ಸನ್ಮಾನ್ಯ ಮೈಸೂರು ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ರವರು ಶ್ರೀ ಸ್ವಾಮಿ ವಿವೇಕಾನಂದರ 150ನೇ ಜಯಂತಿಯ ಪ್ರಯುಕ್ತ ಭಾನುವಾರ ಬೆಳಿಗ್ಗೆ ಆರು ಗಂಟೆಗೆ ಮೈಸೂರು ನಗರದಲ್ಲಿ ನಡೆಯುವ ಕಾಲ್ನಡಿಗೆ ಜಾಥಾದ ಉತ್ತಮನಾಗು ಉಪಕಾರಿಯಾಗು ಕಾರ್ಯಕ್ರಮದ ಪತ್ರಗಳನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಶ್ರೀವತ್ಸ ಜೀ ಯುವ ಮೋರ್ಚಾ ಅಧ್ಯಕ್ಷ ಎಂ ಜೆ ಕಿರಣ್ ಗೌಡ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರಾಜೇಂದ್ರ ವಿಭಾಗ ಪ್ರಭಾರಿಗಳ ರವಿ ಶಂಕರ್ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳು ಯುವಮೋರ್ಚಾ ಪದಾಧಿಕಾರಿ ಬಂಧುಗಳು ಭಾಗವಹಿಸಿದ್ದರು.