತ್ರಿ ಧ್ಯೇಯೋದ್ದೇಶ!
ಕೈಲಾಸದಲ್ಲಿ ಒಮ್ಮೆ ಪರಶಿವನ ಪತ್ನಿಯರಾದ ಗಂಗೆ-ಗೌರಿಯರು ಸ್ವಪ್ರತಿಷ್ಠೆಗಾಗಿ ಕಾದಾಡಿಕೊಂಡು ಶಿವನ ಮೇಲೆ ಆಣೆಮಾಡಿ ಪರಸ್ಪರ ಶಪಿಸಿ ಭೂಲೋಕದಲ್ಲಿ ಜನಿಸುತ್ತಾರೆ. ಗಂಗೆ ಮತ್ತು ಗೌರಿ ಭೂಲೋಕವಾಸಿಯಾದರು ಎಂಬುದನ್ನರಿತ ಈಶ್ವರ ತಾನೂಸಹ ಭೂಲೋಕದಲ್ಲಿ ಜನ್ಮತಾಳುತ್ತಾನೆ. ಗೌರಿಯು ರಾಜಕುಮಾರಿಯಾಗಿ, ಗಂಗೆಯು ಮೀನುಗಾರ್ತಿಯಾಗಿ ಜನಿಸಿದರೂ ಸುದೈವದಿಂದ ಒಂದಾಗಿಸೇರಿ ಶಿವರಾತ್ರಿಯಂದುಉಪವಾಸ-ಜಾಗರಣೆ-ಭಜನೆಮಾಡುತ್ತ ಶಿವನನ್ನು ಆರಾಧಿಸುತ್ತಾರೆ. ಇಬ್ಬರೂಜತೆಗೂಡಿ ವ್ರತಆಚರಿಸಿದ ಫಲವಾಗಿ ಅವರ ಶಾಪ ವಿಮೋಚನೆಯಾಗಿ ಕೈಲಾಸಕ್ಕೆ ಹಿಂದಿರುಗುತ್ತಾರೆ. ಇದೇ ಪೌರಾಣಿಕ ಕತೆಯಾಧರಿಸಿ 1967ರಲ್ಲಿ ಖ್ಯಾತ ನಟ-ನಿರ್ಮಾಪಕ-ನಿರ್ದೇಶಕ ಬಿ.ಆರ್.ಪಂತುಲು ರಾಜ್‍ಕುಮಾರ್, ಲೀಲಾವತಿ, ಭಾರತಿ ತಾರಾಗಣದಲ್ಲಿ ‘ಗಂಗೆ-ಗೌರಿ’ ಕನ್ನಡ ಚಿತ್ರವನ್ನು ತೆರೆಗರ್ಪಿಸಿ ಪ್ರೇಕ್ಷಕರೂ ಶಿವನ ಭಕ್ತರಾಗುವಂತೆ ಮಾಡಿದ್ದು ಮರೆಯುವಂತಿಲ್ಲ!
ಇತ್ತೀಚಿನ ವರ್ಷಗಳಲ್ಲಿ ಕಿಡಿಗೇಡಿಗಳು ಜಾಗರಣೆ ನೆಪದಲ್ಲಿ ರಾತ್ರಿಯಿಡೀ ಮನೆಯೊಳ[ಹೊರ]ಗೆ ಮದ್ಯಪಾನಮಾಡುವುದು, ನಡುರಸ್ತೇಲಿ ಜೂಜಾಡುವುದು, ಅಶ್ಲೀಲಚಿತ್ರ [ಪ್ರ]ದರ್ಶನ, ದೇವಸ್ಥಾನ(ಸಾರ್ವಜನಿಕಸ್ಥಳ)ದಲ್ಲಿ ಅಸಭ್ಯವರ್ತನೆ, ಬೈಕ್‍ವೀಲಿಂಗ್/ರ್ಯಾಶ್‍ಡ್ರೈವಿಂಗ್ ಸಂಚಾರ ನಿಯಮ-ಕಾನೂನು-ಸುವ್ಯವಸ್ಥೆ ಉಲ್ಲಂಘನೆ, ಸಮಾಜಘಾತುಕ ಚಟುವಟಿಕೆಗಳಿಂದ ಪಬ್ಲಿಕ್/ಪ್ರೈವೇಟ್ ಆಸ್ತಿಪಾಸ್ತಿ ನಷ್ಟ, ಸಮಾಜದ ಶಾಂತಿ-ನೆಮ್ಮದಿಗೆ ಭಂಗ, ಮಾಡುತ್ತಿರುವುದು ಶಿಕ್ಷಾರ್ಹ ಅಪರಾಧ?! ನಮ್ಮನ್ನು ಕಾಪಾಡಲು ಹಗಲುರಾತ್ರಿ ಶ್ರಮಿಸುತ್ತಿರುವ ಆರಕ್ಷಕರೊಡನೆ/ಅಧಿಕಾರಿಗಳೊಡನೆ ಕೆಲವು ಸಮಾಜಕಂಟಕ ಶಕ್ತಿ(ಪುಢಾರಿ)ಗಳು ದುರ್‍ವರ್ತನೆಯಿಂದ ನಡೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಅಶಾಂತಿಗೆ ಕಾರಣರಾಗುವ, ಕಾನೂನು ಕೈಗೆತೆಗೆದುಕೊಳ್ಳುವ ಯಾರೇಆಗಲಿ, ಉದ್ಧಟತನ ಮೆರೆದವರನ್ನು ಶಿಕ್ಷೆಗೆ ಗುರಿ ಪಡಿಸಬೇಕು, ಈವಿಷಯದಲ್ಲಿ ಎಲ್ಲರ ಸಹಾಯ-ಸಹಕಾರ ಇದ್ದೇ ಇರಬೇಕು?! ಬೇಡರಕಣ್ಣಪ್ಪ, ಶಿವರಾತ್ರಿಮಹಾತ್ಮೆ, ಭಕ್ತಸಿರಿಯಾಳ, ಶ್ರೀಮಂಜುನಾಥ, ಮುಂತಾದ ನೂರಾರು ಶಿವಲೀಲೆ ಮಹಿಮೆಗಳಿದ್ದು ಆಪೈಕಿ ಒಂದೆರಡಾದ್ರೂ ಚಿತ್ರ-ನಾಟಕ ಮೂಲಕ ಕಂಡು-ಕೇಳಿ ನಂಬಿದ್ದೇವೆ. ಮಹಾಶಿವರಾತ್ರಿಯಂದು ಯಥಾಶಕ್ತಿ ಭಕ್ತಿಯಿಂದ ಶಿವನನ್ನು ಪೂಜಿಸಿದರೆ ಪ್ರತಿಫಲ ಖಂಡಿತ!
“ಈಶ್ವರ ಅಲ್ಲಾ ತೇರೆನಾಮ್, ಸಬ್‍ಕೊ ಸನ್ಮತಿ ದೇಭಗವಾನ್”!

ಕುಮಾರಕವಿ ಬಿ.ಎನ್.ನಟರಾಜ ೯೦೩೬೯೭೬೪೭೧