ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಇದುವರೆಗೂ ವಸತಿ ಇಲ್ಲದವರಿಗೆ ವಸತಿಯನ್ನು ಕಲ್ಪಿಸಲಿಲ್ಲ ಎಂದು ಹೇಳಿದ್ದಾರೆ ವಿನಹ ಸೋಮಣ್ಣನವರಿಗೆ ನಿಮ್ಮ ಆಸ್ತಿ ಮಾರಿ ವಸತಿಯನ್ನು ಕೊಡಬೇಕು ಎಂದು ಹೇಳಿಲ್ಲ ಇವರು ಅದೃಷ್ಟದಿಂದ ಮುಖ್ಯಮಂತ್ರಿ ಆದವರಲ್ಲ ಇಡೀ ಕರ್ನಾಟಕವನ್ನು ಸಂಚರಿಸಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದು ಶಾಸಕರಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದವರು ವಸತಿ ಸಚಿವ ವಿ ಸೋಮಣ್ಣ ಅವರು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಆರೋಪವನ್ನು ಸಮರ್ಥವಾಗಿ ಎದುರಿಸಲಾಗದೆ ಸಾಮಾಜಿಕವಾಗಿ ಆರ್ಥಿಕವಾಗಿ ತೀರಾ ಹಿಂದುಳಿದಿರುವ ಸುಡಗಾಡು ಸಿದ್ದರು ಸಮುದಾಯವನ್ನು ಗುರಿಯಾಗಿರಿಸಿಕೊಂಡು ಜಾತಿ ಮೂಲವನ್ನು ಅಣಕಿಸುವಂತೆ ಅವಹೇಳನಕಾರಿಯಾಗಿ ಮಾತನಾಡಿರುವುದು ತೀವ್ರ ಖಂಡನೀಯ ವಾದದ್ದು ಅಧಿಕಾರದ ಮದದಲ್ಲಿ ಮತ್ತೊಬ್ಬರನ್ನು ಟೀಕಿಸುವಾಗ ಹಿಂದುಳಿದ ಜನ ಸಮುದಾಯವನ್ನು ಕೆಣಕುವ ಅವಮಾನಿಸುವ ಕೆಟ್ಟ ಮನಸ್ಥಿತಿ ಬದಲಾಗದ ಹೊರತು ಸಾಮಾಜಿಕ ಸಮಾನತೆ ಸಾಧ್ಯವಿಲ್ಲ ಜವಾಬ್ದಾರಿಯುತವಾದ ಸಚಿವರು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ರೀತಿಯಲ್ಲಿ ನಡೆದುಕೊಳ್ಳಬಾರದು

ರಾಜ್ಯದಲ್ಲಿರುವ ಈಗಿನ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಬಡವರಿಗೆ ಒಂದೇ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ ಎಂದು ಸಿದ್ದರಾಮಯ್ಯನವರು ಆರೋಪಿಸುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ವಸತಿ ಸಚಿವರಾಗಿ ತಾವು ಬಡವರಿಗೆ ಮನೆಗಳನ್ನು ಮಂಜೂರು ಮಾಡಿದ್ದರೆ ಅದನ್ನು ದಾಖಲೆಗಳ ಸಮೇತ ಸಮರ್ಥಿಸಿಕೊಳ್ಳಬೇಕಾಗಿತ್ತು. ಅಥವ ಈವರೆಗೂ ಹೊಸದಾಗಿ ಮನೆಗಳನ್ನು ಮಂಜೂರು ಮಾಡಿಲ್ಲದಿದ್ದರೆ ಮುಖ್ಯಮಂತ್ರಿಗಳಿಗೆ ಒತ್ತಡಹಾಕಿ, ಅನುದಾನ ಪಡೆದು ಬಡವರಿಗೆ ಮನೆಗಳನ್ನು ಮಂಜೂರು ಮಾಡಬೇಕು.

ಅದುಬಿಟ್ಟು ಸಿದ್ದರಾಮಯ್ಯ ಅವರನ್ನು ಟೀಕಿಸಲು ಸುಡುಗಾಡುಸಿದ್ದ ಎಂಬ ಅಲೆಮಾರಿ ಸಮುದಾಯದ ಹೆಸರನ್ನು ಅವಹೇಳನಕರ ರೀತಿಯಲ್ಲಿ ಬಳಸಿರುವುದು ಸರಿಯಲ್ಲ.

ಶೋಷಿತರು, ಹಿಂದುಳಿದವರು, ಬುಡಕಟ್ಟು ಜನರು ಹಾಗೂ ಅಲೆಮಾರಿ ಜನರ ಬಗ್ಗೆ ತಮಗೆ ತಾತ್ಸಾರದ, ಕೀಳು ಅಭಿರುಚಿಯ ಮನಸ್ಥಿತಿ ಇರುವುದು ತಮ್ಮ ಮಾತಿನಿಂದ ತಿಳಿಯುತ್ತದೆ.

ತಾವು ಈ ಸಮುದಾಯದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘವು ಒತ್ತಾಯಿಸುತ್ತದೆ.