
ಚಾಮರಾಜನಗರ: ನಗರಸಭೆ ವ್ಯಾಪ್ತಿಯ ಪೌರಕಾರ್ಮಿಕರ ಕಾಲೋನಿ ಸೇರಿದಂತೆ ಗಾಳೀಪುರ, ಎರಡನೇ ವಾರ್ಡ್‌ನ ರಹಮತ್ ನಗರ, ೭ ನೇ ವಾರ್ಡ್ ವ್ಯಾಪ್ತಿಯ ಸೌಹಾರ್ದದಯಾನ್ ನಗರ, ತಿರುಪೂರ್‌ಲೇಔಟ್, ವಾಣಿಯಾರ್ ರಸ್ತೆ, ಕೆ.ಎನ್.ಮೊಹಲ್ಲಾ, ಮುಬಾರಕ್ ಬೀದಿ, ೧೪ ನೇ ವಾರ್ಡುಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳ ಜತೆ ಭೇಟಿನೀಡಿ, ನಿವಾಸಿಗಳಿಂದ ವಾರ್ಡಿನಲ್ಲಿ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವ ಕುರಿತು ಮಾಹಿತಿ ಪಡೆದರು.
ವಾರ್ಡಿನಲ್ಲಿ ವಾಸವಾಗಿರುವ ಬಹುತೇಕ ನಿವಾಸಿಗಳು, ತಮ್ಮ ವಾರ್ಡ್‌ಗಳಿಗೆ ಸಂಚಾರಕ್ಕೆ ಉತ್ತಮ ರಸ್ತೆ, ಚರಂಡಿ ನಿರ್ಮಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡರು.

ಇದೇವೇಳೆ ಶಾಸಕರು ಮಾತನಾಡಿ, ನಗರಸಭೆಯ ವಿವಿಧ ವಾರ್ಡ್‌ಗಳಲ್ಲಿ ಈಗಾಗಲೇ ರಸ್ತೆ, ಚರಂಡಿಸೌಲಭ್ಯ ಕಲ್ಪಿಸಲಾಗಿದೆ, ಸೌಲಭ್ಯವಿಲ್ಲದ ಕಡೆ ರಸ್ತೆ,ಚರಂಡಿ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಬೇಕಿದೆ. ನಗರಸಭೆ ಅಧಿಕಾರಿಗಳು ವಾರ್ಡ್‌ಗಳಿಗೆ ಬೇಕಾದ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಪಟ್ಟಿ ತಯಾರಿಸಬೇಕು ಎಂದು ಸೂಚಿಸಿದರು.
ಇದೇವೇಳೆ ಪೌರPರ್ಮಿಕರ ಕಾಲೋನಿಯ ನಿವಾಸಿಗಳು ತಮ್ಮ ಕಾಲೋನಿಗೆ ರಸ್ತೆ,ಚರಂಡಿ ಸೇರಿದಂತೆ ಶೌಚಾಲಯ, ವಸತಿಸೌಲಭ್ಯ ಕೊಡಿಸಬೇಕು ಎಂದು ಮನವಿ ಮಾಡಿದರು.
ಶಾಸಕರು ಪ್ರತಿಕ್ರಿಯಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಸಾರ್ವಜನಿಕರು ನಗರಸಭೆಗೆ ತಮ್ಮ ಸಹಕಾರ ನೀಡಬೇಕು, ಹಾಗಾದಾಗ ಮೂಲಸೌಕರ್ಯಗಳು ತಮ್ಮ ವಾರ್ಡಿಗೆ ಲಭ್ಯವಾಗಲಿವೆ ಎಂದರು.
ನಗರಸಭೆ ಸದಸ್ಯ ಶಿವರಾಜು, ಮಾಜಿಸದಸ್ಯ ಚಂಗುಮಣಿ, ಮುಖಂಡರಾದ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬಿಕಾಂ ಮಹದೇವನಾಯಕ, ಸೈಯ್ಯದ್ ರಫಿ, ಎ.ಎಚ್.ನಸ್ರುಲ್ಲಾ ಖಾನ್, ಮಹೇಶ್ ಕುದರ್, ಚಂದ್ರಶೇಖರ್,
ರವಿ, ಸ್ವಾಮಿ, ವಿನೋದ್, ಪೌರಾಯುಕ್ತ ಕರಿಬಸವಯ್ಯ. ಜೆಇ ಶಿವಶಂಕರ ಆರಾಧ್ಯ, ಆರೋಗ್ಯನಿರೀಕ್ಷಕ ಮಂಜುನಾಥ್ ಸೇರಿದಂತೆ ವಾರ್ಡಿನ ನಿವಾಸಿಗಳು ಹಾಜರಿದ್ದರು.
