ಗುಂಡ್ಲುಪೇಟೆ: ವಿಧಾನಸಭಾ ಕ್ಷೇತ್ರದ ಕೆಂಗಾಕಿ ಗ್ರಾಮದ ಹಲವು ಮಂದಿ ಬಿಜೆಪಿ ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್‍ಪ್ರಸಾದ್ ನಾಯಕತ್ವದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.
ಕೆಂಗಾಕಿ ಗ್ರಾಮದ ಬಿಜೆಪಿ ಮುಖಂಡರಾದ ನಂಜುಂಡನಾಯಕ, ನಂಜನಾಯಕ, ನಾಗೇಶ್, ಮಾದೇಶ್, ಜವರನಾಯಕ, ನಿಂಗನಾಯಕ, ಚನ್ನರಾಜು, ನಾಗರಾಜನಾಯಕ, ರೇವನಾಯಕ, ಸಿದ್ದರಾಜು, ಬಂಗಾರನಾಯಕ, ಸಿದ್ದನಾಯಕ, ವಜ್ರರಂಗನಾಯಕ, ಮಂಜು, ಮಹೇಶ್, ಬಂಗಾರ ಚಾರಿ, ಆಲೂರನಾಯಕ, ನಿಂಗಶೆಟ್ಟಿ, ಮೂರ್ತಿ, ಮಹದೇವನಾಯಕ ಸೇರಿದಂತೆ ಹಲವರು ಬಿಜೆಪಿ ತ್ಯಜಿಸಿದರು.
ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಆಗಮಿಸಿದ ಹಲವು ಮುಖಂಡರನ್ನು ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್‍ಪ್ರಸಾದ್ ಸ್ವಾಗತಿಸಿ ಪಕ್ಷದ ಶಲ್ಯ ಹಾಕಿ ಬರಮಾಡಿಕೊಂಡರು.
ಈ ಸಮಯದಲ್ಲಿ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಹಾಗು ಜಿಪಂ ಮಾಜಿ ಸದಸ್ಯ ಕೆರೆಹಳ್ಳಿ ನವೀನ್, ಗ್ರಾಪಂ ಸದಸ್ಯರಾದ ಸೋಮನಾಯಕ, ಬಂಗಾರನಾಯಕ, ಗ್ರಾಪಂ ಮಾಜಿ ಸದಸ್ಯ ತಿರುಪತಿನಾಯಕ, ಸಾಗಡೆ ಗ್ರಾಮದ ಕಾಂಗ್ರೆಸ್ ಮುಖಂಡರಾದ ಪಟೇಲ್ ಸುರೇಶ್, ನಟರಾಜು ಹಾಗು ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.