ಶ್ರಾವಣಮಾಸದ ಹುಣ್ಣಿಮೆನಂತರ 8ನೇದಿನ ಶ್ರೀಕೃಷ್ಣಜನಿಸಿದ ಪ್ರಯುಕ್ತ ಗೋಕುಲಾಷ್ಟಮಿ ಜಯಂತಿ. ಅನೇಕ ಶತಮಾನದಿಂದ ಪ್ರತಿವರ್ಷವೂ ಭಾರತದಲ್ಲಿ ಎಲ್ಲರೂ ಆಚರಿಸಲ್ಪಡುವ ಸನಾತನ ಹಬ್ಬ! ವಿಶೇಷವಾಗಿ ಅಯ್ಯಂಗಾರ್ ಹೆಂಗೆಳೆಯರು ಅಡಿಯಿಂದ ಮುಡಿವರೆಗೂ ವಸ್ತ್ರಾಭರಣಗಳಿಂದ ಅಲಂಕಾರ ಮಾಡಿಕೊಂಡು ಶ್ರದ್ಧಾಭಕ್ತಿಯಿಂದ ಶ್ರೀಕೃಷ್ಣ ಜಯಂತ್ಯುತ್ಸವ ಆಚರಿಸುವ ಸಂಭ್ರಮ! ಪೂಜಾಮಂಟಪದಿಂದ ಮುಂಬಾಗಿಲವರೆಗೆ ರಂಗೋಲಿಯಿಂದ ಬಾಲಕೃಷ್ಣನ ಪುಟ್ಟಪಾದ ಬಿಡಿಸುವುದು, ಸಾಕ್ಷಾತ್ ಕೃಷ್ಣನೇ ಮನೆಯೊಳಗೆ ಬಂದಂಥ ಭಕ್ತಿ! ವರ್ಣರಂಜಿತ ಹೂವು-ದೀಪಗಳ ಅಲಂಕಾರ, ಹಣ್ಣು ಬೆಣ್ಣೆ ತಿಂಡಿ ಹಾಲೋಗರ ಪಂಚಾಮೃತ ನೈವೇದ್ಯ ರುಚಿಕರ ತೀರ್ಥ-ಪ್ರಸಾದ ಉಣ್ಣಲು ಚಿಣ್ಣರಿಗೆ ಉತ್ಸಾಹ! ಬಂಧುಮಿತ್ರರ ಜತೆಗೆ, ಜಾತಿಮತ ಭೇದವಿಲ್ಲದೆ ನೆರೆಹೊರೆಯವರನ್ನೂ ಅಪರಿಚಿತರನ್ನೂ ಆಹ್ವಾನಿಸಿ ಸತ್ಕರಿಸುವ ಸಡಗರ! ಇಸ್ಕಾನ್ ಸೇರಿದಂತೆ ದೇಶದ ಎಲ್ಲಾ ಕೃಷ್ಣಮಂದಿರಗಳಲ್ಲಿ ಉಪನ್ಯಾಸ, ಭಜನೆ, ನೃತ್ಯ, ಗಾಯನ, ಹಾ[ಲಾ]ಸ್ಯ, ಗೀತಸಂಗೀತ, ಹರಿಕಥೆ, ಕೀರ್ತನೆ, ನಾಟಕ, ಪಾರಾಯಣ ಮಕ್ಕಳ-ವೇಷಭೂಷಣ, ಮುಂತಾದ ಮನರಂಜನೀಯ ಕಾರ್ಯಕ್ರಮ, ಗಂಟೆಗಂಟೆಗೂ ಬಗೆಬಗೆಯ ರುಚಿಕರ ಪ್ರಸಾದ ವಿನಿಯೋಗ, ದಿನವಿಡೀ ಅದ್ಧೂರಿಯಿಂದ ನಿರಂತರ ಆಚರಣೆ, ಇದ್ದೇಇರುತ್ತದೆ.
ದುಃಖದುಮ್ಮಾನ ಉಪಶಮನಕ್ಕೆ, ಶಾಂತಿಪ್ರೀತಿ ಗಳಿಸಲಿಕ್ಕೆ ಜಗದೋದ್ಧಾರನ ಜಪಿಸಲು ಮುಗಿ ಬೀಳುವರು. ನೆಮ್ಮದಿ ಅರಸಿ ಆಪತ್ಭಾಂಧವನ ಬಳಿಬರುವರು. ವಿವಾಹಯೋಗ್ಯ ನವಯುವಕ-ಯುವತಿಯರು ಬಾಳಸಂಗಾತಿ ಆ0iÉ್ಕು ಮಾಡಿಕೊಳ್ಳುವ ಕಾತುರದಿಂದಲೋ ಪರಸ್ಪರ ಆಕರ್ಷಣೆಗೋಸ್ಕರವೋ ತಪ್ಪದೇ ಭಾಗವಹಿಸಿದರೆ, ರಾಜಕಾರಣಿಗಳು [ವೋಟ್‍ಬ್ಯಾಂಕ್ ಉದ್ದೇಶದಿಂದ?] ಭಾಗವಹಿಸುವರು! ಉತ್ತರಭಾರತದಲ್ಲಿ ಮಂತ್ರಿ, ನಟನಟಿಯರನ್ನು ಆಮಂತ್ರಿಸಿ, ಸಂಗೀತ ವಿದ್ವಾಂಸರ ಕಛೇರಿ ಏರ್ಪಡಿಸಿ, ಅನ್ನ-ವಸ್ತ್ರ ಇತ್ಯಾದಿಗಳನ್ನು ದಾನಮಾಡಿ, ವೈಭವದಿಂದ ಆಚರಿಸುತ್ತಾರೆ. ಸಾಮಾನ್ಯವಾಗಿ ಮನುಷ್ಯನಿಗೆ ವೈರಾಗ್ಯ ಉಂಟಾದಾಗ ಕೇಳಿಬರುವ ಮಾತು: ನೀ ಸೂತ್ರಧಾರಿ, ನಾ ಪಾತ್ರಧಾರಿ. ಡಿ.ವಿ.ಜಿ.ಯ ಮಂಕುತಿಮ್ಮನ ಕಗ್ಗದಲ್ಲಿ ಬದುಕು ಜಟಕಾಬಂಡಿ, ನಾ ಕುದುರೆ, ವಿಧಿ ಅದರ ಸಾಹೇಬ, ಮದುವೆಗೊ ಮಸಣಕೊ ಹೋಗೆಂದೆಡೆ ಸಾಗುವೆ ಎಂದಿದೆ. ಇನ್ನು ಭಗವದ್ಗೀತೆಯಲ್ಲಿ; ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ| ಮಾ ಕರ್ಮ ಫಲಹೇತುರ್ಭೂರ್ಮಾ ತೇ ಸಂಗೋಸ್ತ್ವ ಕರ್ಮಣಿ|| (ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲಾಫಲಗಳಲ್ಲಿ ಎಂದಿಗೂ ಇಲ್ಲ. ನೀನು ಕರ್ಮಗಳ ಫಲಕ್ಕೆ ಕಾರಣನಾಗಬೇಡ ಕರ್ಮ ಮಾಡುವುದನ್ನು ನಿಲ್ಲಿಸಬೇಡ) ಈ ನಂಬಿಕೆಯನ್ನು ಶ್ರೀಸಾಮಾನ್ಯನ ಮನದಿಂದ ಹೋಗಲಾಡಿಸಲು ಅಸಾಧ್ಯ? ಆದ್ದರಿಂದ, ಶ್ರೀಕೃಷ್ಣ ಜನ್ಮಭೂಮಿ ಧರೆಗೆಧನ್ಯ! ಶ್ರೀಕೃಷ್ಣನ ಭಕ್ತರೆ ಲೋಕಮಾನ್ಯ!!
ವೈಕುಂಠದ ವಿಷ್ಣುವಿನ 8ನೆ ಅವತಾರವೆ ದ್ವಾಪರಯುಗದ ಶ್ರೀಕೃಷ್ಣ. ದ್ವಾರಕಾಪುರಿಯ ದೇವಕಿ-ವಸುದೇವನ ಅಷ್ಟಮ ಕಂದನಾಗಿ ಸೆರೆಮನೆಯಲ್ಲಿ ಜನಿಸಿ, ಮಥುರಾನಗರದ ಯಶೋಧ-ನಂದಗೋಪನ ಸಾಕುಮಗನಾಗಿ ಬೆಳೆಯುವನು. ಕೃಷ್ಣನ ಬಾಲ್ಯ (ಕು)ಚೇಷ್ಠೆಗಳು ಅಸಾಮಾನ್ಯದ್ದು. ಬೆಣ್ಣೆಯಕಳ್ಳತನ, ಬಾಯಲ್ಲಿವಿಶ್ವದರ್ಶನ, ಗೋಪಿಕಾಸ್ತ್ರೀ ವಸ್ತ್ರಾಪಹರಣ, ಕಾಳಿಂಗ ಮರ್ಧನ, ಕಂಸನ ವಧೆ, ಪೂತನಿ ಸಂಹಾರ, ಗೋವರ್ಧನಗಿರಿ ಎತ್ತಿದ್ದ್ದು, ಮುಂತಾದ ಮಹೋನ್ನತ ಕಾರ್ಯಗಳು ಎಳೆವಯಸ್ಸಿಗೆ ಮೀರಿದ ಸಾಧನೆ. ಹಾಗಾಗಿ ಅತ್ಯಂತ ಧೀರ-ವೀರ-ಶೂರ ಬಾಲಕ ಎನಿಸಿ ಜನಪ್ರಿಯನಾಗುವನು. ಕಾಲಕ್ರಮೇಣ, ಕೃಷ್ಣಲೀಲೆ ಹಾಡಿ ಹೊಗಳುವ ಅಭಿಮಾನಿ-ಭಕ್ತರ ಜತೆಗೇ (ಹಿತ)ಶತ್ರ್ರುಗಳೂ ಹುಟ್ಟಿಕೊಳ್ಳುತ್ತಾರೆ. ಒಟ್ಟಾರೆ, ಶ್ರೀಕೃಷ್ಣನ ಬಾಲ್ಯಜೀವನವು ನ ಭೂತೋ: ನ ಭವಿಷ್ಯತೀ: ಎಂದು ಚರಿತ್ರೆ ಸಾರುತ್ತದೆ!
16000 ಗೋಪಿಕಾಸ್ತ್ರೀಯರ ಪ್ರಿಯಕರನಾದರೂ ರುಕ್ಮಿಣಿ ಅಪಹರಿಸುವ ದೃಷ್ಟಾಂತದಿಂದ “ಅಪಹರಣದ ವಿವಾಹವು ತಪ್ಪಲ್ಲ” ಎಂದು ಪ್ರತಿಪಾದಿಸಲು ಶ್ರೀಕೃಷ್ಣನ ವಾದ:“ತಾನು ಪ್ರೀತಿಸಿದವರಿಗಿಂತ ತನ್ನನ್ನು ಪ್ರೀತಿಸಿದವರನ್ನು ಮದುವೆಯಾಗುವುದು ಲೇಸು, ಅದರಿಂದ ದಾಂಪತ್ಯಜೀವನ ಸುಖಮಯವಾಗುತ್ತದೆ” ಎಂಬುದು. ಈ ಕಾರಣದಿಂದಲೆ ಪಾರ್ಥನು ಸುಭದ್ರೆ ಅಪಹರಿಸಿ ವಿವಾಹವಾಗಲು ಅವಳ ಅಣ್ಣನಾದ ಶ್ರೀಕೃಷ್ಣನೆ ನೆರವಾಗುತ್ತಾನೆ. ಸತ್ಯಭಾಮಾ ಮೂಲಕ ಪ್ರೇಮಕ್ಕಿಂತ ಭಕ್ತಿಯೇ ಶ್ರೇಷ್ಠ ಎಂಬುದನ್ನು ‘ಶ್ರೀಕೃಷ್ಣ ತುಲಾಭಾರ’ ಘಟನೆಯಿಂದ ಜಗತ್ತಿಗೆ ತೋರಿಸುತ್ತಾನೆ. ನಂಬಿದವರ ಕೈಬಿಡುವುದಿಲ್ಲ ಎಂಬುದನ್ನು “ಪಾಂಚಾಲಿಯ ಮಾನಹರಣ” ಸಂದರ್ಭದಲ್ಲಿ ವಸ್ತ್ರ ನೀಡುವುದರ ಮೂಲಕ ಮತ್ತು ಹಸಿದುಬಂದ ಋಷಿಗಳಿಗೆ ‘ಅಕ್ಷಯಪಾತ್ರೆ’ ಮೂಲಕ ‘ಭಕ್ತರೆಲ್ಲೊ ಭಗವಂತನೂ ಅಲ್ಲೆ’ ಎಂಬುದನ್ನು ಸಾಬೀತುಪಡಿಸುತ್ತಾನೆ. ಶ್ರೀವಿನಾಯಕ ಚೌತಿಯಂದು ಚಂದ್ರ ದರ್ಶನ ಮಾಡಿದ ತಪ್ಪಿಗೆ ಶಮಂತಕಮಣಿಯ ಕಳ್ಳನೆಂಬ ಅಪವಾದಕ್ಕೆ ಗುರಿಯಾಗುತ್ತಾನೆ. ಶ್ರೀಗಣೇಶನ ಕೃಪಾಶೀರ್ವಾದದಿಂದ ಮಣಿ ಮತ್ತು ಜಾಂಭವತಿಯನ್ನು ಪಡೆವ ಘಟನೆ ‘ದೇವ ಮತ್ತು ಅವತಾರಪುರುಷ’ ನಡುವಣದ ಶಕ್ತಿಯುಕ್ತಿಗಳ ವಸ್ತುನಿಷ್ಠೆಯನ್ನು ರುಜುವಾತು ಪಡಿಸುತ್ತದೆ!
ಶ್ರೀಕೃಷ್ಣ, 64ವಿದ್ಯಾಪಾರಂಗತ, ನವರಸನಾಯಕ, ಸಮಾಜಶಾಸ್ತ್ರದಷ್ಟೆ ಶೃಂಗಾರಶಾಸ್ತ್ರಕ್ಕೂ ಪ್ರಾಶಸ್ತ್ಯ ನೀಡಿದ್ದಾನೆ. ಸಮಾಜೋದ್ಧಾರದಷ್ಟೆ ದಾಂಪತ್ಯೋದ್ಧ್ಧಾರವು ಪ್ರಮುಖಾಂಶ ಎಂಬ ಸಹಜಪ್ರಜ್ಞೆ ಪ್ರತಿಪಾದಿಸಿ, ಜನನ ಪ್ರಕ್ರಿಯೆಗೆ ಶೃಂಗಾರವೂ ಅವಶ್ಯವೆಂಬುದನ್ನು ರುಜುವಾತುಪಡಿಸಿದ್ದಾನೆ. ಸಂತಾನದ ಬಗ್ಗೆ ಗಂಡ-ಹೆಂಡಿರಲ್ಲಿರಬೇಕಾದ ಜ್ಞಾನ, ಜಾಣ್ಮೆ, ತಾಳ್ಮೆ ಮುಂತಾದ ಸಾಮಾನ್ಯ ತಿಳುವಳಿಕೆ ಬಗ್ಗೆ ಸರಳವಾಗಿ ವಿವರಿಸಿದ್ದಾನೆ. ಕುಟುಂಬದಲ್ಲಿ ಇರಬೇಕಾದ ಪ್ರೇಮ-ಕಾಮ, ಪ್ರೀತಿ-ವಾತ್ಸಲ್ಯ, ಕೋಪ-ತಾಪ, ದ್ವೇಷ-ಅಸೂಯೆ, ಕಾಯಕ-ಕರ್ತವ್ಯ, ಬದ್ಧತೆ-ಪ್ರಾಮಾಣಿಕತೆ ಬಗ್ಗೆಯೂ ಹೇಳಿದ್ದಾನೆ. ಪ್ರತಿಯೊಬ್ಬರೂ ವ್ಯಕ್ತಿಗತ ಏಕತಾನಕ್ಕೆ ನೀಡುವಷ್ಟೆ ಮಹತ್ವ ಸಾಮೂಹಿಕ ಬಹುತಾನಕ್ಕೂ ನೀಡುವಂತೆ ಮಾರ್ಗದರ್ಶನ ಮಾಡಿದ್ದಾನೆ. ನಿಸ್ವಾರ್ಥದ ಬಗ್ಗೆ ಮನವರಿಕೆ ಮಾಡಿಕೊಡಲು ಪವಾಡಗಳನ್ನು ಪ್ರದರ್ಶಿಸಿದ್ದಾನೆ. ಕಷ್ಟ-ನಷ್ಟಗಳು ಪ್ರಾಪ್ತವಾದಾಗ ಧೃತಿಗೆಡಬೇಡಿರೆಂದು ಸಾಂತ್ವನ ಹೇಳುತ್ತಾನೆ ಹೀಗೆ:“ಒಂದನ್ನು ಗಳಿಸಿಕೊಳ್ಳಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು. ಶರೀರವನ್ನು ಉಳಿಸಿ ಕೊಳ್ಳಬೇಕಾದರೆ ಬೆರಳನ್ನು ಕಳೆದುಕೊಳ್ಳಬೇಕಾಗುತ್ತದೆ ಮತ್ತು ಸಮಾಜವನ್ನು ಉಳಿಸಿಕೊಳ್ಳಬೇಕಾದರೆ ಕುಟುಂಬ ವನ್ನು ಕಳೆದುಕೊಳ್ಳಲೇ ಬೇಕಾಗುತ್ತದೆ” [ಶ್ರೀಕೃಷ್ಣವಚನಾಮೃತ]
ಮಹಾಭಾರತದ ಕೃಷ್ಣ ತನ್ನದೇ ಆದ ಷಡ್ಯಂತ್ರ ರೂಪಿಸಿ ಶಕುನಿ ಮೂಲಕ ಪಾಂಡವರಿಗೆ 12ವರ್ಷ ವನವಾಸ, 1ವರ್ಷ ಅಜ್ಞಾತವಾಸದ ಶಿಕ್ಷಾವಧಿಯಲ್ಲಿ ಧರ್ಮರಾಯನನ್ನು ಮನೆಗೆಲಸದವನನ್ನಾಗಿಸಿ, ಭೀಮನನ್ನು ಅಡುಗೆಭಟ್ಟನನ್ನಾಗಿಸಿ, ಗಾಂಢೀವಿಯನ್ನು ಬೃಹನ್ನಳೆಯನ್ನಾಗಿಸಿ, ನಕುಲ-ಸಹದೇವರನ್ನು ದನಗಾಹಿಗಳನ್ನಾಗಿಸುತ್ತಾನೆ. ಕಪಟನಾಟಕ ಸೂತ್ರಧಾರಿ ಶ್ರೀಕೃಷ್ಣಸಂಧಾನ ವಿಫಲಗೊಳಿಸಿ ಕುರುಕ್ಷೇತ್ರ ರಣರಂಗದಲ್ಲಿ ಯುದಿಷ್ಠಿರನಿಂದ ಎಂದು ಸುಳ್ಳು ಹೇಳಿಸಿದಂತೆ ಮಾಡುತ್ತಾನೆ. ಕರ್ಣನ ವಜ್ರಕವಚ-ಕುಂಡಲಗಳನ್ನು ಇಂದ್ರನ ಮೂಲಕ ಕಸಿದು, ಕುಂತಿಯಿಂದ ಜನ್ಮರಹಸ್ಯ ಬಹಿರಂಗಗೊಳಿಸಿ ‘ತೊಟ್ಟಬಾಣ ತೊಡಬೇಡ ಇಟ್ಟಗುರಿ ಇಡಬೇಡ’ ಎಂಬ ವಚನ ಪಡೆದು, ದಾನಶೂರಕರ್ಣನ ಮನೋಸ್ಥೈರ್ಯ ದುರ್ಬಲಗೊಳಿಸಿ, ಭೀಷ್ಮನನ್ನು ಶರಮಂಚದಲ್ಲಿ, ದ್ರೋಣಾಚಾರ್ಯನ ತುಂಡರಿಸಿ, ಅಶ್ವತ್ಥಾಮನಿಂದ ಉಪಪಾಂಡವರ ಹತ್ಯೆಗೈಸಿ, ಚಕ್ರವ್ಯೂಹದಲಿ ಅಭಿಮನ್ಯು ಸಿಲುಕಿಸಿ, ಧೃತರಾಷ್ಟ್ರನಿಂದ ಭೀಮನನ್ನು ಬಚಾವ್ ಮಾಡಲು ಉಕ್ಕಿನಪುತ್ಥಳಿ ಪುಡಿಗೈಸಿ ಪಾರ್ಥನಿಗೆ ಸಾರಥಿಯಾಗಿ ‘ವಿರಾಟ್ ದರ್ಶನ’ ಮೂಲಕ ‘ದುಷ್ಟಶಿಕ್ಷಕ ಶಿಷ್ಟರಕ್ಷಕ’ ಎನಿಸಿಕೊಳ್ಳುತ್ತಾನೆ. “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ; ಅಭ್ಯುತ್ಥಾನಂ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ” (ಹೇ ಅರ್ಜುನನೇ ಯಾವಯಾವ ಕಾಲದಲ್ಲಿ ಧರ್ಮದ ಹಾನಿ ಮತ್ತು ಅಧರ್ಮದ ವೃದ್ಧಿಯಾಗುವುದೋ ಆವಾಗಲೆಲ್ಲಾ ನಾನು ನನ್ನ ಸ್ವರೂಪವನ್ನು ರಚಿಸುತ್ತೇನೆ, ಜನರ ಮುಂದೆ ಪ್ರಕಟವಾಗುತ್ತೇನೆ) “ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ; ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ (ಸಾಧು ಪುರುಷರನ್ನು ಉದ್ಧಾರ ಮಾಡುವುದಕ್ಕಾಗಿ ಪಾಪಿಗಳನ್ನು ವಿನಾಶಪಡಿಸಲಿಕ್ಕಾಗಿ ಹಾಗೂ ಧರ್ಮ ವನ್ನು ಪುನರ್ ಸ್ಥಾಪಿಸುವುದಕ್ಕಾಗಿ ನಾನು ಯುಗಯುಗಗಳಲ್ಲಿ ಪ್ರಕಟವಾಗುತ್ತೇನೆ) ಧರ್ಮಕರ್ಮ, ಸತ್ಯಾಸತ್ಯ, ನ್ಯಾಯನೀತಿ, ಸಾವುಬದುಕು, ಜಯಾಪಜಯ, ಪಾಪಪುಣ್ಯ, ಮುಂತಾದವುಗಳನ್ನು ವಿವರಿಸುತ್ತ ದಶಾವತಾರ ನೀತಿ ಸಂಹಿತೆಯನ್ನು ಬೋಧಿಸುತ್ತ ‘ಗೀತೋಪದೇಷ’ ಮೂಲಕ ಗೀತಾಚಾರ್ಯನೆಂಬ ಬಿರುದು ಪಡೆಯುತ್ತಾನೆ. ಪಾಂಡವರಿಂದ ‘ಅಶ್ವಮೇಧಯಾಗ’ ಮೂಲಕ ಅರ್ಜುನನ ದುರಹಂಕಾರವನ್ನು ಅವನ ಮಗ ಬಭ್ರುವಾಹನನಿಂದಲೆ ಬಗ್ಗುಬಡಿಸುತ್ತಾನೆ. ಪಾಂಡವರಿಗೆ ದಿಕ್ಕುದೆಸೆ, ಮತಿಗತಿ ಶ್ರೀಕೃಷ್ಣನೇ ಎಂಬುದನ್ನು ಪದೇಪದೇ ನೆನಪಿಸುತ್ತಾನೆ. ತ್ರೇತಾಯುಗದಲ್ಲಿ ವಾಲಿಯನ್ನು ಕೊಂದು, ಶಾಪಗ್ರಸ್ಥನಾದ ಕೋದಂಡರಾಮನು ತನ್ನ ಶಾಪ ವಿಮೋಚನೆಗಾಗಿ ದ್ವಾಪರಯುಗದಲ್ಲಿ ಶ್ರೀಕೃಷ್ಣನಾಗಿ ಅವತರಿಸಿ, ಅಣ್ಣ ಬಲರಾಮನಿಗೆ, ಸಾಮ್ರಾಜ್ಯವನ್ನಾಳುವ ಉಸ್ತುವಾರಿ ನೀಡುತ್ತಾನೆ. ಮುನಿಯ ಶಾಪದಿಂದಾಗಿ ಉದ್ಭವಿಸಿದ ‘ಯಾದವೀಕಲಹ’ ದಿಂದಾಗಿ ಇಡೀ ಯದುಕುಲ ಸರ್ವನಾಶವಾಗುತ್ತದೆ. ಇದೇ ಚಿಂತೆಯಲ್ಲಿ ಕೃಷ್ಣನು ಸಮುದ್ರ ತೀರದ ವಿಶ್ರಾಂತಿಯಲ್ಲಿ ಇದ್ದಾಗ ಬೇಡನ(ವಾಲಿಯ ಪುನರ್ಜನ್ಮ)‘ಶಬ್ಧವೇದಿ’ ಬಾಣವು ತನ್ನ ಪಾದಕ್ಕೆ ಚುಚ್ಚಿಕೊಂಡಾಗ ತ್ರಿಕಾಲಜ್ಞಾನಿ ಮುರಳಿಲೋಲನ ಅಂತ್ಯವಾಗುತ್ತದೆ. ಶ್ರೀಕೃಷ್ಣಾವತಾರದ ಅಂತ್ಯದೊಡನೆ ದ್ವಾಪರಯುಗ ಪರ್ಯಾವಸಾನವಾಗುತ್ತದೆ?!
ಅಂದು, ‘ಹಿಪ್ಪೀ ಸಂಸ್ಕೃತಿ’ ಯಿಂದ ಸ್ಫೂರ್ತಿಗೊಂಡ ಬಾಲಿವುಡ್‍ನ ಖ್ಯಾತನಟ ದೇವಾನಂದ್ “ಹರೇ ರಾಮ ಹರೇ ಕೃಷ್ಣ” ಹಿಂದಿ ಚಲನಚಿತ್ರ ತಯಾರಿಸಿ ಬಿಡುಗಡೆ ಗೊಳಿಸಿದರು. ‘ದಂ.. ಮಾರೋ.. ದಂ.. ಮಿಟ್ ಜಾ0iÉುೀ ಹಂ..’- ಹಾಡು ಇವತ್ತಿಗೂ ಎಂಜಾ0iÀiï ಮಾಡುವಂತಿದೆ. ವಿಶ್ವದಾದ್ಯಂತ ನವ ಯುವಕರಲ್ಲಿ ವಿದ್ಯುತ್ ಸಂಚಲನವುಂಟು ಮಾಡಿದ ಈ ಚಿತ್ರವು ‘ಶ್ರೀಕೃಷ್ಣ ಪಂಥ – ಹಿಪ್ಪೀ ಕ್ರಾಂತಿ’ ಎಂಬ ಬೃಹತ್ ಅಲೆಯನ್ನೆ ಸೃಷ್ಟಿಸಿತು! ಶ್ರೀಕೃಷ್ಣನ ಬಗ್ಗೆ ಅಸಂಖ್ಯಾತ ಉಧಾಹರಣೆ ನೀಡಬಹುದು. ‘ಕೃಷ್ಣ…ಎನಬಾರದೇ..’ ‘ಕೃಷ್ಣ್ಣ ನೀ ಬೇಗನೆ ಬಾರೋ..’‘ಬೇಡ ಕೃಷ್ಣ್ಣ ರಂಗಿನಾಟ ಸೀರೆ ನೆನೆವುದು’ ‘ಕರೇ.. ಕರೇ ಕೃಷ್ಣನಾ ಕೊಳಲಿನಾ ಕರೇ ಮುಂತಾದ ಭಜನೆಗಳ ಜೊತೆಗೆ ಅವಲಕ್ಕಿ ಮಿತ್ರ ಸುಧಾಮ(ಕುಚೇಲ)ನ ‘ಕೃಷ್ಣ್ಣ ಎಂದರೆ ಭಯವಿಲ್ಲ ಶ್ರೀಕೃಷ್ಣಾ ಎನದೆ ಸುಖವಿಲ್ಲಾ’, ‘ಕಂಡೇ ಹರಿಯ ಕಂಡೆ.. ದೇವಾಧಿ ದೇವ ಧನುಜಾದಿ ವಂದ್ಯ’ ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ” ಎಂದು ಭಕ್ತಿಗೀತೆ ಹಾಡಿ ಉಡುಪಿ ಗರ್ಭಗುಡಿಯ ದಿಕ್ಕನ್ನೆ ಕನಕನ ಕಿಂಡಿಯಾಗಿಸಿದ ದಾಸವರೇಣ್ಯ ಹಾಗೂ ಇತ್ತೀಚೆಗೆ 8ವರ್ಷದ ಬಾಲಕಿ ಹಾಡಿದ ಜಯ ಜನಾರ್ಧನಾ ಕೃಷ್ಣ… ರಾಧಿಕಾ ಪತೇ… ಎಂಬಿತ್ಯಾದಿ ಕೀರ್ತನೆಗಳು ಭೂಮಿ-ರವಿ-ಚಂದ್ರ ಇರುವವರೆಗೆ ಚಿರಸ್ಥಾಯಿ ಆಗಿರುತ್ತವೆ!
ಕುಮಾರಕವಿ ಬಿ.ಎನ್.ನಟರಾಜ್ [9036976471]
#29, 3ನೇಮೇನ್,3ನೇಕ್ರಾಸ್,ಕಲ್ಯಾಣನಗರ,ಮೂಡಲಪಾಳ್ಯ
ನಾಗರಬಾವಿ, ಬೆಂಗಳೂರು
<