
ಚಾಮರಾಜನಗರ: ಅನಾರೋಗ್ಯದಿಂದ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತೆ ಲತಾಮಂಗೇಷ್ಕರ್ ನಿಧನದ ಗೌರವಾರ್ಥ ನಗರದ ಈಶ್ವರಿ ಸಂಗೀತ ಸಂಸ್ಥೆ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಲತಾಮಂಗೇಷ್ಕರ್ ಅವರಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ಲತಾಮಂಗೇಷ್ಕರ್ ಅವರು ಸುಮಾರು ೭೦ ವರ್ಷಗಳ ಕಾಲ ದೇಶದ ೩೬ ಭಾಷೆಗಳಲ್ಲಿ ಹಾಡುವ ಮೂಲಕ
ದಕ್ಷಿಣಭಾರತದ ಚಿತ್ರರಂಗದಲ್ಲಿ ತಮ್ಮದೇಆದ ಛಾಪುಮೂಡಿಸಿದ್ದರು. ಅವರು ನಮ್ಮನಗಲಿದರೂ ಅವರ ಗಾಯನ ಅಜರಾಮರ, ಭಾರತರತ್ನ ಸೇರಿದಂತೆ ದೇಶದ ಅತ್ಯುತ್ತಮ ನಾಗರೀಕ ಪ್ರಶಸ್ತಿಗಳು ಸಂದಿರುವುದು ಇವರ ಗಾಯನಪ್ರತಿಭೆಗೆ ಹಿಡಿದ ಸಾಕ್ಷಿಯಾಗಿದೆ ಎಂದರು.
ಈಶ್ವರಿ ಸಂಗೀತಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಮಾತನಾಡಿ, ಲತಾಮಂಗೇಷ್ಕರ್ ಅವರು ೭೦-೮೦ರದಶಕದಲ್ಲಿ
ತಯಾರಾಗುತ್ತಿದ್ದ ಕಪ್ಪುಬಿಳುಪು ಚಿತ್ರಗಳಲ್ಲಿಯೂ ಹಾಡಿದ್ದಾರೆ. ಕನ್ನಡದಲ್ಲಿ ಕಪ್ಪುಬಿಳುಪು ಚಿತ್ರ ಸಂಗೊಳ್ಳಿರಾಯಣ್ಣ ಚಿತ್ರದಲ್ಲಿ ಬೆಳ್ಳನೆಬೆಳಗಾಯಿತು ಹಾಡಿಗೆ ಧ್ವನಿನೀಡುವ ಮೂಲಕ ಕನ್ನಡಚಿತ್ರರಂಗದಲ್ಲೂ ತಮ್ಮ ಪ್ರತಿಭೆ ಮೆರೆದಿದ್ದಾರೆ.
ಸುಖ;ದುಖ ಪೂರಿತ ಗೀತೆಗಳನ್ನು ಕೂಡಾ ಹಾಡುವ ಮೂಲಕ ದೇಶದ ಸಂಗೀತಲೋಕದ ಪತಾಕೆ ಹಾರಿಸಿದ್ದಾರೆ. ಲತಾಮಂಗೇಷ್ಕರ್ ನಮ್ಮನ್ನು ಭೌತಿಕವಾಗಿ ಅಗಲಿದ್ದರೂ, ಜನಮಾನಸದಲ್ಲಿ ಅಚ್ಚಳಿಯದೇ ಉಳಿಯಲಿದ್ದಾg ಎಂದರು.
ಇದೇವೇಳೆ ಮೊಂಬತ್ತಿ ಹಚ್ಚುವ ಮೂಲಕ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಕಲಾವಿದರಾದ ಶಿವಸ್ವಾಮಿ, ಮಂಜು, ಅವತಾರ್ ನ್ಯತ್ಯತರಬೇತಿ ಸಂಸ್ಥೆಯ ಪ್ರವೀಣ್, ರೇಷ್ಮೆ ಇಲಾಖೆಯ ನೌಕರ ರವಿಕುಮಾರ್ ಹಾಜರಿದ್ದರು.
