
ಮೈಸೂರು :೭ ಎಲೆಕ್ಟ್ರಿಕ್ ವೆಹಿಕಲ್ ಕ್ಷೇತ್ರದ ಹೊಸದು ಅನ್ನುವುದಕಿಂತ ಇದರ ಹೆಸರು ಮಾತ್ರ ಎಲ್ಲಾರಿಗೂ ಚಿರಪರಿಚಿತ ಅದುವೇ ಆಗಿನ ಕಾಲದ ಕೈನಿಟಿಕ್ ಸ್ಕೂಟರ್ ಯಾರಿಗೆ ಗೊತ್ತಿಲ ಹೇಳಿ.ಜಮಾನದಲ್ಲಿ ಕೈನಿಟಕ್ ಹವಾ ಜೋರಾಗಿತ್ತು. ಈಗ ಅವರದೇ ಆದ ನೂತನ ಎಲೆಕ್ಟ್ರಿಕ್ ೪ ಹೊಸ ಸ್ಕೂಟರ್ ಬಿಡುಗಡೆ ಇಂದು ಚಾಮರಾಜ ಜೋಡಿ ರಸ್ತೆಯಲ್ಲಿ ಕಾಂಗಟಾನಿ ಆಟೋಮೊಬೆಲ್ ಬಿಡುಗಡೆ ಮಾಡಿದರು.ಬಳಿಕ ಮಾತನಾಡಿದ ಹೀರಾಚಂದ್ ಜೈನ್ ಪ್ರಸುತ್ತ ಕಾಲದಲ್ಲಿ ಜನರು ಪೆಟ್ರೋಲ್ ದರ ಹೆಚ್ಚಾಗಿರುವುದರಿಂದ್ದ ಜನರು ಎಲೆಕ್ಟ್ರಿಕ್ ಸ್ಕೂಟ್‌ರ್ ನತ್ತ ಮುಖ ಮಾಡುತ್ತಿದ್ದಾರೆ.ಆದರಿಂದ್ದ ನಮಗೆ ಖುಷಿಯ ವಿಷಯವೇನೆಂದರೆ ಮೊದಲು ನಮ್ಮ ಕಾಂಗಟಾನಿ ಶೋ ರೂಂ ನಲ್ಲಿ ಕೈನೆಟಿಕ್ ಸ್ಕೂಟರ್ ಶೋರೂಂ ಇತ್ತು ಅದರೆ ಈಗ ಕೆನೆಟಿಕ್ ಕಂಪನಿಯವರದ್ದು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.

ನಂತರ ಇದೆ ಸಂಧರ್ಭದಲ್ಲಿ ಮಾತನಾಡಿದ ಕಾರ್ತಿಕ್ ರೀಜನಲ್ ಮ್ಯಾನೆಜರ್ ಕರ್ನಾಟಕ ಹೆಡ್ ಅವರು ಎಲೆಕ್ಟ್ರಿಕ್ ೪ ಹೊಸ ಸ್ಕೂಟರ್‌ನ ಈಗ ಬಿಡುಗಡೆ ಮಾಡಿದ್ದು ಇದರ ಬೆಲೆ ಎಕ್ಸ ಶೋರೂಂ ರೂ.೭೫.೦೦೦/- ಮತ್ತು ೮೦.೦೦೦/- ರ ಮಿತವ್ಯಯಕಾರಿ ಬೆಲೆ ಹೊಂದಿದೆ. ಜೂಮ್ ಸ್ವಿಂಗ್ ಭಾರತದಲ್ಲಿ ಇ- ಸ್ಕೂಟರ್ ಮೂಲಕ ಯುವ ಮತ್ತು ಕೌಟಂಬಿಕ ಗ್ರಾಹಕರನ್ನು ಉದ್ದೇಶಿಸಿದ್ದು, ಇದು ಪರಿಸರ ಸ್ನೇಹಿ ಅಭ್ಯಾಸದಡೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ.ಕೆನೆಟಿಕ್ ಗ್ರೀನ್ ಪುಣೆಯ ತಯಾರುಘಟಕ ಹೊಂದಿದ್ದು ಇತ್ತೀಚೆಗೆಷ್ಟೆ ಆರಂಬಿಸಿದ. ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಗಳು. ಎಲೆಕ್ಟ್ರಿಕ್ ಮೋಟರ್ ದ್ವಿಚಕ್ರ ವಾಹನಗಳಂತಹ ಅತ್ಯುತ್ತಮವಾದ ಎಲೆಕ್ಟ್ರಿಕ್ ವೆಹಿಕಲ್ ಶ್ರೇಣಿಯನ್ನು ನೀಡುತ್ತಿದೆ.ಕೈನೆಟಿಕ್ ಎಲೆಕ್ಟ್ರಿಕ್ ಸ್ಕೂಟರ್ ಮರ್ಕ್ಯೂರಿ ವೈಟ್, ಕೆಂಪು, ಬಿಳಿ. ಕಪ್ಪು, ನಾಲ್ಕೂ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಸ್ಕೂಟರ್ ೮೨ ಕೆ.ಜಿ ತೂಕದ ಸಾಮಥ್ಯ ಹೊಂದಿದ್ದು ಸ್ಕೂಟರ್‌ನ ೩ ಗಂಟೆ ಬ್ಯಾಟರಿ ಚಾರ್ಜ್ ತೆಗೆದುಕೊಳ್ಳಲಿದ್ದು. ಇದು ಒಂದು ಭಾರಿ ಚಾರ್ಜ್ ಮಾಡಿದರೆ ೧೦೦ ಕಿಮೀವರೆಗೆ ಓಡುತ್ತದೆ, ಎಲೆಕ್ಟ್ರಿಕ್ ಸ್ಕೂಟರ್ ಬ್ರಾಂಡ್ ವಿಶಿಷ್ಟ ವೈಶಿಷ್ಟತೆಗಳ ಶ್ರೇಣಿಯೊಂದಿಗೆ ೩ ವರ್ಷಗಳ ಬ್ಯಾಟರಿ ವಾರಂಟಿ ನೀಡುತ್ತದೆ. ಹಾಗೂ ಇದರ ವಿಶೇಷತೆವೆಂದರೆ ಎಲ್.ಇ.ಡಿ ಹೆಡ್ ಲ್ಯಾಂಪ್ ಹೊಳಗೊಂಡಿದೆ. ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಅರವಿಂದ್ ಬೀಮಣ್ಣ ಗೌಡ ಪಾಟೀಲ್ ಹೀರಾಚಂದ್ ಜೈನ್ ಮುಂತಾದವರು ಉಪಸ್ಥಿತರಿದ್ದರು,