ಬೆಂಗಳೂರು : ಕಿಚ್ಚ ಸುದೀಪ್ ಅಭಿಮಾನಿಗಳ ಪಾಲಿಗೆ ಇದೊಂದು ಕಹಿ ಸುದ್ದಿ. ಹೌದು ಅಭಿಮಾನಿಗಳು ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಗಾಗಿ ಕಾತರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಚಿತ್ರದ ಬಿಡುಗಡೆಯನ್ನು ಚಿತ್ರ ತಂಡ ಮುಂದೂಡಿದೆ.

ಎಲ್ಲವು ಅಂದುಕೊಂಡಂತೆ ನಡೆದರೆ ಫೆಬ್ರವರಿ ೨೪ ರಂದು, ವಿಕ್ರಾಂತ ರೋಣ ತೆರೆಕಾಣಬೇಕಿತ್ತು. ಆದರೆ, ಹಿನ್ನೆಲೆಯಲ್ಲಿ ಫೆಬ್ರವರಿ ೨೪ ರಂದು ಚಿತ್ರವನ್ನು ಬಿಡುಗಡೆ ಮಾಡದಿರಲು ಚಿತ್ರ ತಂಡ ತಿರ್ಮಾನ ಮಾಡಿದೆ. ಈ ಬಗ್ಗೆ ಚಿತ್ರ ತಂಡ ಅಧಿಕೃತ ಪ್ರಕಟಣೆ ನೀಡಿದೆ. ಪ್ರಸ್ತುತ ಕೋವಿಡ್
ಪರಿಸ್ಥಿತಿ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಾವಳಿ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೆ ಪರಿಸ್ಥಿತಿ ಸರಿ ಇಲ್ಲದ ಕಾರಣ ಎಂದು ಚಿತ್ರ ತಂಡ ಹೇಳಿದೆ. ಅಲ್ಲದೆ, ಭಾರತದ ಮೊದಲ ಅಡ್ವೆಂಚರ್ ಹಿರೋನನ್ನು ಪರಿಚಯಿಸುವ ಹೊಸ ದಿನಾಂಕವನ್ನು ಶೀಘ್ರವೇ ಪ್ರಕಟಿಸುವುದಾಗಿಯೂ ಹೇಳಿದೆ.

ಈ ಹಿಂದೆ ಫೆಬ್ರವರಿ ೨೪ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಅಷ್ಟು ಮಾತ್ರವಲ್ಲ, ೫೦-೫೦ ಪರಸೆಂಟ್ ಸೀಟು ಭರ್ತಿಗೆ ಅವಕಾಶವಿದ್ದರೂ ಪರವಾಗಿಲ್ಲ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ, ಇದೀಗ ಸಿನಿಮಾ ರಿಲೀಸ್ ವಿಕ್ರಾಂತ್ ರೋಣ ವಿಚಾರದಲ್ಲಿ ಮನಸ್ಸು ಬದಲಾಯಿಸಿದೆ
ಜಾಕ್ಮಂಜು ನಿರ್ಮಾಣದ ಈ ಚಿತ್ರಕ್ಕೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಸುದೀಪ್ ಜೊತೆ ನಿರೂಪ್ ಭಂಡಾರಿ,ನಟನೆ ಮಾಡಿದ್ದು ನೀತಾ ಅಶೋಕ್, ರವಿಶಂಕರ್ ಗೌಡ ಮಧುಸೂದನ್ ರಾವ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಒಂದು ಹಾಡಿನಲ್ಲಿ ಮೋಡಿ ಮಾಡಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.
ಬಹು ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಕ್ರಾಂತ ರೋಣ ಚಿತ್ರ ರಸಿಕರಲ್ಲಿ ಭಾರೀ ನಿರೀಕ್ಷೆಯನ್ನೇ ಮೂಡಿಸಿದೆ. ಅಲ್ಲದೆ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.