ಚಂದನ – ಸ್ಪಂದನ ಗ್ರೂಪ್ಸ್ ವತಿಯಿಂದ ಕುವೆಂಪುನಗರದ ಅನಿಕೇತನ ರಸ್ತೆಯ ಚಂದನ ಮನೆಯ ಮೇಲ್ಚಾವಣಿಯಲ್ಲಿ ತ್ರಿವರ್ಣ ಧ್ವಜರೋಹಣವನ್ನು ಸ್ಪಂದನ ಆದ್ಯಕ್ಷ ಎಂ.ಜಯಶಂಕರ್ ನೆರವೇರಿಸಿ , ಮಾತನಾಡುತ್ತಾ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳನ್ನು ಕೋರಿ, ನಮ್ಮೆಲ್ಲರ ರಕ್ಷಾ ಕವಚವಾದ ಸೈನಿಕರಿಗೆ , ಅನ್ನದಾತರಾದ ರೈತ ಬಂಧುಗಳಿಗೆ ನನ್ನ ಪ್ರಣಾಮಗಳು. ಸ್ವಾತಂತ್ರ್ಯ ಎಂಬ ಪದವೇ ಅನನ್ಯವಾದದು, ಮೈಮನಗಳು ತುಂಬಿ ರೋಮಾಂಚನ ಉಂಟುಮಾಡುವ ನಿಲ್ಲುವಂತ ಶಕ್ತಿಯುಳ್ಳ ಪದ ಸ್ವಾತಂತ್ರ್ಯ. ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಲಕ್ಷಾಂತರ ಜನರ ಕನಸಿನ ಫಲ, ಬಸಿದ ರಕ್ತದ ಬನಿ. ಅದರ ಅರಿವು ನಮಗಿರಬೇಕಿದೆ. ಸ್ವಾವಲಂಬನೆ, ಸ್ವಾಭಿಮಾನ, ಸಚ್ಚಾರಿತ್ರ, ಸಮಾನತೆಯನ್ನು ಸಾಧಿಸುವುದೇ ಸ್ವಾತಂತ್ರ್ಯದ ಮೂಲ ಮಂತ್ರ. ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯವು ಲಕ್ಷಾಂತರ ಜನರ ಬಲಿದಾನ ತ್ಯಾಗದಿಂದ ಲಭಿಸಿದ್ದಾಗಿದೆ. ಇಂದು ಭಯೋತ್ಪಾದನೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸ್ವಹಿತಾಸಕ್ತಿಮುಕ್ತವಾದ ಸಮಾಜಕ್ಕಾಗಿ ನಿರಂತರ ಪ್ರಯತ್ನ ಮಾಡಬೇಕಿದೆ. ಆಗ ಮಾತ್ರ ನಮ್ಮ ಹಿರಿ ಯರ ಸ್ವಾತಂತ್ರ್ಯದ ಕನಸಿನ ಸೌಧಕ್ಕೆ ಒಂದು ಬಂಗಾರದ ಕಳಶವಿಟ್ಟು ಪೂರ್ಣಗೊಳಿಸಿದಂತಾಗುತ್ತದೆ.

ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಮುಖ್ಯವಾದವರು ಮಹಾತ್ಮಗಾಂಧಿಜಿ,ನೆಹರು, ಸುಭಾಶ್ ಚಂದ್ರ ಬೋಸ್,
ಸರ್ದಾರ್ ವಲ್ಲಭಾಯ್ ಪಟೇಲ್. ಲೋಕಮಾನ್ಯ ಬಾಳ pಗಂಗಾಧರ ತಿಳಕ, ಲಾಲ್ ಬಹದ್ದೂರ್ ಶಾಸ್ತ್ರಿ, ಭಗತ್ ಸಿಂಗ್,ರಾಜೇಂದ್ರ ಪ್ರಸಾದ್ಇನ್ನು ಮುಂತಾದ ಅನೇಕ ಗಣ್ಯರು ಇದ್ದಾರೆ ಅವರಿಗೆಲ್ಲ
ನನ್ನ ಬಿಗ್ ಸಲ್ಯೂಟ್.

ವ್ಯಾಪಾರಕ್ಕೆ ಬಂದ ಪೋರ್ಚುಗೀಸರು ಅನಂತರದ ಡಚ್ಚರು ಬ್ರಿಟಿಷರು ತಕ್ಕಡಿಯ ಜೊತೆ ಕತ್ತಿ ಹಿಡಿದರು, ಭಾವನಾತ್ಮಕವಾಗಿ ನಮ್ಮನ್ನು ಹಣಿದು ಎರಡು ಶತಮಾನಗಳು ನಮ್ಮನ್ನು ಆಳಿದರು. ಮೈಸೂರು ಪ್ರಾಂತ್ಯದ ಸ್ವತಂತ್ರ ಹೋರಾಟಗಾರರಲ್ಲಿ ತಗಡೂರು ರಾಮಚಂದ್ರ ರಾಯರು, ಎಂ ಎಸ್ ಜೋಹಿಸ್, ಟಿ ಎಸ್ ಸುಬ್ಬಣ್ಣ ,ತಾತಯ್ಯ ಇವರೆಲ್ಲ ತಮ್ಮ ಸ್ವಾತಂತ್ರದ ಚಳುವಳಿಯ ಚಟುವಟಿಕೆಯನ್ನು ಸುಬ್ಬರಾಯನ ಕೆರೆಯ ಮೈದಾನದಲ್ಲಿ ಮಾಡುತ್ತಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ಆಳ್ವಿಕೆಯಲ್ಲಿ ಜನರ ನೀರಿನ ಬವಣೆಯನ್ನು ನೀಗಿಸಲು ಒಡೆಯರ ಆಪ್ತರಾದ ಸುಬ್ಬರಾಯ ದಾಸರು ತಮ್ಮ ತೋಟದಲ್ಲಿಯೇ ಬಾವಿಯನ್ನು ತೋರಿಸಿದ್ದರು. ಆ ತೋಟದ ಜಾಗವೇ ಎಂದು ಉದ್ಯಾನವನವಾಗಿದೆ. ಅಂದು ಸ್ವತಂತ್ರ ಹೋರಾಟಗಾರರೆಲ್ಲ ತಮ್ಮ ಚಟುವಟಿಕೆಗೆ ತಾಣವಾಗಿಸಿಕ್ಕೊಂಡಿದ್ದರಿಂದ ಇಂದು ಅದು ಸ್ವಾತಂತ್ರ ಹೋರಾಟಗಾರರ ಉದ್ಯಾನವನ ಎನಿಸಿದೆ.