2020ರ ನವೆಂಬರ್ 8ರಂದು ಯಶ್ವಿನ್ ಸಿನಿ ಪ್ರೊಡಕ್ಷನ್ಸ್ ಹೌಸ್ ,ನ ಸಿನಿತಂಡವು  “ಲವ್ ಸ್ಟೋರಿ  1998” ಕನ್ನಡ ಚಿತ್ರಕ್ಕೆ ಮುಹೂರ್ತ ಸ್ಥಾಪಿಸಿ ಎರಡು ವರ್ಷಗಳ ಅವಿರತ ಪರಿಶ್ರಮ ಪಟ್ಟಿದ್ದರಿಂದ ಕನ್ನಡ ಸಿನಿ ರಸಿಕರಿಗೆ ಹೊಚ್ಚ ಹೊಸ ಸಿನಿಕಥೆಯೊಂದಿಗೆ ಇದೇ ತಿಂಗಳ 30 ರ ಶುಕ್ರವಾರದಂದು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದೆ. ಸಿನಿಮಾದಲ್ಲಿ ನಾಯಕ ನಟ ಮಿಥುನ್, ನಾಯಕ ನಟಿ ಕೃತಿಕ ಅಭಿನಯದಲ್ಲಿ ಹೊಸ ಛಾಪನ್ನು ಮೂಡಿಸುತ್ತ ಸಿನಿಮಾಗೆ ಮೆರುಗು ಕೊಟ್ಟಿರುವುದು ಟೀಸರ್, ಟ್ರೈಲರ್’ನಿಂದಾಗಿ ಗುರುತಾಗಿದೆ. ಹೊಸ ಪಾತ್ರಗಳು ಸಿನಿಮಾ ಪೂರ್ತಿ ಹರಿದಾಡಿವೆ.

ಹೊಸ ವರುಷದ ಹರುಷ ಕಾಣಲು ಸಜ್ಜಾಗುತ್ತಿರುವ ಎಲ್ಲರ ಹರುಷವನ್ನು ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ “ಲವ್ ಸ್ಟೋರಿ 1998” ಸಿನಿತಂಡ ಎಲ್ಲೆಡೆ ಸದ್ದು ಮಾಡುತ್ತಾ ಪ್ರೇಕ್ಷಕರನ್ನು ಸಿನಿಮಾ ಥಿಯೇಟರ್ ಕಡೆಗೆ ರಾಜ್ಯಾದ್ಯಂತ ಆಹ್ವಾನಿಸುತ್ತಿದೆ. ಲವ್’ಸ್ಟೋರಿ 1998 ಸಿನಿ ಕಥೆಯ ಸುಳಿವನ್ನು ನಿರ್ದೇಶಕರಾದ ನಾಗರಾಜು ತಲಕಾಡು ಅವರು ಬಿಟ್ಟುಕೊಡದಿದ್ದರೂ ಸಿನಿಮಾ ಟೀಸರ್, ಟ್ರೈಲರ್, ಚಿತ್ರದ ಹಾಡುಗಳು ಕಥೆಯ ಸ್ವಾರಸ್ಯವನ್ನು ಸಾರುತ್ತಿದೆ. ಯೂಟ್ಯೂಬ್’ನಲ್ಲಿ ಚಿತ್ರದ ಹಾಡುಗಳು ಭಾರಿ ಮಟ್ಟದಲ್ಲಿ ಕೇಳುಗರ ಮನಸೂರೆಗೊಳ್ಳುತಾ ಎಲ್ಲರ ಗುಣಗಾನವಾಗುತ್ತಿದೆ. ಯುವಕರ ಹೃದಯ ತಾಳಹಾಕುವ ಹಾಗೆ ಚಿತ್ರದ  ಹಾಡುಗಳು ರಚನೆಯಾಗಿರುವುದು ಸಿನಿಮಾದ ವೈಶಿಷ್ಟ್ಯತೆಯಲ್ಲಿ ಒಂದು . ಕಾಲೇಜು ಎಂಬುದೊಂದು ಎಂಬ ಗೀತೆ ಗುರು – ಶಿಷ್ಯರ ಬಗ್ಗೆ, ಕಾಲೇಜು ದಿನಗಳ ಚೆಲ್ಲಾಟ ತುಂಟಾಟದ ಬಗ್ಗೆ ತಿಳಿಸುತ್ತಿದೆ. ಪ್ರೀತಿಸೋಣ ಬಾರೆ ಎಂಬ ಗೀತೆಯು ಪ್ರೇಮದ ಕಂಪುನ್ನು ಸೂಸುತ್ತಿದೆ. ಬಾಳಿನಲ್ಲಿ ಬೆಳದಿಂಗಳ ಚೆಲ್ಲಿ ಎಂಬ ಗೀತೆ  ಪ್ರೇಮಿಗಳು ಒಂದಾಗುವ ಸಂದರ್ಭವನ್ನು ಮತ್ತು ಹೆಜ್ಜೇನ ಹನಿ ಎಂಬ ಗೀತೆ  ಹುಡುಗಿಯನ್ನು ಪ್ರೇಮದ ಬಲೆಗೆ ಸೆಳೆಯುವ ಹುಡುಗನ ಪ್ರೇಮದ ಪ್ರಯತ್ನಗಳು ಹಾಗೂ ಪ್ರೀತಿ ರೂಪುಗೊಂಡ ಬಗೆಯನ್ನು ಬಣ್ಣಿಸುತ್ತಿದೆ. ಹಳೇ ಲವ್ವರ್ ಎಂಬ ಗೀತೆಯು ಕೈಕೊಟ್ಟ ಹುಡುಗಿಯ ಬಗ್ಗೆ ನೊಂದ ಪ್ರೇಮಿಯ ಪರದಾಟ ತೊಳಲಾಟವನ್ನು ಬಣ್ಣಿಸುತ್ತಿದೆ.ನೀನೇ ಬೇಕು, ಎಂಬ ಗೀತೆಯು ಪ್ರೇಮ ವಿರಹದ ಆಳ ಭಾವನೆಗಳನ್ನು ಸಾರುತ್ತಿದೆ. ಇಷ್ಟೆಲ್ಲಾ ಪ್ರೇಮದ ಅನುರಾಗದ ಸಿನಿಮಾ ಮಾಸ್ ಸಿನಿಮಾ ಕೂಡ ಹಾಗಿದ್ದು ಒಳ್ಳೆಯ ಸ್ಟಂಟ್ ಗಳು ಮೂಡಿ ಬಂದಿವೆ. ಒಂದು ದಶಕದ ಹಿಂದಕ್ಕೆ ಸಿನಿ ಕಥೆಯು ಪ್ರೇಕ್ಷಕರನ್ನು ಕೊಂಡೊಯ್ಯುವ ಸುಳಿವನ್ನು ಟೀಸರ್, ಟ್ರೈಲರ್ ನಿಂದಾಗಿ ಸಿನಿಮಾ ಬಿಟ್ಟುಕೊಟ್ಟಿದೆ‌……