ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಮತ್ತು ನೇತಾಜಿ ಸುಭಾಷ್ ಚಂದ್ರಬೋಸ್ ರವರ ಪ್ರತಿಮೆಯನ್ನು ಆವರಣದಲ್ಲಿ ಸ್ಥಾಪಿಸಲು ಸರ್ಕಾರ ಮುಂದಾಗಲಿ ಮತ್ತು ನೇತಾಜಿ ಸುಭಾಷ್ ಚಂದ್ರಬೋಸ್ ರವರ ಅಧ್ಯಯನ ಪೀಠವನ್ನು ಕಾರ್ಯರೂಪಕ್ಕೆ ಸರ್ಕಾರ ತರಲಿ ಎಂದು ಎಂದು ಜೈಹಿಂದ್ ಯುವ ಸಂಘಟನೆ ವತಿಯಿಂದ ಸಂಸದರಾದ ಪ್ರತಾಪ್ ಸಿಂಹ ರವರಿಗೆ ಹುಣಸೂರು ರಸ್ತೆಯಲ್ಲಿರುವ ಸಂಸದರ ಕಛೇರಿಯಲ್ಲಿ ಮನವಿ ಸಲ್ಲಿಸಲಾಯಿತು,
ಇದೇ ಸಂಧರ್ಭದಲ್ಲಿ ಜೈಹಿಂದ್ ಯುವ ಸಂಘಟನೆ ಅಧ್ಯಕ್ಷರಾದ ಅಜಯ್ ಶಾಸ್ತ್ರಿ ಮಾತನಾಡಿ ಸ್ವತಂತ್ರ ಪೂರ್ವ ಭಾರತದ ಸಾಂಸ್ಕೃತಿಕತೆಯನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನೋತ್ಸವ ರಾಷ್ಟ್ರೀಯ ಯುವದಿನೋತ್ಸವವನ್ನಾಗಿ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಮನೆಗೊಬ್ಬ ಯುವಕರನ್ನು ಸಂಘಟಿಸಿ ಭಾರತೀಯ ಭೂಸೇನೆ ನಿರ್ಮಿಸಿದ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125ನೇ ಜನ್ಮದಿನೋತ್ಸವವನ್ನು ಪರಾಕ್ರಮ ದಿವಸ್ ಭಾರತ ಸರ್ಕಾರ ಆಚರಿಸುತ್ತಿದೆ, ವಿವೇಕಾನಂದರು ಮತ್ತು ನೇತಾಜಿ ರವರ ಕೊಡುಗೆ ಸೇವೆ ದೇಶಕ್ಕೆ ಅಪಾರವಾಗಿದೆ, ಇಂದಿನ ಯುವಸಮೂಹಕ್ಕೆ ಆದರ್ಶವಾಗಿದೆ,
ವಿಶ್ವವಿದ್ಯಾನಿಲಯ ಆವರಣದಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ ತಾವುಗಳು ಸರ್ಕಾರದ ಸಂಭಂಧಪಟ್ಟ ಇಲಾಖೆಯ ಗಮನಕ್ಕೆ ತಂದು ವಿವೇಕಾನಂದರ ನೇತಾಜಿರವರ ಪ್ರತಿಮೆಯನ್ನು ಸ್ಥಾಪಿಸಿದರೆ ಮುಂದಿನಪೀಳಿಗೆಗೆ ದೇಶಪ್ರೇಮದ ರಾಷ್ಟ್ರಾಭಿಮಾನದ ಜಾಗೃತಿ ಮೂಡಿಸಬಹುದು, ಹಾಗೂ ಮೈಸೂರು ವಿಶ್ವಿದ್ಯಾನಿಲಯದಲ್ಲಿ ವಿವೇಕಾನಂದರ ಮತ್ತು ನೇತಾಜಿ ರವರ ಪ್ರತಿಮೆ ಸ್ಥಾಪಿಸುವ ಜೊತೆಯಲ್ಲೆ ತತ್ವಶಾಸ್ತ್ರ ವಿಭಾಗದಲ್ಲಿ ವಿವೇಕಾನಂದರ ಅಧ್ಯಯನ ಪೀಠವಿರಯವ ಹಾಗೆಯೇ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಅಧ್ಯಯನಪೀಠವನ್ನು ಸಹ ಸ್ಥಾಪಿಸಬೇಕಿದೆ
ಜೊತೆಯಲ್ಲೆ ವಿದ್ಯಾರ್ಥಿಗಳನ್ನ ಯುವಕರನ್ನ ಶಾಲಾ ಕಾಲೇಜು ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ದೇಶಪ್ರೇಮ ಕಾರ್ಯಕ್ರಮಗಳ ಮೂಲಕ ಜಾಗೃತಿ ಯೋಜನೆ ರೂಪಿಸಬೇಕಿದೆ ಇದರ ಬಗ್ಗೆ ಶಿಕ್ಷಣ ಇಲಾಖೆ ರಾಜ್ಯ ಸರ್ಕಾರ ಕೇಂದ್ರಸರ್ಕಾರದ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು, ಇದೇ ಸಂಧರ್ಭದಲ್ಲಿ ಮಾಜಿನಗರಪಾಲಿಕೆ ಸದಸ್ಯ ಎಂ.ಡಿ ಪಾರ್ಥಸಾರಥಿ, ಮೃಗಾಲಯ ಪ್ರಾಧಿಕಾರದ ಸದಸ್ಯ ಗೋಕುಲ್ ಗೋವರ್ಧನ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್,
ಜೈಹಿಂದ್ ಯುವ ಸಂಘಟನೆ ಅಧ್ಯಕ್ಷರಾದ ಅಜಯ್ ಶಾಸ್ತ್ರಿ, ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರುಗಳಾದ ಗಿರೀಶ್ ಮತ್ತು ಮುತ್ತಣ್ಣ, ಡಿಸಿ. ಮಂಜು, ಎಸ್.ಎನ್ ರಾಜೇಶ್, ಸುಚೀಂದ್ರ ಇನ್ನಿತರರು ಇದ್ದರು..