ಚಾಮರಾಜನಗರ: ರಂದು ನಡೆಯುವ ದೊಡ್ಡಮ್ಮತಾಯಿ ಉತ್ಸವದ ಅಂಗವಾಗಿ ನಗರಸಭೆ ವ್ಯಾಪ್ತಿಯ ಚನ್ನಿಪುರಮೋಳೆಯಲ್ಲಿ ಕೊಂಡೋತ್ಸವದ ಸೌದೆ ಹೊತ್ತು ತಂದ ಗಾಡಿಗಳಿಗೆ ಶುಕ್ರವಾರ ಸಂಜೆ ಗ್ರಾಮಸ್ಥರು ಪೂಜೆಸಲ್ಲಿಸಿದರು.
ಇದೇ ವೇಳೆ ಮಂಟೇಸ್ವಾಮಿ ಕಂಡಾಯಕ್ಕೂ ಪೂಜೆಸಲ್ಲಿಸಿ ಅಲಂಕೃತ ಸೌದೆಗಾಡಿಗಳನ್ನು ಬರಮಾಡಿಕೊಂಡರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೊಂಡದ ಸೌದೆ ಹೊತ್ತ ಗಾಡಿಗಳ ಮೆರವಣಿಗೆ ನಡೆಯಿತು. ಗ್ರಾಮಸ್ಥರು ಕೊಂಡೋತ್ಸವದ ಅಂಗವಾಗಿ ಮನೆಗಳ ಮುಂದೆ ಬಣ್ಣಬಣ್ಣದ ರಂಗೋಲಿಬಿಡಿಸಿದ್ದರು. ಕೊಂಡದ ಸೌದೆ ಗಾಡಿಮೆರವಣಿಗೆ ಸಂದರ್ಭದಲ್ಲಿ ಗ್ರಾಮದ ಯಜಮಾನರು, ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.