ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ M ಅಪ್ಪಣ್ಣನವರು ಇಂದು ಮೈಸೂರಿನ ಪ್ರಸಿದ್ಧ ಹೋಟೆಲ್ ಆದ ಲಲಿತ್ ಮಹಲ್ ಗೆ ಭೇಟಿ ನೀಡಿ ಮಹಲ್ ನಲ್ಲಿ ನಡೆಯಬೇಕಿರುವ ದುರಸ್ಥಿ ಕಾರ್ಯಗಳನ್ನು ವೀಕ್ಷಣೆ ಮಾಡಿ, ಹೋಟೇಲ್ ನ ಸ್ವಚ್ಛತೆ, ಪ್ರವಾಸಿಗರ ಸುರಕ್ಷತೆ, ಹೋಟೆಲ್ ನ ನಿರ್ವಹಣೆ, ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರಾದ ಶಿವಕುಮಾರ್ ರವರು, ಪ್ರಭಾಕರ್ ಹುಣಸೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ರವರು, ಲಲಿತ್ ಮಹಲ್ ನ ಮ್ಯಾನ್ಯಜರ್ ಆದ ಅನಿಕೇತ್ ರವರು, ಆಸಿಫ್, ನೂರಿ, ಸೋಮನಾಯಕ.ಮಲ್ಲಿಕಾರ್ಜುನ.ಮಧುವನಕುಮಾರ್. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.