ಲಿಂಗಾಂಬೂದಿಪಾಳ್ಯ ಕೆರೆಗೆ ಕೆ.ಆರ್.ಎಸ್.ನಿಂದ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಈ ಕೆರೆಗೆ ಕೊಳಚೆ ನೀರು ಹೋಗುತ್ತಿರುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ‌ ಜಿ.ಟಿ.ದೇವೇಗೌಡ ಸೂಚನೆ ನೀಡಿದರು.

ಕೆರೆಗೆ ಹೋಗುತ್ತಿರುವ ಕೊಳಚೆ ನೀರನ್ನು ತೆಡೆಯುವ ಸಂಬಂದ ಸಭೆಯನ್ನು ಶಾಸಕರ ಕಛೇರಿಯಲ್ಲಿ ನಡೆಸಲಾಯಿತು.

ಮೈಸೂರು ನಗರದ ದಟ್ಟಗಳ್ಳಿಗೆ ಹೊಂದಿಕೊಂಡಂತೆ ಇರುವ ಲಿಂಗಾಬೂದಿಕೆರೆಗೆ ಒಳಚರಂಡಿ ನೀರು ಬರುತ್ತಿದ್ದು ಇದರಿಂದ ಕೆರೆ ಮಲಿನಗೊಳ್ಳುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಹಾಗೂ ಮೂಡಾ ಆಯುಕ್ತರಿಗೆ ಸೂಚನೆ ನೀಡಲಾಯಿತು‌

ಮಳೆ ನೀರು ಚರಂಡಿಗೆ ಗ್ರೀಲ್ ಅಳವಡಿಸಲು ಸೂಚಿಸಲಾಯಿತು, ಪ್ರತಿ ಹದಿನೈದು ದಿನಕ್ಕೊಮ್ಮೆ ಗ್ರಿಲ್ ನ್ನು ಸ್ವಚ್ಚಗೊಳಿಸಲು ಸೂಚಿಸಲಾಯಿತು.

ನಂತರ ವಿಜಯನಗರ 3ನೇ ಹಂತದ ಒಳಚರಂಡಿ ಸಮಸ್ಯೆ ಗೆ ಸಂಬಂಧಿಸಿದಂತೆ ಕೂಡಲೆ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.
ಮೂಡಾವತಿಯಿಂದ ಕಾಮಗಾರಿ ಕೈಗೊಳ್ಳುವುದಾಗಿ ಮೂಡಾ ಆಯುಕ್ತರು ತಿಳಿಸಿದರು.
ಪಾಲಿಕೆ ಆಯುಕ್ತರಾದ ಗುರುದತ್ತ ಹೆಗಡೆ, ಡಿ.ಎಫ್.ಓ. ಪ್ರಶಾಂತ್, ಮೂಡಾ ಆಯುಕ್ತರಾದ ನಟೇಶ್, ಮೂಡಾ ಅಧೀಕ್ಷಕ ಅಭಿಯಂತರಾದ ಶಂಕರ್, ಪಾಲಿಕೆ ಅಧೀಕ್ಷಕ ಅಭಿಯಂತರಾದ ಬಿಳಿಗಿರಿ, ಮೂಡಾ ವಲಯಾಧಿಕಾರಿಗಳಾದ ಕಿರಣ್, ನಾಗೇಶ್, ಪಾಲಿಕೆಯ ಕೆಂಪೇಗೌಡ ಹಾಜರಿದ್ದರು

By admin