ಕೆ.ಆರ್.ನಗರ: ಕೊರೋನಾ ಎರಡನೇ ಅಲೆ ಪ್ರಭಾವ ತಗ್ಗಿಸಲು ರಾಜ್ಯ ಸರ್ಕಾರ ಮೇ. 10ರಿಂದ 23 ರವರೆಗೆ ಸೆಮಿ ಲಾಕ್‌ಡೌನ್ ಜಾರಿ ಮಾಡಿದ್ದು ಈ ಅವಧಿಯಲ್ಲಿ ಅನಗತ್ಯವಾಗಿ ಸಂಚರಿಸುವವರಿಗೆ ಪೊಲೀಸರು ತಕ್ಕ ಪಾಠ ಕಲಿಸುತ್ತಿದ್ದಾರೆ.
ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವ ಅವಶ್ಯಕತೆ ಇದ್ದವರು ಮಾತ್ರ ಮನೆಯಿಂದ ನಡೆದುಕೊಂಡು ಹೊರ ಬರಬೇಕು ಅದನ್ನು ಹೊರತು ಪಡಿಸಿ ಸಲ್ಲದ ನೆಪ ಹೇಳಿಕೊಂಡು ದ್ವಿಚಕ್ರ ಮತ್ತು ಇತರ ವಾಹನಗಳಲ್ಲಿ ಬಂದರೆ ಯಾವುದೇ ಮುಲಾಜಿಲ್ಲದೆ ಅವುಗಳನ್ನು ವಶಕ್ಕೆ ಪಡೆದು ಕೇಸು ದಾಖಲಿಸುತ್ತಿದ್ದಾರೆ. ಇದುವರೆಗೆ ನಿಯಮ ಬಾಹಿರವಾಗಿ ಸಂಚಾರ ಮಾಡಿದ 52 ದ್ವಿಚಕ್ರ ಮತ್ತು ಇತರ ವಾಹನಗಳನ್ನು ವಶಕ್ಕೆ ಪಡೆದಿರುವ ಪೋಲಿಸರು ಅವುಗಳ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.