ನಗರದಲ್ಲಿ ನಿಜಧ್ವನಿಸೇನಾಸಮಿತಿಯ 20 ನೇ ವಾರ್ಷಿಕೋತ್ಸವ
ಚಾಮರಾಜನಗರ: ನಗರದ ನಿಜಧ್ವನಿಸೇನಾಸಮಿತಿಯ ೨೦ ನೇ ವಾರ್ಷಿಕೋತ್ಸವ ಹಾಗು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಗರದ ದೇವಾಂಗಸಮುದಾಯಭವನದಲ್ಲಿ ಶುಕ್ರವಾರ ನಡೆಯಿತು.
ಇದೇವೇಳೆ ಸಮಿತಿ ಜಿಲ್ಲಾಧ್ಯಕ್ಷ ಸಿ.ಎನ್.ಗೋವಿಂದರಾಜು ಅವರು ನೂತನ ಪದಾಧಿಕಾರಿಗಳಿಗೆ ಬುದ್ದ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನಭೋದಿಸಿದರು.
ನಂತರ ಅವರು ಮಾತನಾಡಿ, ಸಂಘಗಳು ಶೋಷಿತರ ಪರದನಿಯಾಗಿ ಕೆಲಸ ಮಾಡಬೇಕು, ಕಳೆದ ೨೦ ವರ್ಷಗಳಿಂದ ಶಾಲಾಮಕ್ಕಳಿಗೆ ಉಚಿತಪಠ್ಯಪುಸ್ತಕ ಸಾಮಾಗ್ರಿವಿತರಣೆ, ಕನ್ನಡಭಾಷೆ, ನೆಲಜಲಕ್ಕೆ ಧಕ್ಕೆಯಾದಾಗ ಹೋರಾಟ ಮಾಡುವುದು, ಕಾರ್ಮಿಕರ ಕುಟುಂಬಗಳಿಗೆ ಸರ್ಕಾರದ ವಿವಿಧ ಸೌಲಭ್ಯ ಕೊಡಿಸುವುದು, ಅವರ ಆರೋಗ್ಯ ತಪಾಸಣೆ ಮಾಡಿಸುವ ಜನಪರ ಕಾರ್ಯಕ್ರಮ ಸಮಿತಿವತಿಯಿಂದ ನಡೆದಿದೆ. ಮುಂದಿನದಿನಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಸಮಿತಿಪದಾಧಿಕಾರಿಗಳ ಸಹಕಾರದಿಂದ ಮುಂದುವರೆಸಲಾಗುವುದು ಎಂದರು.
ತಾಲ್ಲೂಕು ಅಧ್ಯಕ್ಷ ಮರಿಯಾಲದ ಹುಂಡಿ ಕುಮಾರ್ ಗೌರವಾಧ್ಯಕ್ಷ ಬಂಗಾರಸ್ವಾಮಿ ಉಪಾಧ್ಯಕ್ಷರಾದ ಮಹದೇವಯ್ಯ, ಜಗದೀಶ್, ಕಾರ್ಯದರ್ಶಿ ಖಮರುದ್ದೀನ್, ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್, ಖಜಾಂಚಿ ಸಣ್ಣಮಾದಪ್ಪ, ಮಾರ್ಗದರ್ಶಿ ಶಿವಸ್ವಾಮಿ, ಕಾಳಸ್ವಾಮಿ, ನಿರ್ದೇಶಕರಾದ ಕೃಷ್ಣಮೂರ್ತಿ, ಸಿದ್ದರಾಜು ನೂತನಪದಾಧಿಕಾರಿಗಳಾಗಿ ಆಯ್ಕೆಯಾದರು.
