ಮೈಸೂರು: ನಾಡಪ್ರಭು ಕೆಂಪೇಗೌಡರ 512ನೇಯ ಜಯಂತಿಯನ್ನು ಮೈಸೂರಿನ ದೇವರಾಜ ಅರಸ್ ರಸ್ತೆಯಲ್ಲಿ ಆಚರಿಸಲಾಯಿತು.

ಮಾಜಿ ನಗರ ಪಾಲಿಕೆ ಸದಸ್ಯರಾದ ನಾಗಭೂಷಣ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನವೀನ್ ಕುಮಾರ್, ಬಿಜೆಪಿಯ ನಗರ ಉಪಾಧ್ಯಕ್ಷರು ಹರ್ಷಾ ಅವರು  ಕೆಂಪೇಗೌಡ ರವರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡಿ ನಮನ  ಸಲ್ಲಿಸಿದರು.

ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ನವೀನ್ ಕುಮಾರ್ ಮಾತನಾಡಿ ಸಿಲಿಕಾನ್​​ ಸಿಟಿ, ಗಾರ್ಡನ್​​ ಸಿಟಿ, ಐಟಿ ಕ್ಷೇತ್ರದ ಪ್ರಮುಖ ಸ್ಥಳ, ಇದೆಲ್ಲದರಗಿಂತ ರಾಜ್ಯದ ರಾಜಧಾನಿ ಬೆಂಗಳೂರು ಇಂದು ವಿಶ್ವದಾದ್ಯಂತ ಹೆಸರು ಮಾಡಿದೆ. ಇಂತಹ ನಗರದ ನಿರ್ಮಾಣಕರ್ತರು ಕೆಂಪೇಗೌಡರು ಎಂದು ಹೇಳಿದರು.

ಹಿರಿಯ ಕೆಂಪೇಗೌಡರು ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು, ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೇ ವಿಶ್ವಮಾನ್ಯ ಹಾಗೂ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ   ಪರಮೇಶ್ ಗೌಡ್ರು, ಸತೀಶ್ ಗೌಡರು, ಹರೀಶ್ ಗೌಡ,  ಪ್ರಮೋದ್ ಗೌಡ, ನಂಜುಂಡಿ, ಮಂಜುನಾಥ್, ಯೋಗಿ, ನವೀನ್ ಮುಂತಾದವರು ಇದ್ದರು.

By admin