ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

ಏ ನಾನೇಕೆ ! ಮರೆಮಾಚಿದೆ ಹೀಗೆ ನನ್ನನ್ನು ನಾ. ಬದುಕಬೇಕೆ ಹೀಗೆ ಬಹುವಿಧದಿ. ನಾ ಮಾತ್ರವಲ್ಲ!ಜನ ಸಮೂಹವೇ ಹೀಗೇಕೆ ಬದುಕುತ್ತಿದೆ! ಬದುಕ ಬಾರದೆ ಒಂದೇ ಮುಖದಲ್ಲಿ .ಬೆರೆತು ನೂರಾಗಿ ಕಲೆತು ಸಾವಿರವಾಗಿ, ತಿಳಿದು ನಿರಂತರವಾಗಿ ಬದುಕು ಮುಖವಾಡಗಳಲ್ಲಿ ಅರಿಯದೇ ಅನಿವಾರ್ಯ ಭೇಟಿ ತಾಣವಾಗಿದೆ. ಒಂದೇ ಸಮನೆ ಕಾಡುವ ಮನಗಳ ಒಲವಿಗೆ ಬಿದ್ದು ಏಕವಾಗಿರದೆ ಮುಖ ಬಹುಮುಖವಾಡವಾಗಿದೆ. ನಾಟಕ ರಂಗವ! ಈ ಬದುಕು. ಪಾತ್ರಗಳ ನೈಜತೆ ಕಾಣದು. ಪರಕಾಯಪ್ರವೇಶವು ಹೆಚ್ಚು ಸಮಯ ಉಳಿಯದು, ಯಾವ ಜಾಡಿನಲ್ಲಿ, ಹಾದಿಯಲ್ಲಿ ಮುಖವಾಡ ಬೆಳೆದಿಹುದು, ಗುರತು ಹಿಡಿದು ಬಹುಬೇಗ ಬಿಟ್ಟು ಹೊರಬಾರದೇ.

ಹೊರಬರಬಹುದೇ ಎನ್ನುವ ಯಕ್ಷಪ್ರಶ್ನೆಯ ಪ್ರಶ್ನಾವಳಿ ಸಾಲುಗಟ್ಟಿ  ಉತ್ತರ ಹುಡುಕುತ್ತಿದೆ ಹೇಳ ಬನ್ನಿರೋ ನೀವು. ಧರಿತ್ರಿಯಲ್ಲಿ ದಾರದವರು ನಾವು. ಹೂವ ಬಂಧದಲ್ಲಿ ಸಂಭಂಧ ಕಂಡು ಮರೆಮಾಚಿ ಹೊತ್ತವರು ಹೀಗೇಕೆ ಹಲವೊಮ್ಮೆ ಮುಖವಾಡದ ಮೂಕ ನರ್ತನ. ಬದಿಗೊರಸಿ ನಿಂತು ನೀನಾಗೆ ಕಂಡು ಪಕೃತಿಗೆ ನಿಜರೂಪಿಯಾಗಿ ಬದುಕು ಶ್ರೇಷ್ಠ. ಸಾಮಾನ್ಯವಲ್ಲ ಕೆಲಸ ಸಮುದ್ರದ ಅಲೆಯ ಎದುರಿಸಿ ಅಲೆಯ ಮುಮ್ಮುಖವಾಗಿ ಈಜು ಹೊಡೆದಂತೆ. ಕನ್ನಡಿ ಬಿಂಬ ಹೇಳುತಿಹುದು ಪ್ರತಿಫಲನ ಛಾಯೆಯ; ಬಿಡುವುದು ಕಾಣಿಸದ ಒಳ ನೋಟವ ತದ್ರೂಪವ ತೋರಿಸೋ ಕನ್ನಡಿಗೂ ಸಾಧ್ಯವಾಗದ ಕೆಲಸವಾಗಿದೆ ಮುಖವಾಡ.ಯಾರಲ್ಲಿ ಇಲ್ಲ ಮುಖವಾಡ ಯಾವ ರಂಗದಲ್ಲಿ ಇಲ್ಲ ಮುಖವಾಡ.ಸಮಯ ಸ್ನೇಹಿತನಿರಬೇಕು ಸಂದರ್ಭ ಬಂಧುಬಳಗ ಇರಬೇಕು;

ಬಳಕೆಯಿಲ್ಲದೆ ಬದುಕಿಲ್ಲ ಎಂದೂ ಉಂಟು ಈ ಜಗದ ಪ್ರತೀ ತುಡಿತದಲ್ಲಿ.ಪ್ರಕೃತಿ ಕಾರಣವ! ಇಲ್ಲ ಪ್ರಕೃತಿ ಯೊಳಗಿನ ವಿಕೃತಿ ಮನಸ್ಸಿನ ಮಾನವನೇ ಕಾರಣವಾ.ನಾವೇ ಮಾಡಿಕೊಂಡ ಮತ್ತೊಂದು ಮುಖ ಇದು; ವಂಚಿಸಿದರೆ  ನಮಗೆ ಲಾಭ ಮುಂದೊಂದುದಿನ ಬೇರೆಯವರ ಒಡಗೂಡಿ ನಮ್ಮತನದ ದುರ್ಲಾಭ.ನಾಟ್ಯರಂಗದ ಶೃಂಗಾರ ಕಲೆಯ ಮನಚೋದನಿಯ ; ಬೆಡಗು ಭಿನ್ನಾಣದ ಬದುಕು, ಕಲೆಯ ಪೋಷಣೆಯ ಜೊತೆಗಿನ ಹೊಟ್ಟೆಪಾಡು.ನೋಡುಗ ಮನರಂಜಕ ಮಾತ್ರ ಕಲಾ ಆರಾಧನೆಯ ಜೊತೆಗೆ ಕಲಾ ಸೌಂದರ್ಯ ಆಸ್ವಾದನೆಯ ಜೊತೆಗೆ ನಾಟ್ಯ ರೂಪಿಣಿಯ ಮಾಂಸ ಮುದ್ದೆಯ ಭಕ್ಷಕ ಪ್ರಾಣಿಯ ನೋಟ,ಏಕೀಗೆ ಹೊರಗೊಂದು ನೋಟ ಒಳಗೊಂದು ನೋಟ;ಮುಖವಾಡದ ಚೂರಿತನ ಒಳ್ಳೆಯ ಲಕ್ಷಣವೇ? ಹಿರಿತನವೇ?ಸಂಸ್ಕೃತಿಯೇ,ಈ ಬಹು ಬಣ್ಣ ಗೋಸುಂಬೆಯಾಟ  ಮುಖವಾಡದ  ಭಾವವೇ ಆಗಿದೆ.ಹೇಳಿರುವೆ ಮುಖವಾಡವೂ ಬದುಕಿಸುವುದು; ಬದುಕಿಸೋ ಮಖವಾಡವಿರಲಿ ಸಾವಿನ ಮಖವಾಡ ಮೂಕವಾಗಿಯೇ ಉಳಿಯಲಿ.ಚೆಲುವಿನ ನರ್ತನ ವಸಂತ ಅನುಭವ ಎಲ್ಲವನ್ನೂ ಮರೆಸುವುದು ನವ್ಯ ನವೋದಯ ಎನ್ನುವುದು; ಚಿತ್ತಭ್ರಾಂತಿ ವಿಚಿತ್ರ ಸೋಜಿಗದ ಮುಖವಾಡ ಮರ್ಮದಲ್ಲಿ ಪಾಲುಪಡೆದಿರಲು ;  ಪಾಪ ಪುಣ್ಯಗಳ ಅರಿವಾಗದೆ ಏನೇನೋ ಮುಖವಾಡ ಧರಿಸಿ ಆನಂದಿಸುವುದು. ಮುಖವಾಡ ಕಳಚಿ ಪರಿಶುದ್ಧ ಹೊಂದುವ ಪರಿ ಧ್ಯಾನ ಜ್ಞಾನ ಅಹುದು.ಬುಧ್ದ ಕಳಚಿಟ್ಟ ಜಗತ್ತಿನ ಬೆಳಗು ಎನಿಸಿಕೊಂಡ ಸಾಕಲ್ಲವೇ ನಮಗೆ ಈ ಉದಾಹರಣೆ.ಏಕೆಂದರೆ ಸಾವಿರ ವರುಷ ಕಳೆದರೂ ಇಂದಿಗೂ ನಮ್ಮೊಂದಿಗೆ ಉಸಿರಾಡುತ್ತಿರುವ .ಮನುಷ್ಯ ನಿನಗೆ ಎಲ್ಲದರ ಅರಿವು ಇರುವುದು ನಿಜ ಅದೇಕೋ ಇಂದ್ರಿಯಾ ಸುಖಕ್ಕೆ ದಾಸನಾಗಿ ಆಸೆಯ ಮಡುವಿನಲ್ಲಿ ಮಲಗಿ; ದನದಾಹಿ ಕಾಮಿ ಲೋಭಿತನದಲ್ಲಿ ಬದುಕಲು ಮುಖವಾಡ ಹಿಡಿದಿರುವೆ.ಇದೊಂದೆ ಅಲ್ಲಾ ಒಳ್ಲೆಯದಕ್ಕೂ ಮುಖವಾಡದ ಬಳಕೆಯಲ್ಲಿ ತೊಡಗಿರುವೆ ;  ಉಳ್ಳವರ ಮುಂದೆ ಹಿಂಸೆಗೆ ಬಲಿಯಾಗಿ ಹಕ್ಕಿ ಪಕ್ಕಿಯ ಕೊಕ್ಕಿಗೆ ಸಿಕ್ಕ ಉಳುವಾಗಿ ಬದುಕಲು ಒದ್ದಾಡಿ ಮುಖವಾಡ ತೊಡುವೆ .ನಿನ್ನತನವ ಮರೆತು ನಿಸಹಾಯಕನಾಗಿ ನಿಲ್ಲುವೆ.ಏ ಮುಖವಾಡ ಒಂದಷ್ಟು ಮರೆಯಾಗು ಈ ಲೋಕವ ಶೋಧಿಸಲು ಹೊರಟಾಗ ನನ್ನನ್ನು ಲೋಕದೆದುರಲ್ಲಿ ತೆರದಿಡಲು ಮುಂದಾದಾಗ  ಮುಖವಾಡದ ಎದುರು ಸತ್ಯ ಮರೆಯಾದ ಮರೀಚಿಕೆ ಯಾಗಿದೆ.ಸತ್ಯಕ್ಕಾದರೂ ಮರೆಯಾಗು,ಜ್ಞಾನಕ್ಕಾದರೂ ಮರೆಯಾಗು ,ಭುವಿಯ ನೈಜತೆ ದರ್ಶನಕ್ಕಾದರೂ ಮರೆಯಾಗು ಮುಖವಾಡವೇ.

ಚಿಮಬಿಆರ್ (ಮಂಜುನಾಥ ಬಿ.ಆರ್)

ಯುವಸಾಹಿತಿ, ಸಂಶೋಧಕ, ವಿಮರ್ಶಕ.

ಹೆಚ್.ಡಿ.ಕೋಟೆ ಮೈಸೂರು.

ದೂರವಾಣಿ ಸಂಖ್ಯೆ:-8884684726

Gmail I’d:-manjunathabr709@gmail.com