ಬಂಗಾರಪೇಟೆ: ಮಾನ್ಯ ರವಿಶಂಕರ್ ಅಬಕಾರಿ ಉಪ ಆಯುಕ್ತರು ಕೋಲಾರ ಜಿಲ್ಲೆರವರ ನಿರ್ದೇಶನದ ಮೇರೆಗೆ ನರಸಿಂಹಮೂರ್ತಿ ಅಬಕಾರಿ ಉಪ ಅಧೀಕ್ಷಕರು ಕೆ.ಜಿ.ಎಫ್ ಉಪ ವಿಭಾಗದವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯತಿ ಚುನಾವಣಾ ಹಿನ್ನೆಲೆಯಲ್ಲಿ ಕೆ.ಜಿ.ಎಫ್ ತಾಲ್ಲೂಕು ಪಾರಾಂಡಹಳ್ಳಿ ಪಂಚಯತಿ ವ್ಯಾಪ್ತಿಯ ಪಾರಾಂಡಹಳ್ಳಿ ಗ್ರಾಮದ ಜಾರ್ಜ್ ರಾಜೇಶ್ವರಿ ರವರ ಮನೆಯಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಬಂದಿದ್ದು ಧಾಳಿ ಮಾಡಲಾಗಿ ಸುಮಾರು ೮೨.೦೮೦ಲೀ ಮದ್ಯ ದೊರೆತಿದ್ದು ಮಾಲನ್ನು ಜಪ್ತುಪಡಿಸಿ ಸ್ಥಳದಲ್ಲಿದ್ದ್ ಆರೋಪಿ ಜಾರ್ಜ್‌ನನ್ನು ದಸ್ತಗಿರಿ ಮಾಡಿ ನ್ಯಾಯಾಲಕ್ಕೆ ಹಾಜರುಪಡಿಸಿದೆ. ವಲಯದ ನಿರೀಕ್ಷಕರಾದ ಶ್ರೀಮತಿ ಎಂ.ಆರ್. ಸುಮ ರವರು ಮೊಕದ್ದಮೆ ದಾಖಲಿಸಿದ್ದು ಅಉನಿ ಯವರಾದ ಶಿವಶಂಕರ್ ಎಂ.ಆರ್‌ಸಿಬ್ಬಂದಿಯಾದ ಲಕ್ಷ್ಮಣ ಮಾದಾರ, ಶಿವಶಂಕರ್, ಅಂಬಾಸಾಪವಾರ, ಮಂಜುನಾಥ ಹಣಮಂತರವರು ಹಾಗೂ ವಾಹನ ಚಾಲಕರಾದ ಸುಬ್ರಮಣಿ ಧಾಳಿಯಲ್ಲಿ ಭಾಗವಹಿಸಿದ್ದರು.

By admin