ಮೈಸೂರು: ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ  ರಕ್ಷ ರಾಮಯ್ಯನವರು  ಮೈಸೂರಿಗೆ ಆಗಮಿಸಿ ಕೃಷ್ಣರಾಜ ಕ್ಷೇತ್ರದ ಅಶೋಕ್ ಪುರಂನಲ್ಲಿ ಬಡವರಿಗೆ ಆಹಾರ ಕಿಟ್ ಗಳನ್ನು ಸೋಮವಾರ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ಸಂಕಷ್ಟದ  ಈ ಕಾಲದಲ್ಲಿಯೂ ಎಲ್ಲವೂ ಸಕಾಲದಲ್ಲಿ  ನೆರವೇರುತ್ತಿದ್ದು, ಇಂತಹ ಒಳ್ಳೆಯ ಕೆಲಸ ಕಾರ್ಯಕ್ಕೆ ಸಹಕರಿಸಿದ ದಾನಿಗಳು, ಮಾಧ್ಯಮಮಿತ್ರರು, ಸಾರ್ವಜನಿಕರೆಲ್ಲರಿದೆ ಧನ್ಯವಾದ ತಿಳಿಸಿದರು.

ಕೃಷ್ಣರಾಜ ಕ್ಷೇತ್ರದ ಯುವ ಮುಖಂಡರಾದ ಎನ್ ಎಂ  ನವೀನ್ ಕುಮಾರ್, ಮೈಸೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹಾರಿಸ್, ದೇವರಾಜ ಅರಸು ಬ್ಲಾಕ್ ಅಧ್ಯಕ್ಷ ಪೈಲ್ವಾನ್ ಸುನಿಲ್ ಕುಮಾರ್, ಕೃಷ್ಣರಾಜ ಬ್ಲಾಕ್ ಅಧ್ಯಕ್ಷ ಹರ್ಷ, ಕಾಂಗ್ರೆಸ್ ಮುಖಂಡರಾದ ರಾಜೇಶ್, ಅಬ್ಬಾಸ್ ರಿಜ್ವಾನ್, ಶ್ರೀನಿವಾಸ ಹಾಗೂ ಕುಮಾರ್ ಇದ್ದರು.

By admin