ಮೈಸೂರು: ನಂಜನಗೂಡು ತಾಲೂಕು ಎಸ್ ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಗ್ರಾಮದ ಮನೆಮನೆಗೆ ತೆರಳಿ ಕೋವಿಡ್ ಲಸಿಕಾ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಮಹಾದೇವಸ್ವಾಮಿರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ  ಮನೆಮನೆಗೆ ಮಾಸ್ಕ್ ಗಳನ್ನು ಮಾಜಿ ಅಧ್ಯಕ್ಷೆ ಇಂದ್ರಾಣಿ ಕುಮಾರ್ ಅವರು ವಿತರಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ. ಜಹನಾರ ತಬುಸ್ಸುಮ್ ಮಾತನಾಡಿ ಕೋವಿಡ್ ಸೊಂಕಿತರು ಮನೆಯಲ್ಲಿ ದ್ದು ಆರೋಗ್ಯ ಇಲಾಖೆಯ ಸಹಾಯ ಪಡೆದು ಗುಣಮುಖರಾಗಬಹುದು ಜೊತೆಗೆ ಗುಣಮುಖರಾಗುವರು ಮೆಡಿಸಿನ್ ಕಿಟ್ ಗಳನ್ನು ಪಡೆದು ಆರೋಗ್ಯವಂತರಾಗಲು ಸಲಹೆಗಳನ್ನು ನೀಡಿದರು.

ಗ್ರಾಪಂ  ಮಾಜಿ ಅಧ್ಯಕ್ಷ ಕುಮಾರ್ ಮಾತನಾಡಿ ನಮ್ಮ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ  ಸಿಗುವ ಸೌಲಭ್ಯ ಗಳನ್ನು ಪಡೆದು ಕೊರೊನಾ ದಿಂದ ಜನರು ಮುಕ್ತರಾಗಲು ಮುಂಜಾಗೃತಾ ಕ್ರಮವಾಗಿ ಜಾಗ್ರತೆ ವಹಿಸಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿ ಅವರು ಮಾತನಾಡಿ 45 ವರ್ಷ ತುಂಬಿರುವ ಎಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳಲು ಸಲಹೆಗಳನ್ನು ತಿಳಿಸಿದರು ಆರೋಗ್ಯ ಇಲಾಖೆಯ ಹಿರಿಯ ಸಹಾಯಕ ಶ್ರೀಧರಮೂರ್ತಿ ಗ್ರಾಮ ಪಂಚಾಯತಿ ಸದಸ್ಯರು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

By admin