ಗುಂಡ್ಲುಪೇಟೆ: ತಾಲೂಕಿನ ಬಸವಾಪುರ ಗ್ರಾಮದ ಮದರಸ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಹಾಗು ಬಸವಪುರ ಗ್ರಾಮದ ಯುವಕರು ತಹಸೀಲ್ದಾರ್ ಸಿ.ಜಿ.ರವಿಶಂಕರ್‍ಗೆ ಮನವಿ ಸಲ್ಲಿಸಿದರು.

ಬಸವಾಪುರ ಗ್ರಾಮಸ್ಥರ ವಿರೋಧ ಹಾಗು ಗ್ರಾಪಂ ಸದಸ್ಯರು ಕೂಡ ಮದರಸ ನಿರ್ಮಾಣ ಬೇಡ ಎಂದು ತೀರ್ಮಾನಿಸಿದ್ದರು. ಆದರೂ ಕಟ್ಟಡದ ನಿರ್ಮಾಣ ನಡೆಯುತ್ತಿದೆ ಎಂದು ದೂರಿನÀಲ್ಲಿ ತಿಳಿಸಿದ್ದಾರೆ.

ಮದರಸ ಕಟ್ಟಡ ನಿರ್ಮಾಣ ನಡೆಯುತ್ತಿದ್ದರೂ ಪುತ್ತನಪುರ ಗ್ರಾಪಂ ಅಧಿಕಾರಿಗಳು ಮೌನ ವಹಿಸಿದ್ದಾರೆ.ಕೂಡಲೇ ಮದರಸ ಕಟ್ಟಡ ತೆರವು ಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಮಯದಲ್ಲಿ ಹಿಂದೂ ಜಾಗರಣಾ ವೇದಿಕೆ ಸಂಚಾಲಕ ನಂದೀಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಪ್ರಣಯ್, ಶಿವಪು ಮಂಜು ಸೇರಿದಂತೆ ಬಸವಪುರ ಗ್ರಾಮದ ಯುವಕರು ಇದ್ದರು.

ವರದಿ: ಬಸವರಾಜು ಎಸ್.ಹಂಗಳ