.ದಿನಕೊಂದ್ದು ಯೋಗ ಕಲಿಯಿರಿ
ರವಿ :ಯೋಗ ಚಾರ್ಯರು

ತ್ರಿಕೋನಾಸನ:ಸ್ಥಿತಿ : ತಾಡಾಸನ : ಆಭ್ಯಾಸ ಕ್ರಮ

1.ಪೂರಕದೊಡನೆ ಬಲಗಾಲನ್ನು ಎಡಗಾಲಿನಿಂದ ಸುಮಾರು ಮುಕ್ಕಾಲು ಮೀಟರ್ ಅಂತರದಲ್ಲಿಡಿ ಹಾಗೂ ಕೈಗಳನ್ನು ನಿಧಾನವಾಗಿ

ಭೂಮಿಗೆ ಸಮಾನಾಂತರವಾಗಿ ತರಬೇಕು.

2.ನಿಧಾನವಾಗಿ ಬಲಪಾಶ್ರ್ವಕ್ಕೆ ಬಾಗುತ್ತಾ ಬಲಗ್ಯನ್ನು ಬಲಪಾದದ ಹತ್ತಿರ ತನಿ ಎಡಗೈನ್ನು ಮೇಲಕ್ಕೆ ತನ್ನಿ ಎರಡು ಕೈಗಳು ಸರಳ ರೇಖೆಯಲ್ಲಿರಬೇಕು ಹಸ್ತ ಮುಮ್ಮಖವಾಗಿರಲಿ

ಎಡಗೈ ಬೆರಳುಗಳ ಬಳಿ ನಿಮ್ಮ ನೋಟ ಇರಲಿ

3.ಸಹಜ ಉಸಿರಾಟದೊಂದಿಗೆ ಈ ಸ್ಥಿತಿಯಲ್ಲಿ ಒಂದು ನಿಮಿಷ ಒಂದು ನಿಮಿಷ ಇರಬೇಕು.

4.ಇದೆ ರೀತಿ ಎರಡುಪಾಶ್ರ್ವದಲ್ಲೂ ಮಾಡಿ.

ಉಪೊಯೋಗಗಳು.:

.ಚಪ್ಪಟೆ ಕಾಲಿನ ದೋಷ ನಿವಾರಣೆ.

.ಕಾಲಿನ ಮತ್ತು ಪೃಷ್ಟದ ಸ್ನಾಯುಗಳು ಸದೃಢಗೊಳಿಸಲಾಗುವುದು.

.ಗೂನು ಬೆನ್ನನ್ನು ನೇರೆ ಮಾಡಲು ಸಹಾಯಕ.

.ಸೊಂಟದ ಭಾಗದ ಸ್ನಾಯುಗಳನ್ನು ಸಶಕ್ತಗೊಳಿಸಲಾಗುವುದು.

.ಬೆನ್ನು ಮೂಳೆ ಚಲನಶೀಲವಾಗುವುದು.

ಮೀತಿಗಳು. ಇತ್ತೀಚಗೆ ಹೊಟ್ಟೆಯ ಭಾಗದ ಶಸ್ತ್ರ ಚಿಕಿತ್ಸೆ ಒಳಗಾದ ಸ್ಲಿಪ್ ಡಿಸ್ಕ್ ಸಯಾಟಿಕ್ ಇರುವವರು ಈ ಆಸನವನ್ನು ಮಾಡಬಾರದು

By admin