ಸಂದರ್ಭ ಕುಮಾರಕವಿಯ ಅಭಿನಂದನಾ ಕವನ ನಮನ :-……..

 *ಪದ್ಮಭೂಷಣ ಕುವೆಂಪು* 

ಆಡು ಮುಟ್ಟದ ಸೊಪ್ಪು ಇಲ್ಲ  

ಕೆ.ವಿ.ಪಿ.ಬರೆಯದ ಪ್ರಾಕಾರ ಇಲ್ಲ 

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ನಿನ್ನ 

ಸಾಹಿತ್ಯ ಸಾಧನೆ ಪುಟವಿಟ್ಟ ಚಿನ್ನ 

ಆಬಾಲವೃದ್ಧ ಪಂಡಿತಪಾಮರ 

ಆದಿಯಾಗಿ ಸರ್ವರೂ ಮೆಚ್ಚುವ

ಅಸಾಮಾನ್ಯ ಅದ್ವಿತೀಯ ಮಾನವ

ನೀನೇ ಸೃಜಸಿದ ವಿಶ್ವಮಾನವ

ನಿಮಗೆ ವಂದನೇ ಅಭಿನಂದನೆ

ಆದಿಕವಿ ಪಂಪನ 

ಅಭಿನವ ಅಪರಾವತಾರ ನೀ 

ಆಶುಕವಿ ಪುರಂದರನ 

ಅನುಭಾವ ಮಹಿಮಾತ್ಮ ನೀ 

ಮನುಜಮತ ವಿಶ್ವಪಥ 

ಸಂದೇಶವಿತ್ತ ರಾಷ್ಟ್ರಕವಿ ವಿಶ್ವಕವಿ 

ಅಶ್ವಮೇಧಯಾಗ ಮಾಡಿದಷ್ಟು 

ಅನುಭೂತ ಮಹಾನುಭವಿ 

ನಿಮಗೆ ವಂದನೇ ಅಭಿನಂದನೆ

ನಿನ್ನಂಥ ಪುತ್ರ ಹಡೆದ

ಭುವನೇಶ್ವರಿ ಮಾನ್ಯ

ಇಂತಹ ಮಾತೆ ಪಡೆದ

ನೀವೂ ಧನ್ಯ

ಕನ್ನಡ ನಾಡಿಗಾಗಿ 

ಕನ್ನಡ ನುಡಿಗಾಗಿ

ಆರೇನು ಬರೆದರೂ 

ನೀ ಬರೆದುದು ಮಿಗಿಲು

ಕರುನಾಡ ರೈತನಿಗಾಗಿ 

ಕರುನುಡಿ ಜ್ಯೋತಿಗಾಗಿ 

ಅದಾರು ಬಾಳಿದರೂ 

ನೀ ಬಾಳಿದ್ದು ಮೇಲು 

ಅಪ್ರತಿಮ ನಾಡಗೀತೆ  

ಅಮೋಘ ಬೋಧನೆಯ 

ಆಚಂದ್ರಾರ್ಕ ಅಜರಾಮರ 

ಅದ್ಭುತ ಸಾಧನೆಯ 

ನಿಮಗೆ ವಂದನೇ ಅಭಿನಂದನೆ!

÷÷÷÷÷÷÷÷÷÷÷÷÷÷÷÷÷÷÷÷

ಕುಮಾರಕವಿ ಬೋ.ನಾ.ನಟರಾಜ

9036976471

2:2:1988, ಮೈಸೂರು