ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಧಾನಮಂತ್ರಿ ಆಗಬೇಕಾಗಿದ್ದವರು, ಡಾ.ಬಿ.ಆರ್.ಅಂಬೇಡ್ಕರ್,ಸರ್ದಾರ್‌ಪಟೇಲ್, ರಾಜೇಂದ್ರಪ್ರಸಾದ್ ಈ ಮೂವರಲ್ಲೊಬ್ಬರು? ಉತ್ತಮ ಅರ್ಹರೂ ಅನುಭವಿ ಆಡಳಿತಗಾರರೂ ಆಗಿದ್ದ ಇಂಥ ಮಹನೀಯರಿಗೆ ಪ್ರಧಾನಿ ಗದ್ದುಗೆ ಲಭಿಸಲಿಲ್ಲ ಏಕೆ..?!

ಅಂದು ಪ್ರಥಮ ಪ್ರಧಾನಿ ಗದ್ದುಗೆ ಏರಲು ಹಾತೊರೆಯುತ್ತಿದ್ದವರು ನೆಹರು ಮತ್ತು ಮಹಮದಲಿ ಜಿನ್ನ. ತತ್ಪರಿಣಾಮ, ಸರ್ದಾರ್‌ಪಟೇಲ್, ಬಾಬಾಸಾಹೇಬ್ ಬಿ.ಆರ್.ಅಂಬೇಡ್ಕರ್, ರಾಜೇಂದ್ರಪ್ರಸಾದ್, ಈ ಮೂವರು ಮಹನೀಯರು ಸ್ವಯಂ ಪ್ರೇರಿತರಾಗಿ ಪ್ರಧಾನಿ ಆಕಾಂಕ್ಷೆಯಿಂದ ಹಿಂದೆ ಸರಿದು ದೇಶಾಭಿಮಾನದ ತ್ಯಾಗಮೂರ್ತಿ ಗಳಾದರು! 1947ರಲ್ಲಿ ಇಂಗ್ಲೆಂಡಲ್ಲಿ ಜರುಗಿದ ಹಲವಾರು ಸುತ್ತಿನ ಸಭೆಯಲ್ಲೂ ಭಾರತ-ವಿಭಜನೆ ಸಮಸ್ಯೆ ಬಗೆಹರಿಯಲಿಲ್ಲ. ಹಠ ಬಿಡದ ಜಿನ್ನಾ ಪಾಕಿಸ್ತಾನ್ ಪ್ರತ್ಯೇಕ ವಿಭಜನೆ ಬೇಕೇಬೇಕು ಅಥವ ಪ್ರಧಾನಿಪದವಿ ನನಗೇಬೇಕು ಎಂಬ ಷರತ್ತನ್ನು ಗಾಂಧೀಜಿ ಮತ್ತು ಬ್ರಿಟಿಷ್ ಅಧಿಪತ್ಯದ ಮುಂದಿಟ್ಟಾಗ ಚರ್ಚೆಯು ಗಂಭೀರ ಸ್ವರೂಪ ತಾಳಿತು?!

ಬ್ರಿಟಿಷ್ ದೊರೆ ಮತ್ತು ರಾಣಿ ಚಕ್ರಾಧಿಪತ್ಯವು  ಗಾಂಧೀಜಿ ಮತ್ತು ಮಿತ್ರರಿಗೆ ಕಟ್ಟಾಜ್ಞೆ ಮಾಡಿ; ನೀವೆಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದ ನಂತರವೆ ಭಾರತವನ್ನು ಸ್ವತಂತ್ರ ಗೊಳಿಸುವ ಬ್ರಿಟಿಷ್ ಒಪ್ಪಂದವನ್ನು ಪೂರ್ಣ ಗೊಳಿಸ ಲಾಗುವುದು ಎಂಬ ವಾರ್ನಿಂಗ್ ನೀಡಿತು! ತೀರಾ ಹದಗೆಟ್ಟ ಆ ಸಂದಿಗ್ಧ ಸಂದರ್ಭದಲ್ಲಿ ಗಾಂಧೀಜಿಯು ಸಿಟ್ಟಿನಿಂದ: “ನೆಹರೂ ಬೇಡ, ಜಿನ್ನಾ ಬೇಡ, ಸರ್ದಾರ್ ಪಟೇಲ್ ಪ್ರಧಾನಿ ಯಾಗಲಿ” ಎಂದು ಗುಡುಗಿದರು. ಆಗ ಅಲ್ಲಿದ್ದ ಎಲ್ಲರೂ ಒಕ್ಕೊರಲಿಂದ ನಾವ್ಯಾರು ಬೇಡವೇ ಬೇಡ ನೀವೇ ಬೇಕಾದರೆ ಪ್ರಧಾನಿಯಾಗಿ ಎಂದು ಬಾಪೂಜೀಯನ್ನ ಒತ್ತಾಯ ಮಾಡಿದರು. ಆಗ ಗಾಂಧಿಜೀ ಒಂದ್ಸಲ ತಮ್ಮ ಕತ್ತನ್ನು ಗೋಣಾಡಿಸಿದ್ದರೆ ಸಾಕಾಗಿತ್ತು? ಆತನೇ ದೇಶದ ಮೊಟ್ಟಮೊದಲ ಪ್ರಧಾನಿ ಆಗ ಬಹುದಾಗಿತ್ತು, ಆದರೆ ಕಿಂಗ್‌ಮೇಕರ್ ಗಾಂಧಿ ಕಿಂಗ್ ಆಗಲೇಇಲ್ಲ? ಅನಗತ್ಯವಾಗಿ ನೆಹರು ಮತ್ತು ಜಿನ್ನ ಸೃಷ್ಟಿಸಿದ ಕೆಟ್ಟಹಠದಿಂದ ದೇಶವು ವಿಭಜನೆಯಾದ ನಂತರವೇ ಸ್ವತಂತ್ರ ದೊರಕಿತು!

ಆಪರೇಶನ್ ಪೋಲೊ:-
ಸ್ವಾತಂತ್ರ್ಯಗೊಂಡ ಮೊದಲ ದಿನದಿಂದಲೆ ಭಾರತದೊಳಗೆ ನೂರಾರು ಸಮಸ್ಯೆಗಳಿದ್ದವು. ಆಪೈಕಿ ಮೊದಲನೇದು, ಹರಿದು ಹಂಚಿ ಹೋಗಿದ್ದ ಇಂಡಿಯವನ್ನು ಒಂದುಗೂಡಿಸುವ ಬೃಹತ್‌ ಕಾರ್ಯ. ಈ ನಿಟ್ಟಿನಲ್ಲಿ ದೇಶದ ಪ್ರಥಮ ಉಪಪ್ರಧಾನಿ ಹಾಗೂ ಗೃಹಮಂತ್ರಿ ಸರ್ದಾರ್‌ ಪಟೇಲ್ ಪ್ರಾರಂಭಿಸಿದ ಕ್ರಾಂತಿ ಕಾರ್ಯವೇ ಆಪರೇಶನ್ ಪೋಲೊ!ಪರಂಗಿಯವರನ್ನು ಗಾಂಧಿಗಿರಿಯಿಂದ ಗೆದ್ದಿದ್ದ ಗಾಂಧಿಜೀ ರಾಷ್ಟ್ರದ ಒಳಗಿನ ಪ್ರಾಂತ್ಯ-ರಾಜ್ಯ, ಭೂತುಕ್ಡ-ತುಂಡುಗಳನ್ನು ಒಂದುಗೂಡಿಸಲು ಅನಿವಾರ್ಯ ಆಗಿದ್ದ ಸಣ್ಣಪುಟ್ಟ ಪಾಳೇಗಾರ, ಸಾಮಂತ,ಮಹಾರಾಜ,ನವಾಬರ,ಮನವೊಲಿಸೆ ಸತ್ಯಾಗ್ರಹ ಕೈಗೊಳ್ಳುವಂತಾಯ್ತು. ಆಜಾದ್ ನಂತರವೂ ದೇಶಾದ್ಯಂತ ದರ್ಬಾರ್ ನಡೆಸುತ್ತಿದ್ದ 25ಕ್ಕೂ ಹೆಚ್ಚು ದೊರೆಗಳ ಪೈಕಿ ಬಹುತೇಕರು ಸಹಕಾರ ನೀಡಲೊಪ್ಪಿದರು. ಆದರೆ ಹೈದ್ರಾಬಾದ್ ನಿಜಾಮ ಮತ್ತು ಪಾಂಡಿಚೇರಿ-ಗೋವ ಆಳುತ್ತಿದ್ದ ಫ್ರೆಂಚರು ತಮ್ಮ ಸರ್ವಾಧಿಕಾರದ ಉದ್ಧಟತನದಿಂದ ಅಂತರ್‌ಯುದ್ಧಕ್ಕೂ ಸೈ ಎಂದು ಭಂಡಾಟದ ಅಸಹಕಾರ ತೋರಿದರು. ಇವರನ್ನೆಲ್ಲ ಬಗ್ಗುಬಡಿಯಲು ಗಾಂಧಿ-ನೆಹರು ತಿಣುಕಾಡ ಬೇಕಾಯ್ತು!

ಇಂಥ ಸಂಧಿಗ್ಧ ಪರಿಸ್ಥಿತಿಯಲ್ಲಿ ಗಾಂಧಿ-ನೆಹರು ಮಿತ್ರಮಂಡಲಿಗೆ ಆಪತ್ಭಾಂಧವರಾದ ಸರ್ದಾರ್ ಪಟೇಲ್ ತಮ್ಮದೇಆದ ದಾದಾಗಿರಿ ಅಸ್ತ್ರದಿಂದ ಒಳಶತ್ರುಗಳ ಹೆಡೆಮುರಿ ಕಟ್ಟಿ ದೇಶವನ್ನು ಒಂದೇಅಸ್ಮಿತೆ ಆಗಿಸಲು ಹಗಲು ರಾತ್ರಿ ಶ್ರಮಪಟ್ಟು ಯಶಸ್ವಿಯೂ ಆದರು. ಗಾಂಧಿ-ನೆಹರು ಆದಿಯಾಗಿ ಪ್ರತಿಯೊಬ್ಬರು ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕೊಂಡಾಡಿದರು!

1947ರಲ್ಲಿ ಭಾರತದ ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಅಧ್ಯಕ್ಷತೆಯಲ್ಲಿ ಕಾನೂನು ಸಚಿವರಾಗಿದ್ದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಂವಿಧಾನ ಸಮಿತಿ ರಚಿಸಲಾಯಿತು. ಸಂವಿಧಾನದ ರಚನೆಗೂ, ಗಣರಾಜ್ಯ ಸ್ಥಾಪನೆಗೂ ಮುನ್ನ ಭಾರತ ಒಂದೇ ದೇಶವಾಗಿ ರೂಪುಗೊಳ್ಳಬೇಕಿತ್ತು. ಸಂವಿಧಾನದ ಬರವಣಿಗೆ ಮುಗಿಯುವ ಅವಧಿಯೊಳಗೆ ಸಮಗ್ರ ಭಾರತದ ನಿರ್ಮಾಣ ಅಗತ್ಯವಾಗಿತ್ತು? ಆದ್ದರಿಂದ ಸರ್ದಾರ್‌ ಪಟೇಲ್ 16.8.1947ರಿಂದಲೇ ದೇಶದ್ರೋಹಿ ಮತ್ತು ಆಂತರ್ದೇಶಿ ಶತ್ರುಗಳ ವಿರುದ್ಧ ಯುದ್ಧಕ್ಕೆ ನಾಂದಿ ಹಾಡಿ ಪ್ರಚಂಡ ಗೆಲುವು ಸಾಧಿಸಿದರು!

ಈ ಐತಿಹಾಸಿಕ ಕಾರಣಕ್ಕಾಗಿಯೇ ಬಾಬಾ ಸಾಹೇಬರಿಗೂ ಮತ್ತು ಸರ್ದಾರ್ ಪಟೇಲರಿಗೂ ಪ್ರತಿಯೊಬ್ಬ ಭಾರತೀಯನೂ ಪ್ರತಿಘಳಿಗೆ ಕೃತಜ್ಞತೆ ಸಲ್ಲಿಸಬೇಕಾದ್ದು ಆದ್ಯ ಕರ್ತವ್ಯ. ಭಾರತದ ಸಂವಿಧಾನ ರಚನೆಯು 26.11.1949 ರಂದು ಸಿದ್ಧಗೊಂಡು ಸಂವಿಧಾನ ಸಮಿತಿ, ಮಂತ್ರಿಮಂಡಲ ಹಾಗೂ ರಾಷ್ಟ್ರಪತಿಗಳ ಅನುಮೋದನೆ ಪಡೆಯಿತು. 26.1.1950ರಿಂದ ಜಾರಿಗೆ ಬಂದು ಇದೇದಿನ ದೇಶದ ಚೊಚ್ಚಲ ಗಣರಾಜ್ಯೋತ್ಸವ ಆಚರಣೆ ಪ್ರಾರಂಭಿಸಲಾಯ್ತು. ಆಗ ದೇಶದಲ್ಲಿ ಒಟ್ಟು 14 ರಾಜ್ಯ ಮತ್ತು 6 ಕೇಂದ್ರಾಡಳಿತ ಪ್ರದೇಶ ಅಸ್ತಿತ್ವಕ್ಕೆ ಬಂದವು!

ಒಂದುವೇಳೆ ಸರ್ದಾರ್‌ಪಟೇಲ್ ಮತ್ತು ಬಾಬಾಸಾಹೇಬ್‌ ಅಂಬೇಡ್ಕರ್ ಅಂದು ಮನಸ್ಸು ಮಾಡದಿದ್ದರೆ ಇಂದಿನ ಅಖಂಡ ಭಾರತ, ಶ್ರೇಷ್ಠ ಸಂವಿಧಾನ, ಇವೆರಡನ್ನೂ ಕಾಣಲು ಸಾಧ್ಯವಾಗುತ್ತಿರಲಿಲ್ಲ?! (ONE United India, ONE Constitution, ONE Republic) ಒಂದೇ ದೇಶ, ಒಂದೇ ಸಂವಿಧಾನ, ಒಂದೇ ಗಣರಾಜ್ಯ, ಕನಸಾಗೆ ಉಳಿಯುತ್ತಿತ್ತು? ಪ್ರತಿದಿನ ಕಚ್ಚಾಟ ಕಾದಾಟ ಸಾಮಾನ್ಯಆಗಿ ಗಳಿಸಿದ್ದ ಸ್ವತಂತ್ರ ಕಳೆದು ಕೊಂಡು ಮತ್ತೆ ಪರಕೀಯರ ಆಡಳಿತದಾಸ್ಯಕ್ಕೆ ಒಳಗಾಗುವ ದುಸ್ಥಿತಿ ತಲುಪುತ್ತಿತ್ತೇನೋ..?!

ಇವತ್ತಿನ ಅದೆಷ್ಟು ರಾಜಕಾರಣಿಗಳು ಅಂದಿನ ನೇತಾರರ ತ್ಯಾಗ ಬಲಿದಾನದ ಇತಿಹಾಸ ನೆನಪಿಸಿಕೊಳ್ಳುತ್ತಾರೆ? ಕೇವಲ ಜಾತಿ-ಮತ, ನೆಲ-ಜಲ, ಭಾಷೆ-ಸಿನಿಮ, ವೋಟ್ ಬ್ಯಾಂಕ್‌, ಮುಂತಾದ ಕ್ಷುಲ್ಲಕ ಕಾರಣಕ್ಕೆ ಅಧಿಕಾರದ ಕುರ್ಚಿಗೆ ರಕ್ತದೋಕುಳಿ ಆಡು[ಆಡಿಸು]ತ್ತಾರೆ? ಇನ್ನಾದರೂ ಇಂದಿನ ಪ್ರಭುಗಳು-ಪ್ರಜೆಗಳು ಡಾಂಭಿಕ-ಯಾಂತ್ರಿಕ ಆಚರಣೆ ಕೈಬಿಟ್ಟು ಚರಿತ್ರೆಯನ್ನು ಪೂರ್ಣ ಓದಿ ಸರಿಯಾಗಿ ತಿಳಿದುಕೊಂಡು ಗಣರಾಜ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರೆ ಮಾತ್ರ ಸಾರ್ಥಕ…! ಬನ್ನಿರಿ ಎಲ್ಲರೂ ಇದೇ 26.1.2026ರಂದು ಭಾರತದ 77ನೇ ಗಣರಾಜ್ಯ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸೋಣ.

  • ಕುಮಾರಕವಿ ಬಿ.ಎನ್.ನಟರಾಜ
    9036976471, ಬೆಂಗಳೂರು