ಚಾಮರಾಜನಗರ: ಸಮುದಾಯದ ಮಹಿಳೆಯರ ಪರವಾಗಿ ಹೋರಾಟ ಮಾಡಲು ಬಲಿ? ಸಂಘಟನೆಯ ಅಗತ್ಯವಿದೆ ಎಂದು ಉಪ್ಪಾರ ಮಹಾಸಭೆ ರಾಜ್ಯಾಧ್ಯಕ್ಷ ವಿ? ಲಾಥೂರ್ ಹೇಳಿದರು.
ನಗರದ ವರ್ತಕರ ಭವನದಲ್ಲಿ ರಾಜ್ಯ ಉಪ್ಪಾರ ಮಹಾಸಭೆ ವತಿಯಿಂದ ಉಪ್ಪಾರ ಮಹಿಳಾ ಮತ್ತು ಯುವ ಜಾಗೃತ ಕಾರ್ಯಕ್ರಮದ ಅಂಗವಾಗಿ ಉಪ್ಪಾರ ಮಹಾಸಭೆ ಘಟಕ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಾದರೂ ಸಮುದಾಯದ ಪರವಾಗಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಉಪ್ಪಾರ ಮಹಿಳೆಯರನ್ನು ಮಹಿಳಾ ಮಹಾಸಭೆ ಒಗ್ಗೂಡಿಸುತ್ತಿದೆ. ನಮ್ಮನ್ನು ಪರಿಶಿಷ್ಟ ಪಂಗಡಕ್ಕೇ ಸೇರಿಸಬೇಕು ಎಂಬ ಕುಲಶಾಸ್ತ್ರ ಅಧ್ಯಯನ ನಡೆದಿದೆ. ಹೋರಾಟಕ್ಕೂ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ನಮ್ಮ ಸಮುದಾಯ ರಾಜಕೀಯ ಶಕ್ತಿ ಪಡೆಯಬೇಕು, ಮಹಿಳೆಯರು ಹೆಚ್ಚಾಗಿ ರಾಜಕಾರಣದಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕು ಎಂದರು.
ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಿಕೊಡಬೇಕು, ಕೆಟ್ಟ ಚಟಗಳಿಂದ ದೂರವಿರಿಸಬೇಕು, ಈಗಾಗಲೇ ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಮಕ್ಕಳನ್ನು ಮಹಾಸಭೆ ೨೪ ಮಕ್ಕಳನ್ನು ದತ್ತು ಪಡೆದು ಉತ್ತಮ ಶಿಕ್ಷಣ ಕೊಡಿಸುತ್ತಿದೆ. ಸಂಘಟನೆ ತಾಲೂಕು ಮಟ್ಟದಲ್ಲಿ ವಿಸ್ತಾರವಾಗುವಂತೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ ಎಂದು ತಿಳಿಸಿದರು.
ಉಪ್ಪಾರಮಹಾಸಭೆ ಮಹಿಳಾಘಟಕ ರಾಜ್ಯಾಧ್ಯಕ್ಷೆ ಜಯಕುಮಾರಿ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲು ಬಲಿಷ್ಠವಾಗಬೇಕಾದರೆ ತಾವು ಸಂಘಟಿತರಾಗಬೇಕು, ನಾವೆಲ್ಲ ಒಂದು ಎನ್ನುವ ಒಗ್ಗಟ್ಟು ಪ್ರದರ್ಶಿಸಬೇಕು, ಸಮಾಜಕ್ಕೆ ಮಾರಕವಾಗಿರುವ ಬಾಲ್ಯವಿವಾಹಕ್ಕೆ ಯಾವುದೇ ಪ್ರೋತ್ಸಾಹ ಕೊಡದೇ, ಅದರ ನಿರ್ಮೂಲನೆಗೆ ಪಣತೊಡಬೇಕು. ಶಾಲೆತೊರೆದ ಮಕ್ಕಳನ್ನು ಶಾಲೆಗೆ ಮರುದಾಖಲು ಮಾಡುವ ಸಮಾಜಮುಖಿ ಕಾರ್ಯಕ್ರಮ ಮಹಿಳಾಘಟಕ ಹಮ್ಮಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಉಪ್ಪಾರಮಹಾಸಭೆ ಮಹಿಳಾಘಟಕದ ಅಧ್ಯಕ್ಷರಾಗಿ ಜ್ಯೋತಿ, ತಾಲೂಕು ಉಪ್ಪಾರಮಹಾಸಭೆ ಅಧ್ಯಕ್ಷರಾಗಿ ಮೋಹನ್ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ರಂಗರಾಮು, ಧಾರವಾಡ ಘಟಕದ ಜಿಲ್ಲಾಧ್ಯಕ್ಷ ಈಶ್ವರ್ ಶಿರಕೊಳ, ಪ್ರಧಾನ ಕಾರ್ಯದರ್ಶಿ ಭರತ್ ಮೈಲಾರಿ, ಕೋಶಾಧ್ಯಕ್ಷ ಸುದೀರ್ ಉಪ್ಪಾರ್, ಸಂಚಾಲಕ ರವಿ, ಮುಖಂಡ ಕಾಮರಾಜ್, ಸಿ.ಕೆ.ರಂಗರಾಮು, ನಾಗರಾಜು. ಕೆಂಪರಾಜು, ಮಹಿಳೆಯರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿದ್ದರು.