ಕೆ.ಆರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಅಭಿಯಾನ – ನಿಮ್ಮ ಆರೋಗ್ಯದ ಕಡೆ ನಮ್ಮ ಹೆಜ್ಜೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಇಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಕಾಲೇಜು ಹಾಗೂ ಮಿಷನ್ ಆಸ್ಪತ್ರೆಯ ಸಹಯೋಗದೊಂದಿಗೆ ದಿನಾಂಕ 16 ಮತ್ತು 17 ರಂದು ನೋಂದಾವಣಿ ಮಾಡಿಕೊಂಡವರಿಗೆ ಲಸಿಕೆ ನೀಡುವ ಕೆಲಸಕ್ಕೆ ಚಾಲನೆ ದೊರೆಯಿತು.
ವಾರ್ಡ್ ನಂ. 51 – ನಟರಾಜ ಶಾಲೆ,ಶಂಕರಮಠ ರಸ್ತೆ , ವಾರ್ಡ್52 – ಪೊಲೀಸ್ ಭವನ, ವಾರ್ಡ್ 64 – ಬಿ.ಜಿ.ಎಸ್ ಶಾಲೆ ಹಾಗೂ ವಾರ್ಡ್ ನಂ.65 – ಚೈತ್ರಾ ಪದವಿ ಪೂರ್ವ ಕಾಲೇಜಿನಲ್ಲಿ ಲಸಿಕಾ ಅಭಿಯಾನ ನೆರವೇರಿತು.
ಬೆಳಗ್ಗೆ ವಾಡ್೯ 65ರ ಶ್ರೀರಾಂಪುರದ ಭಾಗದ ಶಿವಪುರ ದಲ್ಲಿರುವ ಚೈತ್ರಾ ಪದವಿ ಪೂರ್ವ ಕಾಲೇಜಿನಲ್ಲಿ ಮಾನ್ಯ ಶಾಸಕರಾದ ಎಸ್ ಎ ರಾಮದಾಸ್ ರವರು ಹೋಲ್ಡ್ಸ್ ವತ್೯ ಮೆಮೊರಿಯಲ್ ಕಾಲೇಜ್ ಆಫ್ ನರ್ಸಿಂಗ್ ನ ಪ್ರಿನ್ಸಿಪಾಲ್ ಇವರುಗಳೊಂದಿಗೆ ಸಾಂಕೇತಿಕವಾಗಿ ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಇಂದು ಕ್ಷೇತ್ರಾದ್ಯಂತ ನಡೆದ ಲಸಿಕಾ ಅಭಿಯಾನದಲ್ಲಿ 7026 ಲಸಿಕಾ ಡೋಸ್ ಗಳನ್ನು ನೀಡಲಾಗಿದೆ.
ಎಲ್ಲಾ 4 ವಾರ್ಡ್ ಗಳಲ್ಲಿ ವಿಶೇಷವಾಗಿ ಸೇವೆ ಒದಗಿಸಿದ ಆರೋಗ್ಯ ಸಿಬ್ಬಂದಿ, ವೈದ್ಯರು, ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಮಾನ್ಯ ಶಾಸಕರು ಸನ್ಮಾನ ಮಾಡಿದರು.
ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಗೀತಾಶ್ರೀ ಯೋಗಾನಂದ್, ಬಿ.ವಿ ಮಂಜುನಾಥ್, ಚಂಪಕ, ಛಾಯಾದೇವಿ,
ನಗರಪಾಲಿಕಾ ಆರೋಗ್ಯ ಅಧಿಕಾರಿಗಳು, ವಲಯ ಆಯುಕ್ತರುಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪೊಲೀಸ್ ಠಾಣೆಯ ನಿರೀಕ್ಷಕರು ಹಾಜರಿದ್ದರು.