ಕಥೆ ಹೇಳುವ ಅಭಿಯಾನದ ಮೂಲಕ ಮಹಾಶಿವರಾತ್ರಿಯನ್ನು ಆಚರಿಸಲು ಭಕ್ತರನ್ನು ಸೈಕಲ್ ಪ್ಯೂರ್ ಆಹ್ವಾನಿಸುತ್ತದೆ

– ನಿಮ್ಮ ನೆರೆಹೊರೆಯ ಶಿವ ದೇವಾಲಯದ ಕಥೆಗಳನ್ನು ಹಂಚಿಕೊಳ್ಳುವ ಮೂಲಕ #ಶಿವರಾತ್ರಿವಿತ್‍ಸೈಕಲ್ ಆಚರಿಸಿ

ಬೆಂಗಳೂರು, — ಮಾರ್ಚ್ 2022: ವಿಶ್ವದ ಅತಿದೊಡ್ಡ ಸುಗಂಧ ತಯಾರಕ ಸಂಸ್ಥೆಯಾದ, ಸೈಕಲ್ ಪ್ಯೂರ್ ಅಗರಬತ್ತಿ, 1 ಮಾರ್ಚ್, 2022 ರಂದು ಮಹಾಶಿವರಾತ್ರಿಯ ಅಂಗವಾಗಿ ತಮ್ಮ ನೆರೆಹೊರೆಯ ಶಿವ ದೇವಾಲಯಗಳ ಕಥೆಗಳನ್ನು ಹಂಚಿಕೊಳ್ಳಲು ಭಕ್ತರನ್ನು ಆಹ್ವಾನಿಸಿದ್ದಾರೆ. ಶಿವ ಭಕ್ತರು ಎಲ್ಲಕಡೆಗಳಲ್ಲಿ ಕಂಡುಬರುತ್ತಾರೆ ಮತ್ತು ಶಿವ ದೇವಾಲಯಗಳೂ ಎಲ್ಲೆಡೆ ಇವೆ; ಹಿಮಾಲಯದ ಎತ್ತರದ ಶಿಖರಗಳಲ್ಲಿನ ದೊಡ್ಡ ಸ್ಮಾರಕಗಳಿಂದ ಹಿಡಿದು ನೈಸರ್ಗಿಕ ಲಿಂಗಗಳನ್ನು ಹೊಂದಿರುವ ಗುಪ್ತ ಗುಹೆ ದೇವಾಲಯಗಳವರೆಗೆ, ಶಿವ ದೇವಾಲಯಗಳು ಎಲ್ಲ ಕಡೆಗಳಲ್ಲೂ ಇವೆ. ಪ್ರತಿಯೊಂದು ದೇವಾಲಯವು ತನ್ನದೇ ಆದ ಅನನ್ಯತೆಯನ್ನು ಹೊಂದಿದೆ. ಈ ಅಭಿಯಾನದ ಮೂಲಕ, ಭಕ್ತಿ ಮತ್ತು ಆಧ್ಯಾತ್ಮಿಕತೆಯ ಅರ್ಥವನ್ನು ಹರಡುವ ಗುರಿಯನ್ನು ಸೈಕಲ್ ಪ್ಯೂರ್ ಹೊಂದಿದೆ.

ಭಕ್ತರು #ಶಿವರಾತ್ರಿವಿತ್‍ಸೈಕಲ್ ಎಂಬ ಹ್ಯಾಶ್‍ಟ್ಯಾಗ್ ಅನ್ನು ಬಳಸಿಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಕಥೆಗಳನ್ನು ಹಂಚಿಕೊಳ್ಳಬಹುದು ಮತ್ತು www.cycle.in ನಿಂದ ಭಕ್ತಿಯ ಕೊಡುಗೆ ಹ್ಯಾಂಪರ್‍ಗಳನ್ನು ಗೆಲ್ಲಬಹುದು.

ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗ ಅವರು ಕಥೆ ಹೇಳುವ ಅಭಿಯಾನ ಕುರಿತು ಮಾತನಾಡಿ, “ಕಥೆ ಹೇಳುವುದರಲ್ಲಿರುವ ಶಕ್ತಿಯ ಮೂಲಕ ನಮ್ಮ ಪರಂಪರೆ, ಸಂಸ್ಕøತಿಯನ್ನು ಜೀವಂತವಾಗಿರಿಸಲಾಗಿದೆ. ಈ ಶಿವರಾತ್ರಿ ಸಂದರ್ಭದಲ್ಲಿ ಪ್ರಪಂಚದೊಂದಿಗೆ ತಮ್ಮ ನೆರೆಹೊರೆಯ ಶಿವ ದೇವಾಲಯಗಳ ಬಗ್ಗೆ ಆಕರ್ಷಕ ಕಥೆಗಳನ್ನು ಹಂಚಿಕೊಳ್ಳಲು ಭಕ್ತರನ್ನು ಸೈಕಲ್ ಆಹ್ವಾನಿಸುತ್ತದೆ. ಪ್ರತಿಯೊಂದು ಕಥೆಯೂ ಆಕರ್ಷಿಸಬಹುದು. ಪ್ರತಿಯೊಂದು ಕಥೆಯೂ ಸ್ಫೂರ್ತಿ ನೀಡಬಲ್ಲದು. ಹಾಗಾಗಿ ಜನರು ತಮ್ಮ ಶಿವ ದೇವಾಲಯದ ಕಥೆಗಳನ್ನು ನಮ್ಮ ಇನ್‍ಸ್ಟಾಗ್ರಾಮ್ ಹ್ಯಾಂಡಲ್‍ನಲ್ಲಿ ಹಂಚಿಕೊಳ್ಳಲು ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಎಷ್ಟೇ ಆದರೂ, ಶಿವರಾತ್ರಿಯು ಭಗವಾನ್ ಶಿವನ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳುವ ಸಮಯವಾಗಿರುತ್ತದೆ” ಎಂದರು.

ನಮ್ಮ ಸಂಪ್ರದಾಯದ ಪ್ರಕಾರ ಮಹಾಶಿವರಾತ್ರಿ ಪೂಜೆಯನ್ನು ನಿರ್ವಹಿಸಲು ಎಲ್ಲಾ ಪೂಜೆ ಅಗತ್ಯಗಳನ್ನು ಒಳಗೊಂಡಿರುವ ಸಂಪೂರ್ಣ ಶಿವಪೂಜಾ ಕಿಟ್ ಅನ್ನು ಕೂಡ ಮೈಸೂರು ಮೂಲದ ಬ್ರ್ಯಾಂಡ್ ನೀಡುತ್ತದೆ. ಭಕ್ತರು ಪ್ಯೂರ್ ಪ್ರೇಯರ್ ಆ್ಯಪ್‍ನಲ್ಲಿ ಮಹಾಶಿವರಾತ್ರಿ ಪೂಜೆಗೆ ಸಹ ಹಾಜರಾಗಬಹುದು.