ಮೈಸೂರು. ಜನವರಿ :- ಮೈಸೂರಿನ ಪುರಭವನ ಆವರಣದಲ್ಲಿ ಪಾರಂಪರಿಕ ಶೈಲಿಯ ಸುಸಜ್ಜಿತ ಶೌಚಾಲಯ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಇಂದು ಶಂಕುಸ್ಥಾಪನೆ ನೆರವೇರಿಸಿದರು. ನಗರದ ಹೃದಯ ಭಾಗವಾದ ಪುರಭವದಲ್ಲಿ ಮಲ್ಟಿಸ್ಟೋರ್ ಪಾರ್ಕಿಂಗ್ ವ್ಯವಸ್ಥೆ ಬರುತ್ತಿದ್ದು, ನಾಗರಿಕರಿಗೆ ಅನುಕೂಲವಾಗಲೆಂದು ಈ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗುತ್ತಿದೆ. ಶೌಚಾಲಯ ಕಟ್ಟಡದಲ್ಲಿ
17 ಶೌಚಾಲಯ, 8 ಸ್ನಾನ ಗೃಹ, 1 ಸೆಕ್ಯುರಿಟಿ ಕೊಠಡಿ, 1 ಮಕ್ಕಳಿಗೆ ಹಾಲುಣಿಸುವ ಕೇಂದ್ರ ಒಳಗೊಂಡಿದೆ. ಅಲ್ಲದೆ ವಿಕಲ ಚೇತನರಿಗೆ ವಿಶೇಷ ಶೌಚಾಲಯದ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸುತ್ತಿದ್ದು, ಗುತ್ತಿಗೆದಾರರೇ 5 ವರ್ಷ ಕಾಲಾವಧಿ ‌ನಿರ್ವಹಣೆ ಜವಾಬ್ದಾರಿಯನ್ನು ವಹಿಸಲಾಗಿದೆ. ಶಂಕುಸ್ಥಾಪನೆ ಸಂದರ್ಭ ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಸೇರಿ ಹಲವು ಗಣ್ಯರು ಹಾಜರಿದ್ದರು.

By admin