ಮೈಸೂರು: ಜಿಲ್ಲೆಯ ಕೆ. ಆರ್. ನಗರ ತಾಲೂಕಿನ ದೊಡ್ಡೆ ಕೊಪ್ಪಲು ಗ್ರಾಮದ ಪ್ರಗತಿಪರ ರೈತರಾದ ಹರೀಶ್ ಮತ್ತು ಬಸವರಾಜ್ ಕೇವಲ ೬೦ ದಿನಗಳಲ್ಲಿ ಒಂದು ಎಕರೆಯ ಒಣ ಭೂಮಿಯಲ್ಲಿ ಸಾಗರ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ನ ಸಾಗರ್ ಕಿಂಗ್ ಗೋಲ್ಡ್ ಹೈಬ್ರಿಡ್ ತಳಿಯ ಕಲ್ಲಂಗಡಿಯನ್ನು ಬೆಳೆದು ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯವನ್ನು ಗಳಿಸಿದ್ದಾರೆ. ಮಾಧ್ಯಮದೊಂದಿಗೆ ಹರೀಶ್ ಮಾತನಾಡಿ ಉತ್ತಮ ಇಳುವರಿ ಬರುತ್ತಿದೆ ಬೇರೆ ತಳಿ ಹಣ್ಣುಗಳು ಕಣ್ಣಿಗೆ ಗಾತ್ರದಲ್ಲಿ ದಪ್ಪ ಇದ್ದರೂ ತೂಕದಲ್ಲಿ ಕಡಿಮೆ ಬರುತ್ತಿವೆ ಈ ಹಣ್ಣು ಗಾತ್ರದಲ್ಲಿ ಸಣ್ಣ ಇದ್ದರು ತೂಕದಲ್ಲಿ ಹೆಚ್ಚು ಬರುತ್ತಿವೆ ಒಂದು ಎಕರೆ ಒಣ ಭೂಮಿಯಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ಸಾಗರ್ ಕಿಂಗ್ ಗೋಲ್ಡ್ ತಳಿಯ ಕಲ್ಲಂಗಡಿ ಬೆಳದಿದ್ದೇನೆ ೭೦ ಸಾವಿರ ಖರ್ಚು ಕಳೆದು ೧ ಲಕ್ಷದ ೫೦ ಸಾವಿರ ಆದಾಯ ಬರುತ್ತಿದೆ ಖುಷಿ ತಂದಿದೆ ರೈತರು ತೋಟಗಾರಿಕೆ ಬೆಳೆಗಳತ್ತ ಗಮನಹರಿಸಬೇಕು ಎಂದರು.ಕೆ ಆರ್ ನಗರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎನ್. ಪ್ರಸನ್ನ ಮಾತನಾಡಿ ನಿಖರ ಬೇಸಾಯ ಪದ್ಧತಿಯಲ್ಲಿ ಹನಿ ನೀರಾವರಿ ಅಳವಡಿಸಿಕೊಂಡು ಉತ್ತಮವಾಗಿ ಕಲ್ಲಂಗಡಿ ಬೆಳೆದಿದ್ದಾರೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿ ಒಂದು ಹೆಕ್ಟರಿಗೆ ೨೦ ಸಾವಿರ ಸಹಾಯಧನ ನೀಡಲಾಗುವುದು. ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಕಲ್ಲಂಗಡಿ ಬೆಳೆದ ಪ್ರಗತಿಪರ ರೈತರಾದ ಹರೀಶ್ ಮತ್ತು ಬಸವರಾಜ್ ರವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಂಗಳ ಸೀಡ್ಸ್ ಕರ್ನಾಟಕ ವ್ಯವಸ್ಥಾಪ ನಿರ್ದೇಶಕ ಗೌತಮ್ ಕೃಷ್ಣ, ಮೈಸೂರು ಲಕ್ಷ್ಮಿ ಎಂಟರ್ ಪ್ರೈಸಸ್ ಮಾಲಿಕ ವಿಜಯ ಪ್ರಕಾಶ್, ಸೂರ್ಯ ಆಗ್ರೋ ಸೆಂಟರ್ ನ ಮಂಜು, ನರ್ಸರಿ ಮಾಲಿಕರಾದ ಮಹೇಶ್, ಗಿರೀಶ್, ಯೋಗೇಶ್, ಮೇಲ್ವಿಚಾರಕ ಸುನಿಲ್ ರೈತರು ಹಾಜರಿದ್ದರು.