ಪಾಂಡವಪುರ: ಕೊರೊನಾ ಹಿನ್ನೆಲೆ ಸಂಕಷ್ಟದಲ್ಲಿರುವ 50ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸುವ ಮೂಲಕ ತಾಲೂಕು ಕರವೇ ಅಧ್ಯಕ್ಷ ಗಜೇಂದ್ರ ಗೋವಿಂದರಾಜು ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಚಿನಕುರಳಿ ಗ್ರಾಮದ ಬಳಿ ಇರುವ ಜ್ಞಾನ ವಿಕಾಸ ಟ್ರಸ್ಟ್ ಆವರಣದಲ್ಲಿ ತಮ್ಮ ತಂದೆ ಗೋವಿಂದರಾಜು ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಕರವೇ ಮತ್ತು ಜ್ಞಾನ ವಿಕಾಸ ಟ್ರಸ್ಟ್ ಆಶ್ರಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿ ಮಾತನಾಡಿ, ಕೊರೊನಾ ಎರಡನೇ ಅಲೆ ತೀವ್ರಗೊಂಡಿರುವುದರಿಂದ ರಾಜ್ಯ ಸರ್ಕಾರ ಲಾಕ್‌ಡೌನ್ ಹೇರಿರುವ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಕರವೇ ಮತ್ತು ಜ್ಞಾನ ವಿಕಾಸ ಟ್ರಸ್ಟ್ ವತಿಯಿಂದ ಆಹಾರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.
ಆಹಾರ ಕಿಟ್‌ನಲ್ಲಿ ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ತೊಗರಿಬೇಳೆ, ಹೆಸರುಬೇಳೆ, ಕಡ್ಲೇಬೇಳೆ, ಹೆಸರುಕಾಳು, ಕಡಲೆ, ಅಡುಗೆ ಎಣ್ಣೆ, ಸೋಪು, ಸ್ಯಾನಿಟೈಸರ್, ಎನ್-95 ಮಾಸ್ಕ್ ಸೇರಿದಂತೆ ಒಟ್ಟು 17 ಪದಾರ್ಥಗಳು ಸೇರಿವೆ ಎಂದರು.