ಗುಂಡ್ಲುಪೇಟೆ: ಪ್ರತಿಭೆ ಹೊರತರಲು ಸ್ಥಳೀಯ ಕಲಾವಿದರಿಗೆ ಇನ್ನೂ ಸಹ ಸರಿಯಾದ ವೇದಿಕೆ ಸಿಕ್ಕಿಲ್ಲ. ಅಂತವರಿಗೆ ವೇದಿಕೆ ದೊರಕಿಸಿಕೊಡುವ ಕೆಲಸವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಾಡಬೇಕು ಎಂದು ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಿರಂಜನಕುಮಾರ್ ಸಲಹೆ ನೀಡಿದರು.
ಪಟ್ಟಣದ ಗುರು ಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಡೆದ ‘ಸಾಂಸ್ಕøತಿಕ ಸೌರಭ-2020’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಮಂದಿಯಲ್ಲಿನ ಪ್ರತಿಭೆಗಳು ಮುಖ್ಯ ಭೂಮಿಕೆಗೆ ಬರದೆ ಕಮರಿ ಹೋಗಿದೆ. ಇದಕ್ಕೆ ಉತ್ತೇಜನ ನೀಡುವ ಕೆಲಸವನ್ನು ಇಲಾಖೆ ಮಾಡಬೇಕು ಎಂದರು.
ಚಾಮರಾಜನಗರ ಜಾನಪದ ಕಲೆಗಳ ತವರು ಜಿಲ್ಲೆಯಾಗಿದ್ದು, ಸಾಂಸ್ಕøತಿಕ ವೈಭವವನ್ನು ಎತ್ತಿ ಹಿಡಿಯುತ್ತಿದೆ. ಇದಕ್ಕೆ ನಮ್ಮಲ್ಲಿ ನೆಲೆಸಿರುವ ಮಲೇ ಮಹದೇಶ್ವರ, ಸಿದ್ದಪ್ಪಾಜಿ ಪವಾಡ ಪುರುಷರ ಜನಪದ ಗೀತೆಗಳೆ ಸಾಕ್ಷಿ. ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಜಾನಪದ, ಸಾಂಸ್ಕøತಿಕ ಜಾತ್ರೆ ನಡೆಸುವ ಮೂಲಕ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಿ ಬೆನ್ನು ತಟ್ಟುವ ಕೆಲನ ಮಾಡಬೇಕು ಎಂದು ತಿಳಿಸಿದರು.
ಕಲೆ ಎಲ್ಲರಿಗು ಸುಲಭವಾಗಿ ಒಲಿಯುವುದಿಲ್ಲ. ಹಲವು ಮಂದಿ ಅವಿದ್ಯಾವಂತ ಮಹಿಳೆಯರು ಈಗಲೂ ಜಮೀನುಗಳಲ್ಲಿ ಫಸಲು ಮಾಡುವಾಗ, ಕಳೆ ಕೀಳುವಾಗ ಸುಗ್ಗಿ ಹಾಡು, ಜನಪದ ಗೀತೆಗಳನ್ನು ಹಾಡುತ್ತಾರೆ. ಇದರಿಂದಲೇ ಜನಪದ ಜನರ ಬಾಯಲ್ಲಿ ಆಸುಹೊಕ್ಕಾಗಿದೆ. ಕಲೆ ಇದ್ದವರು ಹೊರಗೆ ತರುವ ಪ್ರಯತ್ನ ಮಾಡಬೇಕು. ಗುಂಡ್ಲುಪೇಟೆ ಕೇರಳ ಮತ್ತು ತಮಿಳುನಾಡು ಎರಡು ರಾಜ್ಯದ ಗಡಿಯಾಗಿದ್ದು, ಇಂದಿಗೂ ಇಲ್ಲಿನ ಜನರು ಕನ್ನಡಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಧು ಶಂಕರ್ ಮಾತನಾಡಿ, ಚಾಮರಾಜನಗರದಲ್ಲಿ ಸಾಂಸ್ಕøತಿಕ ವೈಭವ ಹೆಚ್ಚಿನ ರೀತಿಯಲ್ಲಿದ್ದು, ಗಡಿ ಜಿಲ್ಲೆಯಲ್ಲಿ ಕನ್ನಡವನ್ನು ಅಧಿಕ ಮಂದಿ ಮಾತನಾಡುತ್ತಿರುವುದು ಹೆಮ್ಮಯ ವಿಷಯ. ಈ ಹಿಂದೆ ಎಚ್.ಎಸ್. ಮಹದೇವಪ್ರಸಾದ್ ಸಚಿವರಾಗಿದ್ದ ವೇಳೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಜಾರಿಗೆ ತಂದು ನಾಡು, ನುಡಿ, ಸಂಸ್ಕøತಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದರು.
ಈ ವೇಳೆ ಮೂಡಲಪಾಯ ಯಕ್ಷಗಾನದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಬಂಗಾರಚಾರ್ ಅವರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ನಂತರ ವೇದಿಕೆಯಲ್ಲಿ ಹಲವು ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ಪಿ. ಗಿರೀಶ್, ಉಪಾಧ್ಯಕ್ಷ ದೀಪಿಕಾ ಅಶ್ವಿನ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ. ಗಿರೀಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಚಿದಾನಂದ, ಪುರಸಭಾ ಸದಸ್ಯರಾದ ಕಿರಣ್‍ಗೌಡ, ವೆಂಕಟೇಶ್, ವೀಣಾ ಮಂಜುನಾಥ್, ನಾಗೇಶ್ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ