ಎಲ್. ಸುರೇಶ್ ನೇತೃತ್ವದ ಕುರುಬ ಸಂಘ ಅನಧಿಕೃತ: ಜಿ.ಎಲ್. ರಾಜು

 

ಗುಂಡ್ಲುಪೇಟೆ: ಪಟ್ಟಣದಲ್ಲಿ ಎಲ್. ಸುರೇಶ್ ನೇತೃತ್ವದಲ್ಲಿ ತಲೆ ಎತ್ತಿರುವ ಕುರುಬರ ಸಂಘ ಅಧಿಕೃತ ಸಂಘವಲ್ಲ. ಅದು ಕೇವಲ ಇವರ ಕುಟುಂಬದ ಸಂಘ ಎಂದು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ಜಿ.ಎಲ್. ರಾಜು ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮದೇ ಕುರುಬರ ಸಂಘ ಅಧಿಕೃತ ಸಂಘವಾಗಿದೆ ಎಂದು ದೂರಿದರು.

 

ಕಳೆದ ವಾರ ಜನಾಂಗದ ಮುಖಂಡರ ಹಾಗೂ ಯಜಮಾನರ ಗಮನಕ್ಕೆ ತಾರದೇ ಅಕ್ರಮವಾಗಿ ಪುರಸಭಾ ಮಾಜಿ ಅಧ್ಯಕ್ಷರಾದ ಎಲ್. ಸುರೇಶ್ ಸಭೆ ಮಾಡಿದ್ದು, ಸಮಾಜವನ್ನು ಇಬ್ಘಾಗ ಮಾಡುವ ಮೂಲಕ ಕೇವಲ ಇವರ ಹಿಂಬಾಲಕರು ಸೇರಿಸಿಕೊಂಡು ತಾವೇ ಕುರುಬರ ಸಂಘದ ಅಧ್ಯಕ್ಷ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಇದು ಜನಾಂಗದವರನ್ನು ದಿಕ್ಕು ತಪ್ಪಿಸುವ ಕೆಲಸ ಎಂದು ಕಿಡಿಕಾರಿದರು.

ಕುರುಬರ ಸಂಘದ ನೂತನ ಪದಾಧಿಕಾರಿಗಳ ಅಯ್ಕೆ

ಚುನಾವಣೆ ಮೂಲಕವೇ ನಡೆಯ‌ಬೇಕು ಎಂಬುವುದರಲ್ಲಿ ನಮ್ಮ ವಿರೋಧ ಇಲ್ಲ. ಅದರೆ ಜನಾಂಗದ ವಿರೋಧದ ನಡುವೆಯೂ ಅನಧಿಕೃತವಾಗಿ ಕುರುಬರ ಸಂಘವನ್ನು ರಚನೆ ಮಾಡುವ ಮೂಲಕ ಒಡೆದು ಆಳುವ ನೀತಿ ಅನುಸರಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

 

ಪುರಸಭಾ ಸದಸ್ಯರಾದ ರಮೇಶ್ ಮಾತನಾಡಿ, ಪಟ್ಡಣ ಸೇರಿದಂತೆ ತಾಲೂಕಿನ ಕುರುಬ ಜನಾಂಗದವರನ್ನು ವಿಶ್ವಾಸಕ್ಕೆ ತೆಗದು ಕೊಂಡು ಚುನಾವಣೆ ಮೂಲಕ ಅಧ್ಯಕ್ಷರಾಗಿ ಅಯ್ಕೆ ಮಾಡಬೇಕು. ಅದನ್ನು ಬಿಟ್ಟು ಜನಾಂಗದವರ ವಿರೋಧದ ನಡುವೆಯೂ ಅನಧಿಕೃತವಾಗಿ ಗುಂಪು ಕಟ್ಟಿಕೊಂಡು ಸ್ವಯಂ ಘೋಷಿತವಾಗಿ ಕುರುಬರ ಅಧ್ಯಕ್ಷ

ರಾಗಿರುವ ಎಲ್.ಸುರೇಶ್ ಅವರ ಸಂಘಟನೆ ಅಧಿಕೃತವಲ್ಲ. ಎಲ್. ಸುರೇಶ್ ಕುರುಬ ಜನಾಂಗ ವಾಸ ಮಾಡುವ ವಾರ್ಡ್‌ ನಲ್ಲೆ ಹೀನಾಯವಾಗಿ ಪುರಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಬಡಾವಣೆ ಜನರ ವಿಶ್ವಾಸವೇ ಗಳಿಸಿಲ್ಲ ಇತನಿಗೆ ತಾಲೂಕಿನ ಕುರುಬ ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲು ಹೇಗೆ ತಾನೇ ಸಾಧ್ಯ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಕುರುಬ ಜನಾಂಗ ಮುಖಂಡರಾದ ಗೋಪಾಲಣ್ಣ , ಎಸ್.ಅರ್. ರಾಜಶೇಖರ್, ಸ್ವಾಮಿಗೌಡ, ಜಿ.ಕೆ.ನಾಗೇಂದ್ರ, ಜವರೇಗೌಡ ಸೇರಿದಂತೆ ಇತರರು ಹಾಜರಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin