ಮೂಡಾವತಿಯಿಂದ ಕೈಗೊಳ್ಳುವ ಕಾಮಗಾರಿಗಳು ಗುಣಮಟ್ಟದಿಂದ ಇರಬೇಕು ಮೂಡಾ ರಸ್ತೆಗಳು ಪ್ರಮುಖವಾಗಿ ನಗರವನ್ನು ಸಂಪರ್ಕಿಸುವ ರಸ್ತೆಗಳಾಗಿರುವುದರಿಂದ ಈ ರಸ್ತೆಗಳನ್ನು ಗುಣಮಟ್ಟದಿಂದ ನಿರ್ಮಾಣ ಮಾಡುವಂತೆ ಮೂಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ಮೂಡಾವತಿಯಿಂದ
ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೂ. 25 ಲಕ್ಷ ವೆಚ್ಚದಲ್ಲಿ ವಿಜಯನಗರ 3ನೇ ಹಂತದ ಐಶ್ವರ್ಯ ಆಸ್ಪತ್ರೆಯಿಂದ ವಿಜಯಶ್ರೀಪುರ ವೃತ್ತದ ರಸ್ತೆ ಅಗಲೀಕರಣ ಮತ್ತು ಮರುಡಾಂಬರೀಕರಣ ಮತ್ತು ರೂ. 50 ಲಕ್ಷ ವೆಚ್ಚದಲ್ಲಿ ವಿಜಯನಗರ 3ನೇ ಹಂತದ ಸಂಗಮ ವೃತ್ತದ ರಸ್ತೆ ಅಗಲೀಕರಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ನಂತರ ವಿಜಯನಗರ 3ನೇ ಹಂತದ ಮಳೆ ನೀರು ಚರಂಡಿಯನ್ನು ಪರಿಶೀಲಿಸಿದ ಶಾಸಕ ಮತ್ತು ಮೂಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ರವರು, ಮಳೆ ನೀರು ಚರಂಡಿಯಲ್ಲಿ ಒಳಚರಂಡಿ ನೀರು ಬರದ ಆಗೆ ಕ್ರಮಕೈಗೊಳ್ಳಲು ಸೂಚಿಸಿದರು.
ನಂತರ ಜಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮದ ಪರಿಮಿತಿಯಲ್ಲಿ ರೂ.150 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಹಾಗೂ ಬರಡನಪುರ ಗ್ರಾಮದಲ್ಲಿ 75 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿ ಗೆ ಚಾಲನೆ.
ಬರಡನಪುರ ಗ್ರಾಮಕ್ಕೆ ಆಗಮಿಸಿದ ಶಾಸಕ ಜಿಟಿಡಿ ಗೆ ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತ ಮಾಡಲಾಯಿತು.
ಮಾವಿನಹಳ್ಳಿ ಶಾಸಕರು ಮಾವಿನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ ಯನ್ನು ಎರಡು ಕೋಟಿಯಲ್ಲಿ ಕೈಗೊಳ್ಳಲಾಗಿದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ 2 ಕೋಟಿಯನ್ನು ಈಗಾಗಲೇ ನೀಡಲಾಗಿದ್ದು ಕಾಮಗಾರಿ ಮುಗಿದಿದೆ. ಬಾಕಿ ಇರುವ ಕಾಮಗಾರಿಗೆ 1.5 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ನಂತರ ಬರಡನಪುರ ಈಗಾಗಲೇ ಒಳಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮರಿಗೆ 75ಲಕ್ಷ ಅನುದಾನ ನೀಡಲಾಗಿದ್ದು, ಕಾಮಗಾರಿಗೆ ಚಾಲನೆ ನೀಡಿದರು. ನಂತರ ಹೊಸದಾಗಿ ನಿರ್ಮಾಣಗೊಂಡಿದ್ದ ಟ್ಯಾಂಕ್ ಗೆ ಕಬಿಬಿಯಿಂದ ಕುಡಿಯುವ ನೀರನ್ನು ಒದಗಿಸಲು ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮೂಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ, ಮೈಮುಲ್ ಮಾಜಿ ಅಧ್ಯಕ್ಷರಾದ ಮಾವಿನಹಳ್ಳಿ ಸಿದ್ದೇಗೌಡ, ಜಿ.ಪಂ.ಸದಸ್ಯರಾದ ಪ್ರೇಮಕುಮಾರಿ ಮಹದೇವಸ್ವಾಮಿ, ತಾ.ಪಂ.ಸದಸ್ಯರಾದ ರಜಿನಿ ನಾಗಾರಾಜು, ಉದ್ಬೂರು ಮಹದೇವಸ್ವಾಮಿ, ದಾರಿಪುರ ಬಸವಣ್ಣ, ಜಯಪುರ ಜವರನಾಯಕ, ಅಬ್ದುಲ್ ಮುತಾಲಿಬ್, ನಾಗರಾಜು, ರೇಣಕಾ, ಮಾವಿನಹಳ್ಳಿ ಸಂದೀಪ್, ರಾಮಕೃಷ್ಣ ಚಾರಿ, ಬರಡನಪುರ ಬಸವಣ್ಣ, ಕೆಲ್ಲಹಳ್ಳಿ ನಾಗರಾಜು, ಬೈರೇಶ್, ಮಂಜು, ಗುಮ್ಮಚನಹಳ್ಳಿ ಚಿಕ್ಕಣ್ಣ ಹಾಗೂ ನೂತನ ಗ್ರಾಮ ಪಂಚಾಯತಿ ಸದಸ್ಯರುಗಳು, ಮುಖಂಡರುಗಳು ಭಾಗವಹಿಸಿದ್ದರು.